ಭಾರತ ಚಿತ್ರ ಜಗತ್ತಿಗೆ 'ಬಾಹುಬಲಿ ನಂ.1', ಹಳೆ ದಾಖಲೆಗಳೆಲ್ಲ ಪುಡಿ.. ಪುಡಿ!

'ಬಾಹುಬಲಿ'...ಐದು ವರ್ಷಗಳಿಂದ ಈ ಹೆಸರು ಭಾರತೀಯರ ದಿನನಿತ್ಯದ ಬದುಕಿನಲ್ಲಿ ಬೆರತು ಹೋಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾವ ಸಿನಿಮಾ ಕೂಡ ಮಾಡದ ದೊಡ್ಡ ಸಾಧನೆಯನ್ನ 'ಬಾಹುಬಲಿ-2' ಮಾಡಿದೆ. [ಪ್ರಭಾಸ್ ಮತ್ತು ಅಮೀರ್ ನಡುವೆ ಮೆಗಾಫೈಟ್.! ಭಾರತದ ನಂ.1 ನಟ ಯಾರು? ]

'ಬಾಹುಬಲಿ 2' ಸಿನಿಮಾ ರಿಲೀಸ್ ಆಗುವುದಕ್ಕೂ ಮುಂಚೆ ಈ ಸಿನಿಮಾ ದೊಡ್ಡ ದಾಖಲೆಯನ್ನ ಮಾಡುತ್ತದೆ ಅಂತ ಒಂದು ಅಂದಾಜು ಇತ್ತು ನಿಜ. ಆದರೆ, ಆ ಅಂದಾಜುಗಳನ್ನ ಮೀರಿಸಿ ದಿನೇ ದಿನೇ ಹೊಸ ದಾಖಲೆಗಳನ್ನ ಸಿನಿಮಾ ನಿರ್ಮಿಸುತ್ತಿದೆ. ಸದ್ಯ 'ಬಾಹುಬಲಿ' '1000 ಕೋಟಿ' ಸರದಾರನಾಗಿದ್ದಾನೆ.['ಬಾಹುಬಲಿ-3' ಬಗ್ಗೆ ರಾಜಮೌಳಿ ಚಿಂತನೆ: ಕಥೆ ಏನಿರಬಹುದು? ]

ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಸೌತ್ ಚಿತ್ರರಂಗದ ಸಿನಿಮಾವೊಂದು ತಲೆ ಎತ್ತಿನಿಂತಿದೆ. 'ಇಂಡಿಯನ್ ಸಿನಿಮಾ ಅಂದ್ರೆ ಬಾಲಿವುಡ್, ಬಾಲಿವುಡ್ ಅಂದ್ರೆ ಇಂಡಿಯನ್ ಸಿನಿಮಾ' ಎನ್ನುವ ಹಳೆ ಮಾತನ್ನ ಮತ್ತೆ ಯಾರೂ ಹೇಳದಂತೆ ಈ ಸಿನಿಮಾ ದೊಡ್ಡ ಇತಿಹಾಸವನ್ನ ತನ್ನ ಹೆಸರಿಗೆ ಬರೆದುಕೊಂಡಿದೆ.['ಬಾಹುಬಲಿ' ಅಬ್ಬರಕ್ಕೆ ಭಾರತೀಯ ಬಾಕ್ಸ್ ಆಫೀಸ್ ಖಲ್ಲಾಸ್!]

ಯಾವ ಯಾವ ಸಿನಿಮಾಗಳನ್ನ ಹಿಂದಿಕ್ಕಿ 'ಬಾಹುಬಲಿ-2' ಈಗ ಭಾರತ ಚಿತ್ರ ಜಗತ್ತಿಗೆ 'ನಂ 1' ಆಗಿದೆ ಅಂತ ಮುಂದೆ ಓದಿ...

'1000' ಕೋಟಿಯ ಸಾಮ್ರಾಜ್ಯ

'1000' ಕೋಟಿಯ ಸಾಮ್ರಾಜ್ಯ

'ರಾಜಮೌಳಿ' ರವರ 'ಬಾಹುಬಲಿ 2' ಎನ್ನುವ ಮಹಾ ದೃಶ್ಯಕಾವ್ಯ ನೋಡಿ, ಜನ 'ಇದೊಂದು ಸಿನಿಮಾ ಅಲ್ಲ, ಅದ್ಬುತ' ಅಂತ ಹೇಳುತ್ತಿದ್ದಾರೆ. ಸದ್ಯ 'ಬಾಹುಬಲಿ 2' ಭಾರತ ಚಿತ್ರರಂಗದ ಅತಿ ದೊಡ್ಡ ಸಿನಿಮಾವಾಗಿ ಹೊರಹೊಮ್ಮಿದ್ದು, 1000 ಕೋಟಿ ಕಲೆಕ್ಷನ್ ಮಾಡಿದೆ.[ರಾಜಮೌಳಿ 'ಬಾಹುಬಲಿ'ಯಿಂದ ಅಮೀರ್ 'ದಂಗಲ್' ದಾಖಲೆ ಬ್ರೇಕ್!]

ಹೆಜ್ಜೆ ಹೆಜ್ಜೆಗೂ 'ದಾಖಲೆ'

ಹೆಜ್ಜೆ ಹೆಜ್ಜೆಗೂ 'ದಾಖಲೆ'

'ಬಾಹುಬಲಿ 2' ಸಿನಿಮಾ ರಿಲೀಸ್ ಆದ ಮೊದಲ ದಿನ 217 ಕೋಟಿ ಗಳಿಸಿ ಎಲ್ಲರನ್ನ ಬೆರಗುಗೊಳಿಸಿತ್ತು. ಈ ಸಿನಿಮಾ 500 ಕೋಟಿ ಗಳಿಸುವುದಕ್ಕೆ ತೆಗೆದುಕೊಂಡಿದ್ದು ಕೇವಲ ಮೂರೇ ಮೂರು ದಿನ. ಸದ್ಯ ಬಾಕ್ಸ್ ಆಫೀಸ್ ನಲ್ಲಿ ನಾಗಾಲೋಟ ದಿಂದ ಸಾಗುತ್ತಿರುವ 'ಬಾಹುಬಲಿ 2' ಈಗ 1000 ಕೋಟಿ ಗಳಿಸಿ, ಭಾರತದ ಬಾಕ್ಸ್ ಆಫೀಸ್ ನ ಅಧಿಪತಿಯಾಗಿದ್ದಾನೆ.

ಎರಡನೇ ಸ್ಥಾನದಲ್ಲಿ 'ಅಮೀರ್'

ಎರಡನೇ ಸ್ಥಾನದಲ್ಲಿ 'ಅಮೀರ್'

ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 'ಬಾಹುಬಲಿ 2' ಬರುವುದಕ್ಕಿಂತ ಮುಂಚೆ ಅಮೀರ್ ಖಾನ್ ಅವರ 'ಪಿಕೆ' ಚಿತ್ರ ಮೊದಲ ಸ್ಥಾನದಲ್ಲಿ ಮತ್ತು 'ದಂಗಲ್' ಸಿನಿಮಾ ಎರಡನೇ ಸ್ಥಾನದಲ್ಲಿತ್ತು. ಈ ಎರಡು ಚಿತ್ರಗಳ ದಾಖಲೆಯನ್ನು ಬರಿ 9 ದಿನದಲ್ಲಿ ರಾಜಮೌಳಿ ಸಿನಿಮಾ ಮುರಿದಿದೆ.['ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ ]

ಟಾಪ್ 10ನಲ್ಲಿ ಅಮೀರ್ 4 ಸಿನಿಮಾಗಳು

ಟಾಪ್ 10ನಲ್ಲಿ ಅಮೀರ್ 4 ಸಿನಿಮಾಗಳು

ಅಮೀರ್ ಖಾನ್ ರವರ 4 ಸಿನಿಮಾಗಳು ಬಾಕ್ಸ್ ಆಫೀಸ್ ನ ಟಾಪ್ 10 ಪಟ್ಟಿಯಲ್ಲಿದೆ. 'ಪಿ.ಕೆ', 'ದಂಗಲ್', 'ಧೂಮ್-3', '3 ಈಡಿಯೆಟ್ಸ್' ಸಿನಿಮಾಗಳು ಅತಿ ಹೆಚ್ಚು ಹಣ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿದೆ.[ಬಾಲಿವುಡ್ ಗೆ ಅಮೀರ್ ಖಾನ್ ಮಗಳ ಎಂಟ್ರಿ? ]

5 ಸ್ಥಾನದಲ್ಲಿ 'ಸಲ್ಮಾನ್'

5 ಸ್ಥಾನದಲ್ಲಿ 'ಸಲ್ಮಾನ್'

'ಸಲ್ಮಾನ್ ಖಾನ್' ನಟನೆಯ 'ಭಜರಂಗಿ ಭಾಯಿಜಾನ್' ಸಿನಿಮಾ 585 ಕೋಟಿ ಗಳಿಸಿದ್ದು ಟಾಪ್ 5 ನಲ್ಲಿ ಸ್ಥಾನ ಪಡೆದಿದೆ.[ಚೀನಾ-ಭಾರತದ ಯುದ್ಧ ಇತಿಹಾಸದ 'ಟ್ಯೂಬ್‌ಲೈಟ್' ಟೀಸರ್ ಔಟ್]

ಕುಸಿಯುತ್ತಿದೆ 'ಕಿಂಗ್ ಖಾನ್' ಸ್ಥಾನ

ಕುಸಿಯುತ್ತಿದೆ 'ಕಿಂಗ್ ಖಾನ್' ಸ್ಥಾನ

'ಶಾರೂಖ್' ಖಾನ್ ಸಿನಿಮಾಗಳು ಇತ್ತೀಚೆಗೆ ಟುಸ್ ಪಟಾಕಿಯಾಗುತ್ತಿದೆ. 423 ಕೋಟಿ ಗಳಿಸಿರುವ 'ಚೆನೈ ಎಕ್ಸಪ್ರೆಸ್' ಚಿತ್ರದ ಮೂಲಕ ಸದ್ಯ 'ಶಾರೂಖ್ ಖಾನ್' 9ನೇ ಸ್ಥಾನದಲ್ಲಿದ್ದಾರೆ.

ಸೌತ್ ಸಿನಿರಂಗಕ್ಕೆ ಹೆಮ್ಮೆ

ಸೌತ್ ಸಿನಿರಂಗಕ್ಕೆ ಹೆಮ್ಮೆ

ದಕ್ಷಿಣ ಭಾರತದ ಸಿನಿಮಾವೊಂದು ಇಡೀ ಭಾರತ ಚಿತ್ರರಂಗದಲ್ಲೇ ಅತಿ ದೊಡ್ಡ ಸಿನಿಮಾವಾಗುವುದು ತಮಾಷೆಯ ಮಾತಲ್ಲ. 'ಬಾಹುಬಲಿ 2' ಈ ಸಾಧನೆ ಮಾಡಿದ್ದು ಸೌತ್ ಸಿನಿರಂಗದ ಹೆಮ್ಮೆ.

More from Filmibeat

English summary
Telugu movie 'Baahubali 2' becomes No.1 Indian movie in box-office history. 'Baahubali-2' crosses 1000 crore in just 9 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X