»   » ಕೋತಿಗಳು ಸಾರ್‌ ಕೋತಿಗಳು...

ಕೋತಿಗಳು ಸಾರ್‌ ಕೋತಿಗಳು...

Posted By: Staff
Subscribe to Filmibeat Kannada
ramesh aravind
ಕುರಿಗಳು ಸಾರ್‌ ಕುರಿಗಳು ಸಿನಿಮಾದ ಭಾರೀ ಯಶಸ್ಸಿನಿಂದ ಪುಳಕಿತರಾಗಿರುವ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಮತ್ತೆ ಕುರಿಗಳನ್ನೇ ನೆಚ್ಚಿಕೊಂಡಿದ್ದಾರೆ. ಕುರಿಗಳು ಭಾಗ-2 ತಯಾರಿಸಲು ಬಾಬು ಸಿದ್ಧತೆ ನಡೆಸುತ್ತಿದ್ದಾರೆ.

ಈ ಸಾರಿ ಬಾಬು ಕಟಾಕ್ಷಕ್ಕೆ ಒಳಗಾಗಿರುವುದು ಕೋತಿಗಳು. ಕುರಿಗಳು ಭಾಗ- 2 ಸಿನಿಮಾವನ್ನು mp;#3214;ಂದು ಬಾಬು ಹೆಸರಿಸಿದ್ದಾರೆ. ಪ್ರಸ್ತುತ ಸ್ಯಾಂಡಲ್‌ವುಡ್‌ ಮಾತನಾಡಿಕೊಳ್ಳುತ್ತಿರುವುದು ಇದೇ ಕೋತಿಗಳ ಬಗೆಗೆ.

ಕೋತಿಗಳು ಸಿನಿಮಾದಲ್ಲಿ ಯಾರು ಅಭಿನಯಿಸುತ್ತಾರೆ ಎನ್ನುವುದನ್ನು ಬಾಬು ಇನ್ನೂ ಅಂತಿಮಗೊಳಿಸಿಲ್ಲ . ಕೋತಿಗಳಂತೂ ನಟಿಸುವುದಿಲ್ಲ . ಅಂದಹಾಗೆ, ಬಾಬು ಮಂಗನಿಂದ ಮಾನವ ಎನ್ನುವುದನ್ನು ಹೇಳಲಿಕ್ಕೆ ಹೊರಟಿದ್ದಾರೋ ಅಥವಾ ಕುರಿಗಳಿಂದ ಮಂಗ ಎನ್ನುವ ಹೊಸ ಸಿದ್ಧಾಂತವನ್ನು ಮಂಡಿಸುತ್ತಿದ್ದಾರೋ ತಿಳಿಯದು. ಆದರೆ, ಕೋತಿಗಳು ಸಿನಿಮಾದಲ್ಲಿ ಪ್ರಖ್ಯಾತ ನಟರೇ ನಟಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

ಕುರಿಗಳು ಯಶಸ್ಸಿನಿಂದ ಬೆರಳು ಕಚ್ಚಿಕೊಂಡಿರುವ ಮಂದಿಯಿಂದಾಗಿ, ಕೋತಿಗಳಾಗಲಿಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಭಯಂಕರ ಸ್ಪರ್ಧೆ ಉಂಟಾಗಿರುವುದು ಲೇಟೆಸ್ಟ್‌ ವರದಿ. ಕುರಿಗಳು ಪಾತ್ರವರ್ಗವೇ ಇಲ್ಲೂ ಮುಂದುವರಿಯುತ್ತದೆ ಎನ್ನುವ ಗುಮಾನಿಯೂ ಇದೆ. ಹಾಗಾದಲ್ಲಿ ಈ ಮುನ್ನ ಕುರಿಗಳಾಗಿ ಪ್ರೇಕ್ಷಕರನ್ನೂ ಕುರಿಗಳಾಗಿಸಿದ್ದ ರಮೇಶ್‌, ನಾರಾಯಣ್‌ ಹಾಗೂ ಮೋಹನ್‌ ತ್ರಿವಳಿ ಕೋತಿಗಳಾಗುವುದು ಖಚಿತ.

English summary
The success of Kurigalu Saar.... leads to Kothigalu Saar...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada