ಇಂದು ರಾತ್ರಿಯಿಂದಲೇ ಕರ್ನಾಟಕದಲ್ಲಿ 'ಬಾಹುಬಲಿ-2' ಪ್ರದರ್ಶನ: ಟಿಕೆಟ್ ಬೆಲೆ ಅಬ್ಬಬ್ಬಾ.!

By Harshitha

ಕರ್ನಾಟಕದಲ್ಲಿ 'ಬಾಹುಬಲಿ-2' ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ತಡ... ಕರುನಾಡಿನ ಮೂಲೆ ಮೂಲೆಯಲ್ಲೂ 'ಬಾಹುಬಲಿ' ಅಬ್ಬರ ಜೋರಾಗಿದೆ.

ಈಗಾಗಲೇ ಜಗಜ್ಜಾಹೀರಾಗಿರುವ ಪ್ರಕಾರ, ಏಪ್ರಿಲ್ 28.. ಅಂದ್ರೆ ನಾಳೆ (ಶುಕ್ರವಾರ) 'ಬಾಹುಬಲಿ-2' ಬಿಡುಗಡೆ ಆಗಬೇಕು. ಆದ್ರೆ, ನಾಳೆ ತುಂಬಾ ತಡ ಆಗಿರಬೇಕೇನೋ.! ಅದಕ್ಕೆ ಇಂದು ರಾತ್ರಿಯೇ ಕರ್ನಾಟಕದಲ್ಲಿ 'ಬಾಹುಬಲಿ-2' ರಿಲೀಸ್ ಆಗುತ್ತಿದೆ.['ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!]

ಬೆಂಗಳೂರಿನ ಅನೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಇಂದು ರಾತ್ರಿಯೇ 'ಬಾಹುಬಲಿ-2' ಪ್ರದರ್ಶನಗೊಳ್ಳಲಿದೆ. ನೀವು ನಂಬಲ್ಲ ಅಂದ್ರೆ, ಪೂರ್ತಿ ವರದಿ ಓದಿರಿ....

ರಾತ್ರಿಯಿಂದಲೇ 'ಬಾಹುಬಲಿ' ಆರ್ಭಟ ಶುರು

ರಾತ್ರಿಯಿಂದಲೇ 'ಬಾಹುಬಲಿ' ಆರ್ಭಟ ಶುರು

ಇಂದು ರಾತ್ರಿಯಿಂದಲೇ ಬೆಂಗಳೂರಿನಲ್ಲಿ 'ಬಾಹುಬಲಿ-2' ಆರ್ಭಟ ಆರಂಭವಾಗಲಿದೆ. ಬೆಂಗಳೂರಿನ ಬಹುತೇಕ ಎಲ್ಲ ಮಲ್ಟಿಪ್ಲೆಕ್ಸ್ ಗಳಲ್ಲೂ ಇಂದು ರಾತ್ರಿಯಿಂದಲೇ 'ಬಾಹುಬಲಿ-2' ಪ್ರದರ್ಶನ ಏರ್ಪಡಿಸಲಾಗಿದೆ.[ಏಪ್ರಿಲ್ 28ರಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ.!]

ಎಷ್ಟು ಸ್ಕ್ರೀನ್ ಬೇಕು ಕೇಳಿ....

ಎಷ್ಟು ಸ್ಕ್ರೀನ್ ಬೇಕು ಕೇಳಿ....

ಬಿನ್ನಿಪೇಟೆಯ ಸಿನಿಪೊಲಿಸ್, ರಾಯಲ್ ಮೀನಾಕ್ಷಿ ಮಾಲ್, ವೈಷ್ಣವಿ ಸಫೈಯರ್ ಮಾಲ್, ಗರುಡ ಮಾಲ್, ಎಲಿಮೆಂಟ್ಸ್ ಮಾಲ್, ಗರುಡ ಸ್ವಾಗತ್ ಮಾಲ್, ಲಿಡೋ ಮಾಲ್, ಮಂತ್ರಿ ಮಾಲ್, ಫೋರಂ ಮಾಲ್ ಸೇರಿದಂತೆ ಬೆಂಗಳೂರಿನ ಬಹುತೇಕ ಮಾಲ್ ಗಳಲ್ಲಿ ಇಂದು ರಾತ್ರಿ 9.50 ಹಾಗೂ 10 ಗಂಟೆಗೆ 'ಬಾಹುಬಲಿ-2' ಶೋ ಇದೆ.

ಯಾವ ಭಾಷೆಯಲ್ಲಿ ಬೇಕು ಕೇಳಿ....

ಯಾವ ಭಾಷೆಯಲ್ಲಿ ಬೇಕು ಕೇಳಿ....

'ಬಾಹುಬಲಿ-2' ತೆಲುಗು ವರ್ಷನ್ ಮಾತ್ರ ಬೆಂಗಳೂರಿನಲ್ಲಿ ಬಿಡುಗಡೆ ಆಗುತ್ತಿದೆ ಅಂತ ಭಾವಿಸಿದ್ರೆ, ನಿಮ್ಮ ಊಹೆ ತಪ್ಪು. ಯಾಕಂದ್ರೆ, 'ಬಾಹುಬಲಿ-2' ಚಿತ್ರದ ತೆಲುಗು, ತಮಿಳು ಹಾಗೂ ಹಿಂದಿ ವರ್ಷನ್ ಗಳು ಕರ್ನಾಟಕದಲ್ಲಿ ರಿಲೀಸ್ ಆಗುತ್ತಿದೆ.['ಬಾಹುಬಲಿ' ಚಿತ್ರಕ್ಕಿಂತ 'ಬಾಹುಬಲಿ-2' ಸೂಪರ್ ಆಗಿದ್ಯಂತೆ.! ಹೇಳಿದವರ್ಯಾರು ಗೊತ್ತೇ.?]

ತೆಲುಗು ವರ್ಷನ್ ಗೆ ಅತಿ ಹೆಚ್ಚು ಸ್ಕ್ರೀನ್ ಗಳು

ತೆಲುಗು ವರ್ಷನ್ ಗೆ ಅತಿ ಹೆಚ್ಚು ಸ್ಕ್ರೀನ್ ಗಳು

ಬೆಂಗಳೂರಿನ ಸುಮಾರು 14 ಮಲ್ಟಿಪ್ಲೆಕ್ಸ್ ಗಳಲ್ಲಿನ 30 ಸ್ಕ್ರೀನ್ ಗಳಲ್ಲಿ 'ಬಾಹುಬಲಿ-2' ಚಿತ್ರದ ತೆಲುಗು ವರ್ಷನ್ ಇಂದು ರಾತ್ರಿ ತೆರೆಗೆ ಅಪ್ಪಳಿಸಲಿದೆ.[ಬೆಂಗಳೂರಿನಲ್ಲಿ 'ಬಾಹುಬಲಿ-2' ಚಿತ್ರಕ್ಕೆ ಡಿಮ್ಯಾಂಡ್ ಎಷ್ಟಿದೆ ಗೊತ್ತಾ..?]

ಹಿಂದಿ ವರ್ಷನ್ ಕೂಡ ಇಂದೇ ಬಿಡುಗಡೆ

ಹಿಂದಿ ವರ್ಷನ್ ಕೂಡ ಇಂದೇ ಬಿಡುಗಡೆ

ಬೆಂಗಳೂರಿನ ಸುಮಾರು 13 ಮಲ್ಟಿಪ್ಪೆಕ್ಸ್ ಗಳಲ್ಲಿನ 20 ಸ್ಕ್ರೀನ್ ಗಳಲ್ಲಿ 'ಬಾಹುಬಲಿ-2' ಚಿತ್ರದ ಹಿಂದಿ ವರ್ಷನ್ ಇಂದು ರಾತ್ರಿ ತೆರೆಕಾಣಲಿದೆ.

ತಮಿಳು ವರ್ಷನ್ ಗೆ ಸ್ಕ್ರೀನ್ ಗಳು ಕಡಿಮೆ

ತಮಿಳು ವರ್ಷನ್ ಗೆ ಸ್ಕ್ರೀನ್ ಗಳು ಕಡಿಮೆ

ಬೆಂಗಳೂರಿನ ಸುಮಾರು 6 ಮಲ್ಟಿಪ್ಲೆಕ್ಸ್ ಗಳಲ್ಲಿನ ಸುಮಾರು 7 ಸ್ಕ್ರೀನ್ ಗಳಲ್ಲಿ 'ಬಾಹುಬಲಿ-2' ಚಿತ್ರದ ತಮಿಳು ವರ್ಷನ್ ಇಂದು ರಾತ್ರಿ ಪ್ರದರ್ಶನವಾಗಲಿದೆ.

ಹಗಲು ದರೋಡೆ ನಡೆಯುತ್ತಿದೆ

ಹಗಲು ದರೋಡೆ ನಡೆಯುತ್ತಿದೆ

ಒಂದು ದಿನ ಮುಂಚಿತವಾಗಿಯೇ 'ಬಾಹುಬಲಿ-2' ಚಿತ್ರವನ್ನ ನೋಡಲು ಇಚ್ಛಿಸುವವರು ದುಬಾರಿ ಬೆಲೆ ತೆರಬೇಕು. ಈ ನೆಪದಲ್ಲಿ ಟಿಕೆಟ್ ಬೆಲೆಯನ್ನ 500 ಹಾಗೂ 600 ರೂಪಾಯಿಗೆ ಏರಿಸಿ, ಮಲ್ಟಿಪ್ಲೆಕ್ಸ್ ನವರು ಹಗಲು ದರೋಡೆ ಮಾಡುತ್ತಿದ್ದಾರೆ.

100೦ ರೂಪಾಯಿಗೆ ಟಿಕೆಟ್

100೦ ರೂಪಾಯಿಗೆ ಟಿಕೆಟ್

ಇನ್ನೂ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿ 700, 800, 1000 ರೂಪಾಯಿವರೆಗೆ ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ.

ಗೋಲ್ಡ್ ಕ್ಲಾಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.!

ಗೋಲ್ಡ್ ಕ್ಲಾಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.!

ನಾರ್ಮಲ್ ಸ್ಕ್ರೀನ್ ಗೆ 500-600 ರೂಪಾಯಿ ಕೊಡಬೇಕಾದ್ರೆ, ಗೋಲ್ಡ್ ಕ್ಲಾಸ್ ಟಿಕೆಟ್ ಬೆಲೆ ಎಷ್ಟು ಗೊತ್ತಾ.? ಇಂದು ರಾತ್ರಿ ಪ್ರದರ್ಶನವಾಗುವ 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಲು ಪಿ.ವಿ.ಆರ್ ಗೋಲ್ಡ್ ಕ್ಲಾಸ್ ನಲ್ಲಿ ನೀವು ಬರೋಬ್ಬರಿ 1200 ಹಾಗೂ 1400 ರೂಪಾಯಿ ಕೊಡಬೇಕು.!! ಶಾಕಿಂಗ್ ಆದರೂ ಇದು ಸದ್ಯದ ವಾಸ್ತವ.!!

ಆಗಲೇ ಸೋಲ್ಡ್ ಔಟ್

ಆಗಲೇ ಸೋಲ್ಡ್ ಔಟ್

ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಇಂದು ರಾತ್ರಿ ಪ್ರದರ್ಶನವಾಗುವ ಬಹುತೇಕ ಶೋಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ದುಬಾರಿ ಬೆಲೆ ಆದರೂ, ದುಡ್ಡು ಕೊಟ್ಟು ಜನ ಟಿಕೆಟ್ ಗಳನ್ನ ಕೊಂಡುಕೊಂಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡಕ್ಕೆ ಬೆಲೆ ಇಲ್ಲ.!

ಕರ್ನಾಟಕದಲ್ಲಿ ಕನ್ನಡಕ್ಕೆ ಬೆಲೆ ಇಲ್ಲ.!

ಕರ್ನಾಟಕದಲ್ಲಿ ಕನ್ನಡಕ್ಕೆ, ಕನ್ನಡ ಚಿತ್ರಗಳಿಗೆ, ಕನ್ನಡ ಚಿತ್ರರಂಗದವರಿಗೆ 'ಬೆಲೆ ಇಲ್ಲ' ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಬೇಕಾ.? ಕನ್ನಡ ಚಿತ್ರಗಳಿಗೆ ಸ್ಕ್ರೀನ್ ಗಳನ್ನೇ ಕೊಡದ ಮಲ್ಟಿಪ್ಲೆಕ್ಸ್ ನವರು ಪರಭಾಷೆಯ ಚಿತ್ರಗಳಿಗೆ ಒಂದು ದಿನ ಮುಂಚಿತವಾಗಿಯೇ ಪ್ರದರ್ಶನಕ್ಕೆ ಅವಕಾಶ ಕೊಡ್ತಾರೆ.! ಇದಕ್ಕೆ ಹೇಳೋರು, ಕೇಳೋರು ಯಾರೂ ಇಲ್ವೇ.?

More from Filmibeat

English summary
Most Expected Movie 'Baahubali-2' will start screening in Bengaluru from tonight 9.45 PM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X