For Quick Alerts
  ALLOW NOTIFICATIONS  
  For Daily Alerts

  ರೂಡ್ ಕಾಪ್ ರುದ್ರ.. ಗನ್‌ಗಳನ್ನಿಟ್ಟು ಅಭಿ - ಸೂರಿ ಲಗೋರಿ.. ಕಿಕ್‌ ಕೊಡ್ತಿದೆ 'ಬ್ಯಾಡ್ ಮ್ಯಾನರ್ಸ್' ಟೀಸರ್

  |

  ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಬ್ಯಾಡ್ ಮ್ಯಾನರ್ಸ್' ಟೀಸರ್ ರಿಲೀಸ್ ಆಗಿದೆ. 'ಅಮರ್' ಸಿನಿಮಾ ನಂತರ ಅಭಿ ನಿರ್ದೇಶಕ ದುನಿಯಾ ಸೂರಿ ಜೊತೆ ಕೈ ಜೋಡಿಸಿದ್ದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮೂಡಿ ಬರ್ತಿದ್ದು ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಇಬ್ಬರು ಇಂದೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದು, ಎರಡು ಟೀಸರ್ ರಿಲೀಸ್ ಆಗಿದೆ.

  ಸೂರಿ ಸಿನಿಮಾ ಅಂದರೆ ಕೇಳ್ಬೇಕಾ? ರಾ ಮೇಕಿಂಗ್, ವಿಭಿನ್ನ ಪಾತ್ರಗಳು, ವಿಭಿನ್ನ ಕಥೆ, ಅಷ್ಟೇ ವಿಭಿನ್ನವಾಗಿ ಅದರ ಟ್ರೀಟ್‌ಮೆಂಟ್ ಇರುತ್ತೆ. 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲೂ ಅದೇ ಎದ್ದು ಕಾಣ್ತಿದೆ. ರಫ್ ಅಂಡ್ ಟಫ್ ಪೊಲೀಸ್ ಆಫೀಸರ್‌ ಆಗಿ ಅಭಿ ಮಿಂಚಿದ್ದು, ಭರ್ಜರಿ ಆಕ್ಷನ್‌ ಸೀನ್ಸ್‌ನಿಂದ ಟೀಸರ್‌ ತುಂಬಿ ತುಳುಕುತ್ತಿದೆ. ಮಾಸ್ತಿ ಡೈಲಾಗ್ಸ್ ಅದಕ್ಕೆ ಮತ್ತಷ್ಟು ಖದರ್ ತಂದಿದೆ. ಚರಣ್ ರಾಜ್ ಬಿಜಿಎಂ ಅಂತೂ ಸಿಂಪ್ಲಿ ಸೂಪರ್. ಸದ್ಯ ಸೋಶಿಯಲ್ ಮೀಡಿಯಾದಲ್ಲಿ 'ಬ್ಯಾಡ್ ಮ್ಯಾನರ್ಸ್' ಟೀಸರ್ ಆರ್ಭಟ ಜೋರಾಗಿದೆ.

  ಅಭಿಷೇಕ್‌ ಅಂಬರೀಶ್‌ ಹುಟ್ಟುಹಬ್ಬ: ಅಭಿಮಾನಿಗಳಿಗೆ ಸಾಲು-ಸಾಲು ಗುಡ್‌ನ್ಯೂಸ್‌ಅಭಿಷೇಕ್‌ ಅಂಬರೀಶ್‌ ಹುಟ್ಟುಹಬ್ಬ: ಅಭಿಮಾನಿಗಳಿಗೆ ಸಾಲು-ಸಾಲು ಗುಡ್‌ನ್ಯೂಸ್‌

  'ಪಾಪ್‌ಕಾರ್ನ್‌ ಮಂಕಿ ಟೈಗರ್' ನಂತರ ಸೂರಿ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕೊರೊನಾ ಹಾವಳಿಯಿಂದ ಕೊಂಚ ತಡವಾದರೂ ಸಿನಿಮಾ ಸೊಗಸಾಗಿ ಮೂಡಿ ಬರ್ತಿದೆ. ಸುಧೀರ್ ಕೆ. ಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

   ರೂಡ್ ಕಾಪ್ ರುದ್ರ ಆಗಿ ಅಭಿ ಆರ್ಭಟ

  ರೂಡ್ ಕಾಪ್ ರುದ್ರ ಆಗಿ ಅಭಿ ಆರ್ಭಟ

  'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ರುದ್ರ ಆಗಿ ಅಭಿಷೇಕ್ ಅಬ್ಬರಿಸಿದ್ದಾರೆ. "ನಾನ್ ರುದ್ರ, ಬೈ ಬರ್ತೇ ರೂಡ್, ಐಹ್ಯಾಮ್ ರೂಡ್" ಎಂದು ಗನ್ ಹಿಡಿದು ಕಿಡಿಗೇಡಿಗಳ ಬೆಂಡಿತ್ತಿದ್ದಾರೆ. ಸೂರಿ ನಿರ್ದೇಶನದಲ್ಲಿ ಮಾಸ್ ಹೀರೊ ಆಗಿ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ. "ವ್ಯವಸ್ಥೆ ತಪ್ಪಲ್ಲ, ಮನುಷ್ಯನ ಯೋಚನೆ ತಪ್ಪು" ಎನ್ನುವ ಮತ್ತೊಂದು ಡೈಲಾಗ್ ಕೂಡ ಹೈಲೆಟ್ ಆಗಿದೆ. ಟೀಸರ್ ನೋಡ್ತಿದ್ರೆ, ಡ್ರಗ್ಸ್‌ ಮಾಫಿಯಾ ಸುತ್ತಾ ಸಿನಿಮಾ ಕತೆ ಸುತ್ತುವಂತೆ ಕಾಣ್ತಿದೆ.

  ಅಂಬಿ ಪುತ್ರ ಅಭಿಷೇಕ್ 3ನೇ ಚಿತ್ರಕ್ಕೆ ತಯಾರಿ: ಡೈರೆಕ್ಟರ್ ಕೂಡ ಫಿಕ್ಸ್!ಅಂಬಿ ಪುತ್ರ ಅಭಿಷೇಕ್ 3ನೇ ಚಿತ್ರಕ್ಕೆ ತಯಾರಿ: ಡೈರೆಕ್ಟರ್ ಕೂಡ ಫಿಕ್ಸ್!

   ದುನಿಯಾ ಸೂರಿ ರಾ ಮೇಕಿಂಗ್‌ ಕಿಕ್

  ದುನಿಯಾ ಸೂರಿ ರಾ ಮೇಕಿಂಗ್‌ ಕಿಕ್

  ಸೂರಿ ಎಂದಿನ ತಮ್ಮ ರಾ ಸ್ಟೈಲ್ ಮೇಕಿಂಗ್‌ನಿಂದ ಇಲ್ಲೂ ಗಮನ ಸೆಳೆದಿದ್ದಾರೆ. ಯಾವ್ಯಾವುದೋ ಆಂಗಲ್‌ಗಳಲ್ಲಿ ಕ್ಯಾಮರಾ ಇಟ್ಟು, ಪ್ರೇಕ್ಷಕರಿಗೆ ಥ್ರಿಲ್ ಕೊಡುವ ಪ್ರಯತ್ನ ಮಾಡಿದ್ದಾರೆ. ಅದು ಟೀಸರ್‌ನಲ್ಲೇ ಗೊತ್ತಾಗ್ತಿದೆ. ಶಾಡೋ ಶಾಟ್ಸ್ ಸಖತ್ ಮಜವಾಗಿದೆ. ಕೊನೆಯಲ್ಲಿ ಅಭಿ ಗನ್‌ಗಳನ್ನು ಜೋಡಿಸಿ ಕಿಡಿಗೇಡಿಗಳ ಜೊತೆ ಲಗೋರಿ ಆಡೋಕೆ ಎದ್ದು ನಿಲ್ಲುವ ಝಲಕ್ ಕಿಕ್‌ ಕೊಡ್ತಿದೆ. ಇನ್ನು ಸೂರಿ ಕತ್ತಲು ಬೆಳಕಿನ ಆಟ ಇಲ್ಲೂ ಮುಂದುವರೆದಿದೆ. 'ಪಾಪ್‌ಕಾನ್‌ ಮಂಕಿಟೈಗರ್' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡ್ತಿದೆ.

   ಚರಣ್ ರಾಜ್ ಹಂಟಿಂಗ್ ಬಿಜಿಎಂ ಸೂಪರ್

  ಚರಣ್ ರಾಜ್ ಹಂಟಿಂಗ್ ಬಿಜಿಎಂ ಸೂಪರ್

  ಅಭಿ, ಸೂರಿ ಜೊತೆಗೆ ಚಿತ್ರದ ಮತ್ತೊಬ್ಬ ಹೀರೊ ಆಗಿ ಸಂಗೀತ ನಿರ್ದೇಶಕ ಚರಣ್‌ ರಾಜ್‌ ಕಾಣಿಸ್ತಿದ್ದಾರೆ. ಈ ಹಿಂದೆ ಸೂರಿ ನಿರ್ದೇಶನದಲ್ಲಿ 'ಟಗರು', 'ಪಾಪ್‌ಕಾರ್ನ್‌ ಮಂಕಿ ಟೈಗರ್' ಮ್ಯೂಸಿಕ್ ಕಂಪೋಸ್ ಮಾಡಿ ಚರಣ್ ಗೆದ್ದಿದ್ದರು. ಸದ್ಯ 'ಬ್ಯಾಡ್ ಮ್ಯಾನರ್ಸ್' ಟೀಸರ್‌ನಲ್ಲೂ ಹಂಟಿಂಗ್ ಬಿಜಿಎಂ ಹೈಲೆಟ್ ಆಗಿದೆ. ಟೀಸರ್ ನೋಡಿದವರು ಮ್ಯೂಸಿಕ್ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಸೂರಿ ಕಟ್ಟಿರುವ ದೃಶ್ಯಗಳಿಗೆ ಚರಣ್ ಮ್ಯೂಸಿಕ್ ಮತ್ತಷ್ಟು ಖದರ್ ತಂದುಕೊಟ್ಟಿರುವುದು ಸುಳ್ಳಲ್ಲ.

   ರಚ್ಚು ಬರ್ತ್‌ಡೇಗೂ ಸ್ಪೆಷಲ್ ಗಿಫ್ಟ್

  ರಚ್ಚು ಬರ್ತ್‌ಡೇಗೂ ಸ್ಪೆಷಲ್ ಗಿಫ್ಟ್

  'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಅಭಿಷೇಕ್ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ಇಂದು ಅಭಿ ಜೊತೆಗೆ ರಚ್ಚು ಕೂಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಕೇಕ್ ಕತ್ತರಿಸುವ ಸಣ್ಣ ಟೀಸರ್ ಝಲಕ್ ರಿಲೀಸ್ ಮಾಡಿದ್ದಾರೆ. ಮೇಕಿಂಗ್ ಹಂತದಲ್ಲೇ ಸಖತ್ ಸದ್ದು ಮಾಡ್ತಿರೋ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಶೀಘ್ರದಲ್ಲೆ ತೆರೆಗೆ ಬರಲಿದೆ.

  English summary
  Bad Manners movie teaser released on the occasion of Abhishek Ambareesh Birthday. Know More.
  Tuesday, October 4, 2022, 10:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X