twitter
    For Quick Alerts
    ALLOW NOTIFICATIONS  
    For Daily Alerts

    ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು: ನ್ಯಾಯದ ಸಮಾಧಿ ಎಂದ ಪ್ರಕಾಶ್ ರೈ

    |

    ಬಾಬ್ರಿ ಮಸೀದಿಯನ್ನು ಧ್ವಂಸ ಗೊಳಿಸಿದ ಪ್ರಕರಣ ಕುರಿತು ಸಿಬಿಐ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಎಲ್ಲಾ 36 ಮಂದಿ ಆರೋಪಿಗಳನ್ನೂ, ಆರೋಪ ಮುಕ್ತಗೊಳಿಸಲಾಗಿದೆ.

    ಬಹು ಸುದೀರ್ಘಾವಧಿ ನಡೆದಿದ್ದ ಪ್ರಕರಣದ ವಿಚಾರಣೆ ಇಂದು ಅಂತ್ಯವಾಗಿದ್ದು, ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಇನ್ನೂ ಕೆಲವು ಸಂಘಟನೆಗಳು ತೀರ್ಪನ್ನು ಸ್ವಾಗತಿಸಿದ್ದರೆ, ಇನ್ನೂ ಕೆಲವರು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ನಟ, ರಾಜಕಾರಣಿ ಪ್ರಕಾಶ್ ರೈ ಸಹ ಒಬ್ಬರು.

    ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪಿನಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಇನ್ನೂ ಹಲವರನ್ನು ನಿರ್ದೋಷಿ ಎಂದು ಘೋಷಿಸಿರುವ ಸಿಬಿಐ ವಿಶೇಷ ನ್ಯಾಯಾಲಯ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನಟ ಪ್ರಕಾಶ್ ರೈ.

    ನ್ಯಾಯವನ್ನು ಬಂಧಿಸಿ, ಸಮಾಧಿ ಮಾಡಲಾಗಿದೆ: ಪ್ರಕಾಶ್ ರೈ

    ನ್ಯಾಯವನ್ನು ಬಂಧಿಸಿ, ಸಮಾಧಿ ಮಾಡಲಾಗಿದೆ: ಪ್ರಕಾಶ್ ರೈ

    'ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ಹಿಟ್ ಆಂಡ್ ರನ್ ಪ್ರಕರಣದಂತಾಗಿದೆ. ಇಲ್ಲಿ ಅಪಘಾತ ಮಾಡಿದ ಚಾಲಕ ಖುಲಾಸೆಗೊಂಡಿದ್ದಾನೆ. ನ್ಯಾಯವನ್ನು ಬಂಧಿಸಿ ಸಮಾಧಿ ಮಾಡಲಾಗಿದೆ' ಎಂದಿದ್ದಾರೆ ಪ್ರಕಾಶ್ ರೈ. ತೀರ್ಪು ನ್ಯಾಯಕ್ಕೆ ವಿರುದ್ಧವಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳುವ ಯತ್ನ ಮಾಡಿದ್ದಾರೆ ರೈ.

    ಪ್ರಕಾಶ್ ರೈ ಟ್ವೀಟ್‌ಗೆ ಹಲವರ ವಿರೋಧ

    ಪ್ರಕಾಶ್ ರೈ ಟ್ವೀಟ್‌ಗೆ ಹಲವರ ವಿರೋಧ

    ಪ್ರಕಾಶ್ ರೈ ಅವರ ಟ್ವೀಟ್‌ಗೆ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳೇ ಬಂದಿವೆ. ಹಲವರು ಪ್ರಕಾಶ್ ರೈ ಅನ್ನು ಮೂದಲಿಸಿದ್ದಾರೆ. ಹೊಟ್ಟೆ ಉರಿಯಿಂದಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಹೀಗಳೆದಿದ್ದಾರೆ.

    ಸಂತಸ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ

    ಸಂತಸ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ

    ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಿಜೆಪಿ ನಾಯಕರುಗಳು ತೀರ್ಪನ್ನು ಸ್ವಾಗತಿಸಿದ್ದಾರೆ. ಸ್ವತಃ ಸಿಎಂ ಯಡಿಯೂರಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ, 'ತೀರ್ಪು ಸಂತಸ ತಂದಿದೆ. ನಾನೂ ಒಬ್ಬ ಸೇವಕ ಆಗಿದ್ದೆ, ಈ ತೀರ್ಪು ನಮಗೆ ಸಿಕ್ಕ ಜಯ' ಎಂದಿದ್ದಾರೆ.

    Recommended Video

    ಅಕ್ಷಯ್ ಕುಮಾರ್ ಮತ್ತು ಮೋದಿಗೆ ಒಟ್ಟಿಗೆ ಟಾಂಗ್ ಕೊಟ್ಟ ರಮ್ಯಾ | Filmibeat Kannada
    ತೀರ್ಪನ್ನು ಟೀಕಿಸಿರುವ ಸಿದ್ದರಾಮಯ್ಯ

    ತೀರ್ಪನ್ನು ಟೀಕಿಸಿರುವ ಸಿದ್ದರಾಮಯ್ಯ

    ವಿಪಕ್ಷ ನಾಯಕ ಸಿದ್ದರಾಮಯ್ಯ, ತೀರ್ಪನ್ನು ಟೀಕಿಸಿದ್ದು, 'ಬಾಬರಿ ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳನ್ನು ಖುಲಾಸೆಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ದುರದೃಷ್ಟಕರ. ನ್ಯಾಯಾಲಯ 2019ರ ಸುಪ್ರೀಮ್ ಕೋರ್ಟ್ ತೀರ್ಪು ಮತ್ತು ಸಂವಿಧಾನದ ಆಶಯಗಳನ್ನು ಗಮನಕ್ಕೆ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ' ಎಂದಿದ್ದಾರೆ.

    English summary
    Actor Prakash Rai criticized Babri Masjid demolition case verdict on twitter. He said In this hit and run case driver acquitted.
    Wednesday, September 30, 2020, 21:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X