»   » ಕೈರೋ ಚಿತ್ರೋತ್ಸವದಲ್ಲಿ ಅಮಿತಾಬ್‌ಗೆ ಶತಮಾನದ ನಟ ಪ್ರಶಸ್ತಿ ಪ್ರದಾನ

ಕೈರೋ ಚಿತ್ರೋತ್ಸವದಲ್ಲಿ ಅಮಿತಾಬ್‌ಗೆ ಶತಮಾನದ ನಟ ಪ್ರಶಸ್ತಿ ಪ್ರದಾನ

Posted By: Staff
Subscribe to Filmibeat Kannada

ಕೈರೋ : ಇಲ್ಲಿ ನಡೆಯುತ್ತಿರುವ ಅಲೆಗ್ಸಾಂಡ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬಾಲಿವುಡ್‌ನ ಮಹಾನ್‌ ತಾರೆ ಅಮಿತಾಬ್‌ ಬಚ್ಚನ್‌ ಅವರಿಗೆ ಸೋಮವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ 'ಶತಮಾನದ ನಟ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಐದು ದಿನಗಳ ಅಂತರರಾಷ್ಟ್ರೀಯ ಸಮಾರಂಭದಲ್ಲಿ ಪ್ರತಿಷ್ಠಿತ ಸಮ್ಮಾನಕ್ಕೊಳಗಾದ ಅಮಿತಾಬ್‌ಗೆ, ಪ್ರಶಸ್ತಿಯಾಂದಿಗೆ ಇದೇ ಮೊದಲ ಬಾರಿಗೆ ಹಾಲಿವುಡ್‌ ಚಿತ್ರವೊಂದರಲ್ಲಿ ನಟಿಸುತ್ತಿರುವ ಹಿಗ್ಗು . ಅಭಿಮಾನಿಗಳು ಹಾಗೂ ಪತ್ರಕರ್ತರಿಂದ ಕಿಕ್ಕಿರಿದಿದ್ದ ಸುದ್ದಿಗೋಷ್ಠಿಯಲ್ಲಿ , 'ಸಲಾಂ ಅಲೈಕುಂ" ಎಂದು ಅಪ್ಪಟ ಅರೇಬಿಕ್‌ ರೀತಿಯಲ್ಲಿ ಅಮಿತಾಬ್‌ ನಮಸ್ಕಾರ ಹೇಳಿದರು.

ಯುವತೀಮಣಿಯರ ಕೇಂದ್ರಬಿಂದುವಾಗಿದ್ದ 59ರ ಹರಯದ ಅಮಿತಾಬ್‌ ನಿರಂತರವಾಗಿ ಫೋಟೋ ಫ್ಲಾಶ್‌ಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಾಯಿತು. ಇದೇ ಅವಧಿಯಲ್ಲಿ ಆಟೋಗ್ರಾಫ್‌ಗಾಗಿ ದುಂಬಿಗಳಂತೆ ಮುತ್ತಿಕೊಳ್ಳುತ್ತಿದ್ದ ಹಿಂಡು. 1991 ರ ಈಜಿಪ್ಟ್‌ ಭೇಟಿಯಲ್ಲಿ ಕೂಡ ಅಮಿತಾಬ್‌ ಇದೇ ರೀತಿಯಲ್ಲಿ ಅಭಿಮಾನಿಗಳ ಅಭಿಮಾನದಲ್ಲಿ ತೋಯ್ದಿದ್ದರು.

ಇತ್ತೀಚೆಗಷ್ಟೇ ಬಿಬಿಸಿ ಅಂತರ್ಜಾಲದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅತ್ಯುತ್ತಮ ನಟನಾಗಿ ಅಮಿತಾಬ್‌ ಹೊರಹೊಮ್ಮಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಸ್ತುತ ಇಂಡಿಯನ್‌-ಹಾಲಿವುಡ್‌ ಸಹಕಾರದಲ್ಲಿ ನಿರ್ಮಾಣವಾಗುತ್ತಿರುವ 'ಕಾಂಟೆ" ಸಿನಿಮಾದಲ್ಲಿ ಅಮಿತಾಬ್‌ ನಾಯಕ.

ಮೂರು ದಶಕಗಳ ಚಿತ್ರ ಜೀವಿತದಲ್ಲಿ , 118 ಸಿನಿಮಾಗಳಲ್ಲಿ ನಟಿಸಿರುವ ಅಮಿತಾಬ್‌ ಆ್ಯಂಗ್ರಿ ಯಂಗ್‌ಮ್ಯಾನ್‌ ಇಮೇಜ್‌ ಹೊಂದಿದ್ದವರು ಹಾಗೂ ಪ್ರಣಯ ಮತ್ತು ನೃತ್ಯ ಸನ್ನಿವೇಶಗಳಲ್ಲಿ ಹೆಸರಾದವರು ಎಂದು ಈಜಿಪ್ಟ್‌ ಮಾಧ್ಯಮಗಳು ಬಣ್ಣಿಸಿವೆ. ಮಂಗಳವಾರ (ಸೆ.11) ಅಲೆಕ್ಸಾಂಡ್ರಿಯಾ ಚಿತ್ರೋತ್ಸವ ಮುಕ್ತಾಯವಾಗುತ್ತಿದೆ.

English summary
Amitabh Bachchan honoured with the

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada