ಭಾರತದ ನಂತರ ಜಪಾನ್ ನಲ್ಲಿ 'ಬಾಹುಬಲಿ' ಅಬ್ಬರಿಸಲು ಸಜ್ಜು
ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಸಿನಿಮಾ 'ಬಾಹುಬಲಿ ದಿ ಕನ್ ಕ್ಲೂಷನ್' ಈಗ ಜಪಾನ್ ನಲ್ಲಿ ಅಬ್ಬರಿಸಲು ಸಜ್ಜಾಗಿದೆ. ಡಿಸೆಂಬರ್ 29 ರಂದು ಜಪಾನ್ ನಾಡಿನಲ್ಲಿ ಬಾಹುಬಲಿ ಪಾರ್ಟ್ 2 ಮಿಂಚಲಿದೆ. ಜಪಾನ್ ಸೆನ್ಸಾರ್ ಮಂಡಳಿಯಲ್ಲಿ ಚಿತ್ರಕ್ಕೆ 'ಜಿ' ಪ್ರಮಾಣಪತ್ರ ನೀಡಿದೆ. ಜಪಾನ್ ನಲ್ಲಿ 'ಜಿ' ಪ್ರಮಾಣಪತ್ರ ಅಂದ್ರೆ ಭಾರತದ 'ಯು' ಪ್ರಮಾಣಪತ್ರಕ್ಕೆ ಸಮ.
ಜಪಾನ್ ನಲ್ಲಿ ಭಾರತೀಯ ಚಿತ್ರಗಳಿಗೆ ಉತ್ತಮ ಮಾರುಕಟ್ಟೆ ಇದೆ. ಹೀಗಾಗಿಯೇ ಭಾರತದ ಹಲವು ಚಿತ್ರಗಳು ಜಪಾನ್ ನಲ್ಲಿ ತೆರೆಕಂಡು ಕಲೆಕ್ಷನ್ ನಲ್ಲಿ ದಾಖಲೆ ಮಾಡಿದೆ. ಈಗ ಬಾಹುಬಲಿ ಸಿನಿಮಾ ತೆರೆಕಾಣಲು ಸಿದ್ದವಾಗಿದ್ದು, ಬಾಕ್ಸ್ ಆಫೀಸ್ ಮತ್ತಷ್ಟು ಪರಿಣಾಮ ಬೀರಲಿದೆ.

ಕಳೆದ ಏಪ್ರಿಲ್ ತಿಂಗಳು 28 ರಂದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆಯಾಗಿದ್ದ 'ಬಾಹುಬಲಿ ದಿ ಕನ್ ಕ್ಲೂಷನ್', ಬಾಕ್ಸ್ ಅಫೀಸ್ ನಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಸುಮಾರು 1700 ಕೋಟಿ ಗಳಿಸುವ ಮೂಲಕ ಭಾರತದ ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ ಎನಿಸಿಕೊಂಡಿದೆ. ಮೊದಲು ಸ್ಥಾನದಲ್ಲಿ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರವಿದೆ. ಈಗ ಜಪಾನ್ ಬಾಕ್ಸ್ ಆಫೀಸ್ ನಲ್ಲಿ ಬಾಹುಬಲಿ ಮತ್ತಷ್ಟು ಬಿಸಿನೆಸ್ ಮಾಡಲಿದ್ದು, ದಂಗಲ್ ಚಿತ್ರದ ದಾಖಲೆ ಮುರಿಯುತ್ತಾ ಎಂಬ ಕುತೂಹಲ ಕಾಡಿದೆ.
ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ತಮನ್ನ, ರಮ್ಯಾಕೃಷ್ಣನ್, ಸತ್ಯರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದರು. 'ಬಾಹುಬಲಿ' ಮೊದಲ ಭಾಗ ಎರಡು ವರ್ಷದ ಹಿಂದೆ ಬಿಡುಗಡೆಯಾಗಿತ್ತು. ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ 'ಬಾಹುಬಲಿ' ಸೀರಿಸ್ ಮೂಡಿ ಬಂದಿತ್ತು.


Click it and Unblock the Notifications











