»   » 'ಬಾಹುಬಲಿ 2' ನೋಡಿ ರಾಜಮೌಳಿ ಬೆನ್ನುತಟ್ಟಿದ ಸೂಪರ್ ಸ್ಟಾರ್ ರಜನಿ

'ಬಾಹುಬಲಿ 2' ನೋಡಿ ರಾಜಮೌಳಿ ಬೆನ್ನುತಟ್ಟಿದ ಸೂಪರ್ ಸ್ಟಾರ್ ರಜನಿ

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದಲ್ಲಿ ಮೊದಲ ದಿನದ ಕಲೆಕ್ಷನ್ ನಲ್ಲೇ 100 ಕೋಟಿ ರೂ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದ ಚಿತ್ರ 'ಬಾಹುಬಲಿ - ದಿ ಕನ್ ಕ್ಲೂಶನ್'. ಈ ಚಿತ್ರವು ವಿಶ್ವದಾದ್ಯಂತ ಮೆಚ್ಚುಗೆ ಪಡೆದಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.['ಬಾಹುಬಲಿ 2' ನೋಡಿ ಭಾರತೀಯ ಸಿನಿಮಾದ ಕಿಂಗ್ ಎಂದ ಪ್ರೇಕ್ಷಕರು]

'ಬಾಹುಬಲಿ- ದಿ ಕನ್ ಕ್ಲೂಶನ್' ಚಿತ್ರ ನೋಡಿದ ಪ್ರೇಕ್ಷಕರು ಭಾರತ ಸಿನಿಮಾದ ಕಿಂಗ್ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನೂ ಹಲವರು 'ಬಾಹುಬಲಿ 2' ಚಿತ್ರವನ್ನು 'ಬಾಹುಬಲಿ -ದಿ ಬಿಗಿನ್ನಿಂಗ್' ಚಿತ್ರಕ್ಕಿಂತ ಮೂರು ಪಟ್ಟು ದೊಡ್ಡ ಸಿನಿಮಾ, ಮೈಂಡ್ ಬ್ಲೋಯಿಂಗ್ ಎಂದು ಹೊಗಳಿದ್ದರು. ಈಗ ಚಿತ್ರವನ್ನು ಸೂಪರ್ ಸ್ಟಾರ್ ರಜನಿಕಾಂತ್ ರವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್.ಎಸ್.ರಾಜಮೌಳಿ ಅವರ 5 ವರ್ಷದ ಕನಸಿನ ಕೂಸು 'ಬಾಹುಬಲಿ 2' ಚಿತ್ರವನ್ನು ನೋಡಿ ತಲೈವಾ ರಜನಿಕಾಂತ್ ಏನಂದ್ರು? ತಿಳಿಯಲು ಮುಂದೆ ಓದಿರಿ.

'ಬಾಹುಬಲಿ 2' ಮಾಸ್ಟರ್ ಪೀಸ್

ಕನ್ನಡ ಮೂಲದ ತಮಿಳು ನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ರವರು ಚಿತ್ರವನ್ನು ವೀಕ್ಷಿಸಿ, 'ಬಾಹುಬಲಿ 2... ಭಾರತೀಯ ಹೆಮ್ಮೆಯ ಸಿನಿಮಾ' ಎಂದು ಮಾಸ್ಟರ್ ಪೀಸ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.['ಬಾಹುಬಲಿ-2' ಕಲೆಕ್ಷನ್: ಬಾಕ್ಸ್ ಆಫೀಸ್ ನಲ್ಲಿ ಹೊಸ 'ಮೌಳಿ'ಗಲ್ಲು.!]

ನಿರ್ದೇಶಕರಿಗೆ ಸೂಪರ್ ಸ್ಟಾರ್ ಸೆಲ್ಯೂಟ್

ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್ ರವರು ' ದೇವರ ಮಗು ಎಸ್.ಎಸ್.ರಾಜಮೌಳಿ ಮತ್ತು ಅವರ ತಂಡಕ್ಕೆ ನನ್ನ ಸೆಲ್ಯೂಟ್!!!' ಎಂದು ಸಹ ಟ್ವೀಟಿಸಿದ್ದಾರೆ.['ಬಾಹುಬಲಿ'ಗಿಂತ ರಾಜಮೌಳಿಗೆ ಭೇಷ್ ಎನ್ನುತ್ತಿರುವ ವಿಮರ್ಶಕರು.!]

ದೇವರೇ ಆಶೀರ್ವಾದ ಮಾಡಿದಂತಾಯಿತು!

ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್ ರವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಎಸ್.ಎಸ್.ರಾಜಮೌಳಿ, 'ತಲೈವಾ..... ನನಗೆ ದೇವರೇ ನೇರವಾಗಿ ಬಂದು ಆಶೀರ್ವಾದ ಮಾಡಿದಂತೆ ಫೀಲ್ ಆಗುತ್ತಿದೆ. ಇದಕ್ಕಿಂತ ನನಗೆ ಬೇರೇನು ದೊಡ್ಡದಿಲ್ಲ. ನಮಸ್ಕಾರಗಳು' ಎಂದಿದ್ದಾರೆ.

'ಬಾಹುಬಲಿ 2' ಗೆ ಬಿಗ್ ಸ್ಟಾರ್ ಗಳ ಪ್ರಶಂಸೆ

'ಬಾಹುಬಲಿ 2' ಸಿನಿಮಾವನ್ನು ನೋಡಿದ ಸಿನಿಮಾ ಕ್ಷೇತ್ರದ ಹಲವು ದೊಡ್ಡ ದೊಡ್ಡ ಸ್ಟಾರ್ ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿರ್ದೇಶಕ ಶಂಕರ್ ಷನ್ಣುಗನ್, ನಾಗಾರ್ಜುನ ಅಕ್ಕಿನೇನಿ, ಅಖಿಲ್ ಅಕ್ಕಿನೇನಿ, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ರವರು ಚಿತ್ರವನ್ನು ಪ್ರಶಂಸಿಸಿದ್ದಾರೆ.

'ಬಾಹುಬಲಿ 2' ನೋಡಿ ಪ್ರಿಯಾಂಕ ಚೋಪ್ರಾ ಹೇಳಿದ್ದೇನು?

"ಎಸ್.ಎಸ್.ರಾಜಮೌಳಿ ಅವರ ಮೊತ್ತೊಂದು ಚಮತ್ಕಾರಕ್ಕೆ ಅಭಿನಂದನೆಗಳು. ಭಾರತ ಸಿನಿಮಾ ಕ್ಷೇತ್ರಕ್ಕೆ ನಿಮ್ಮ ಕೊಡುಗೆಯನ್ನು ಹೀಗೆ ಮುಂದುವರೆಸುತ್ತಿರಿ"- ಪ್ರಿಯಾಂಕ ಚೋಪ್ರಾ, ಬಾಲಿವುಡ್ ನಟಿ

ನಾನು ಇದರಿಂದ ಹೊರಬರುತ್ತಿರಲಿಲ್ಲ

"ನಾನೇನಾದರು ಬಾಹುಬಲಿ 2 ಸಾಮ್ರಾಜ್ಯದಲ್ಲಿ ಇದ್ದಿದ್ದರೇ ಎಂದಿಗೂ ಆ ಮಹಾಕಾವ್ಯದಿಂದ ಹೊರಬರುವ ಮನಸ್ಸು ಮಾಡುತ್ತಿರಲಿಲ್ಲ" -ಸೈನಾ ನೆಹ್ವಾಲ್, ಭಾರತ ಬ್ಯಾಡ್ಮಿಂಟನ್ ಆಟಗಾರ್ತಿ

English summary
Superstar Rajinikanth has heaped praise on filmmaker SS Rajamouli's Baahubali: The Conclusion on Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada