For Quick Alerts
  ALLOW NOTIFICATIONS  
  For Daily Alerts

  'ರಾಜಮೌಳಿ' ಮುಂದಿನ ಸಿನಿಮಾ ಘೋಷಣೆ.! ನಾಯಕ ಯಾರು?

  By Bharath Kumar
  |

  'ಬಾಹುಬಲಿ' ಚಿತ್ರದ ಮೆಗಾ ಸಕ್ಸಸ್ ನಂತರ ನಿರ್ದೇಶಕ ರಾಜಮೌಳಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಇಡೀ ಭಾರತ ಚಿತ್ರರಂಗವನ್ನ ಕಾಡುತ್ತಿತ್ತು. ಇದೀಗ, ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ರಾಜಮೌಳಿ ಮುಂದಿನ ಸಿನಿಮಾ ಘೋಷಣೆ ಆಗಿದೆ.

  ಡಾರ್ಲಿಂಗ್ ಪ್ರಭಾಸ್ ಜೊತೆ ಸುಮಾರು 5 ವರ್ಷ ಸಿನಿಮಾ ಮಾಡಿ ಚಿತ್ರಜಗತ್ತನ್ನೇ ಗೆದ್ದ ರಾಜಮೌಳಿ, ಈಗ ಯಾವ ನಟನ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಚರ್ಚೆಗೆ ಕೂಡ ಉತ್ತರ ಸಿಕ್ಕಿದೆ.

  ಹಾಗಿದ್ರೆ, 'ಬಾಹುಬಲಿ' ಚಿತ್ರದ ನಂತರ ಸ್ಟಾರ್ ಮೇಕರ್ ರಾಜಮೌಳಿಯ ಮುಂದಿನ ಸಿನಿಮಾ ಯಾವುದು ಮತ್ತು ಯಾವ ನಟನ ಜೊತೆ ಎಂದು ಮುಂದೆ ಓದಿ.....

  ಸಾಮಾಜಿಕ ಕುರಿತು ಸಿನಿಮಾ

  ಸಾಮಾಜಿಕ ಕುರಿತು ಸಿನಿಮಾ

  'ಬಾಹುಬಲಿ' ಅಂತಹ ಸಿನಿಮಾ ಮಾಡಿ ಸಿನಿಪ್ರಪಂಚದ ಗಮನ ಸೆಳೆದ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನ ಸಾಮಾಜಿಕ ಕಾಳಜಿಯ ಕುರಿತು ಸಿನಿಮಾ ಮಾಡಲಿದ್ದಾರೆ.

  'ಪದ್ಮಾವತಿ' ಟ್ರೈಲರ್ ನೋಡಿ ರಾಜಮೌಳಿ ಕಾಮೆಂಟ್ ಮಾಡಿದ್ದು ಯಾರಿಗೆ?'ಪದ್ಮಾವತಿ' ಟ್ರೈಲರ್ ನೋಡಿ ರಾಜಮೌಳಿ ಕಾಮೆಂಟ್ ಮಾಡಿದ್ದು ಯಾರಿಗೆ?

  ದಾನಯ್ಯ ನಿರ್ಮಾಪಕ

  ದಾನಯ್ಯ ನಿರ್ಮಾಪಕ

  ರಾಜಮೌಳಿ ತಮ್ಮ ಮುಂದಿನ ಚಿತ್ರದ ಬಗ್ಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ್ದು, ''ನನ್ನ ಮುಂದಿನ ಸಿನಿಮಾ ಯಾವ ಭಾಷೆ ಮತ್ತು ಯಾವ ನಟನ ಜೊತೆ ಮಾಡಲಿದ್ದೇನೆ ಎಂಬುದು ಗೊತ್ತಿಲ್ಲ. ಆದ್ರೆ, ದಾನಯ್ಯ ಅವರು ಆ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ'' ಎಂದು ಬಾಹುಬಲಿ ನಿರ್ದೇಶಕ ಸ್ಪಷ್ಟಪಡಿಸಿದ್ದಾರೆ.

  ಆಸ್ಕರ್ ಗೆ 'ಬಾಹುಬಲಿ' ಆಯ್ಕೆಯಾಗದ ಬಗ್ಗೆ ರಾಜಮೌಳಿ ಹೇಳಿದ್ದೇ ಬೇರೆ.!ಆಸ್ಕರ್ ಗೆ 'ಬಾಹುಬಲಿ' ಆಯ್ಕೆಯಾಗದ ಬಗ್ಗೆ ರಾಜಮೌಳಿ ಹೇಳಿದ್ದೇ ಬೇರೆ.!

  ಪ್ರನ್ಸ್ ಮಹೇಶ್ ಜೊತೆ ಸಿನಿಮಾ

  ಪ್ರನ್ಸ್ ಮಹೇಶ್ ಜೊತೆ ಸಿನಿಮಾ

  ನಿರ್ಮಾಪಕ ದಾನಯ್ಯ ಅವರ ಜೊತೆ ಮುಂದಿನ ಸಿನಿಮಾ ಘೋಷಣೆ ಮಾಡಿಕೊಂಡಿರುವ ರಾಜಮೌಳಿ, ಅದರ ಬೆನ್ನಲ್ಲೆ ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ. ಈ ಚಿತ್ರವನ್ನ ಕೆ.ಎಲ್ ನಾರಾಯಣ್ ನಿರ್ಮಾಣ ಮಾಡಲಿದ್ದು, 2019ಕ್ಕೆ ಶುರುವಾಗಬಹುದು ಎನ್ನಲಾಗಿದೆ.

  'ಬಾಹುಬಲಿ' ಸ್ಟಂಟ್ ಕಾಪಿ ಮಾಡಲು ಹೋಗಿ ಪ್ರಾಣ ಬಿಟ್ಟ ಉದ್ಯಮಿ.!'ಬಾಹುಬಲಿ' ಸ್ಟಂಟ್ ಕಾಪಿ ಮಾಡಲು ಹೋಗಿ ಪ್ರಾಣ ಬಿಟ್ಟ ಉದ್ಯಮಿ.!

  ರಾಜಮೌಳಿ ಮುಂದಿನ ಚಿತ್ರಕ್ಕೆ ನಾಯಕ ಯಾರು?

  ರಾಜಮೌಳಿ ಮುಂದಿನ ಚಿತ್ರಕ್ಕೆ ನಾಯಕ ಯಾರು?

  ಸದ್ಯ, ಕಥೆ ಮತ್ತು ನಿರ್ಮಾಪಕರನ್ನ ಅಂತಿಮಗೊಳಿಸಿಕೊಂಡಿರುವ ರಾಜಮೌಳಿ ನಾಯಕ ಯಾರಾಗಬಹುದು ಎಂಬ ಸಣ್ಣ ಸುಳಿವು ಕೂಡ ಬಿಟ್ಟುಕೊಟ್ಟಿಲ್ಲ. ಈ ಅವಕಾಶ ಯಾರಿಗೆ ಸಿಗುತ್ತೆ ಅಂತ ಕಾದುನೋಡಬೇಕಿದೆ.

  ದಾನಯ್ಯ ಯಾರು?

  ದಾನಯ್ಯ ಯಾರು?

  ತೆಲುಗಿನ ಸ್ಟಾರ್ ನಿರ್ಮಾಪಕರಾಗಿರುವ ದಾನಯ್ಯ ಈ ಹಿಂದೆ 'ಬ್ರೂಸ್ ಲೀ', 'ನಾಯಕ್', 'ದೇಶಮುದುರು', 'ಜುಲಾಯ್', 'ಓಯ್', 'ದುಬಾಯ್ ಶೀನು' ಚಿತ್ರಗಳು ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಸದ್ಯ, ಮಹೇಶ್ ಬಾಬು ಅಭಿನಯಿಸುತ್ತಿರುವ 'ಭರತ್ ಅನೆ ನೇನು' ಚಿತ್ರಕ್ಕೂ ಇವರೇ ನಿರ್ಮಾಪಕರು.

  'ಮಹಾಭಾರತ' ಚಿತ್ರ ಸದ್ಯಕ್ಕಿಲ್ಲ

  'ಮಹಾಭಾರತ' ಚಿತ್ರ ಸದ್ಯಕ್ಕಿಲ್ಲ

  'ಬಾಹುಬಲಿ' ಸಕ್ಸಸ್ ನಂತರ ರಾಜಮೌಳಿ 'ಮಹಾಭಾರತ' ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದ್ರೆ, ಈಗಿನ ಸಮಯದಲ್ಲಿ ಈ ಸಿನಿಮಾ ಮಾಡುವುದಿಲ್ಲ ಎಂದು ಸ್ವತಃ ರಾಜಮೌಳಿ ಅವರೇ ಹೇಳಿಕೊಂಡಿದ್ದಾರೆ.

  English summary
  Baahubali Director SS Rajamouli has recently revealed his forthcoming projects. While his next film will be a social drama.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X