twitter
    For Quick Alerts
    ALLOW NOTIFICATIONS  
    For Daily Alerts

    'ಬದಲಾಗು ನೀನು' ಹಾಡು ಯೂಟ್ಯೂಬ್‌ನಿಂದ ಡಿಲೀಟ್! ಕಾರಣವೇನು?

    |

    ಕೊರೊನಾ ವಿರುದ್ಧ ಜಾಗೃತಿ ಹಾಗೂ ಕೊರೊನಾ ಸಮಯದಲ್ಲಿ ಜೀವ ಪಣಕ್ಕಿಡ್ಡು ಹೋರಾಡುತ್ತಿರುವವರಿಗೆ ನಮನ ಸಲ್ಲಿಸುವ ಉದ್ದೇಶದಿಂದ ನಿರ್ಮಿಸಿ ಬಿಡುಗಡೆ ಆಗಿದ್ದ ಬದಲಾಗು ನೀನು ಹಾಡು ಇದ್ದಕ್ಕಿದ್ದಂತೆ ಯುಟ್ಯೂಬ್‌ನಿಂದ ಕಾಣೆಯಾಗಿದೆ.

    Recommended Video

    ನೆಪಟಿಸಂನಿಂದ ಸುಶಾಂತ್ ಬದುಕಲಿಲ್ಲ ಆದ್ರೆ ಪ್ರಕಾಶ್ ರಾಜ್ ಬದುಕಿದ್ರು | Prakash Raj About Nepotism

    ಹೌದು, ಹಾಡನ್ನು ಡಿ ಬೀಟ್ಸ್‌ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಿಂದ ಬಿಡುಗಡೆ ಮಾಡಲಾಗಿತ್ತು, ಆದರೆ ಹಾಡನ್ನು ಡಿ ಬೀಟ್ಸ್‌ ಯೂಟ್ಯೂಬ್ ಚಾನೆಲ್‌ನಿಂದ ತೆಗೆದು ಹಾಕಲಾಗಿದೆ.

    ನನಗೆ ಎಲ್ಲರೂ 'ಬಾಸ್‌'ಗಳೇ: ವಿವಾದಕ್ಕೆ ತೆರೆ ಎಳೆದ ಪವನ್ ಒಡೆಯರ್ನನಗೆ ಎಲ್ಲರೂ 'ಬಾಸ್‌'ಗಳೇ: ವಿವಾದಕ್ಕೆ ತೆರೆ ಎಳೆದ ಪವನ್ ಒಡೆಯರ್

    ಕನ್ನಡದ ಬಹುತೇಕ ಎಲ್ಲಾ ಸಿನಿ ತಾರೆಗಳು ಇದ್ದ ಈ ಹಾಡನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಮಿಸಿತ್ತು, ಪವನ್ ಒಡೆಯರ್ ನಿರ್ದೇಶಿಸಿದ್ದರು. ಹಾಡು ಚೆನ್ನಾಗಿ ಹಿಟ್ ಸಹ ಆಗಿತ್ತು, ಆದರೆ ಈಗ ಇದ್ದಕ್ಕಿದ್ದಂತೆ ಹಾಡು ಡಿಲೀಟ್ ಆಗಿದೆ.

    ಕಾಪಿರೈಟ್ಸ್‌ ಕಾರಣದಿಂದ ಡಿಲೀಟ್

    ಕಾಪಿರೈಟ್ಸ್‌ ಕಾರಣದಿಂದ ಡಿಲೀಟ್

    ಬದಲಾಗು ನೀನು ಹಾಡು ಡಿಲೀಟ್ ಆಗಲು ಕಾರಣ ಕಾಪಿರೈಟ್ಸ್ ಅಥವಾ ಹಕ್ಕುಸಾಮ್ಯತೆ. ಕಾಪಿರೈಟ್ ಅಡಿಯಲ್ಲಿ ಫೆಲಿಸ್ ಕ್ರಿಯೇಷನ್ಸ್ ಎಂಬ ಬೆಂಗಳೂರು ಮೂಲದ ಸಂಸ್ಥೆಯೊಂದು ದೂರು ನೀಡಿದ ಕಾರಣ ಈ ಹಾಡನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ.

    ಅನುಮತಿ ಇಲ್ಲದೆ ದೃಶ್ಯಗಳನ್ನು ಬಳಸಲಾಗಿದೆ

    ಅನುಮತಿ ಇಲ್ಲದೆ ದೃಶ್ಯಗಳನ್ನು ಬಳಸಲಾಗಿದೆ

    ಫೆಲಿಸ್ ಕ್ರಿಯೇಷನ್ಸ್ ಅವರ ಕೆಲವು ವಿಡಿಯೋಗಳನ್ನು ಅವರ ಅನುಮತಿ ಇಲ್ಲದೆ 'ಬದಲಾಗು ನೀನು' ಹಾಡಿನಲ್ಲಿ ಬಳಸಲಾಗಿತ್ತಂತೆ, ಹಾಗಾಗಿ ಸಂಸ್ಥೆಯು ಕಾಪಿರೈಟ್ಸ್ ಅಡಿಯಲ್ಲಿ ದೂರು ನೀಡಿದ್ದ ಕಾರಣ ಬದಲಾಗು ನೀನು ಹಾಡನ್ನು ಯೂಟ್ಯೂಬ್ ತೆಗೆದು ಹಾಕಿದೆ. ಈ ಬಗ್ಗೆ ಫೆಲಿಸ್ ಕ್ರಿಯೇಷನ್ಸ್‌ನ ಸಿಬ್ಬಂದಿ 'ಫಿಲ್ಮೀಬೀಟ್ ಕನ್ನಡ' ಕ್ಕೆ ಮಾಹಿತಿ ನೀಡಿದ್ದಾರೆ.

    'ಬದಲಾಗು ನೀನು...' ಹಾಡಿನಲ್ಲಿ ಸುದೀಪ್ ಏಕಿಲ್ಲ?: ಸಚಿವರೇ ನೀಡಿದ ಕಾರಣ'ಬದಲಾಗು ನೀನು...' ಹಾಡಿನಲ್ಲಿ ಸುದೀಪ್ ಏಕಿಲ್ಲ?: ಸಚಿವರೇ ನೀಡಿದ ಕಾರಣ

    ಕೆಲವು ದೃಶ್ಯಗಳನ್ನು ಎತ್ತಿಕೊಳ್ಳಲಾಗಿದೆ

    ಕೆಲವು ದೃಶ್ಯಗಳನ್ನು ಎತ್ತಿಕೊಳ್ಳಲಾಗಿದೆ

    ಹಾಡಿನ ಆರಂಭದಲ್ಲಿ ಬರುವ ಬೆಂಗಳೂರಿನ ಏರಿಯಲ್ ದೃಶ್ಯಗಳು, ವಿಧಾನಸೌಧದ ಏರಿಯಲ್ ದೃಶ್ಯಗಳು, ಪ್ರಮುಖ ರಸ್ತೆ, ಫ್ಲೈಓವರ್‌ಗಳ ಏರಿಯಲ್ ದೃಶ್ಯಗಳು ಫೆಲಿಸ್ ಕ್ರಿಯೇಷನ್ಸ್‌ ಅವರ ವಿಡಿಯೋಗಳಂತೆ. ಆ ವಿಡಿಯೋಗಳನ್ನು ಅವರು ಬೆಂಗಳೂರು ಪೊಲೀಸ್ ಇಲಾಖೆಗೆಂದು ಮಾಡಿದ್ದರಂತೆ.

    ನಾವು ಮೊದಲೇ ಮಾಹಿತಿ ನೀಡಿದ್ದೆವು: ಫೆಲಿಸ್

    ನಾವು ಮೊದಲೇ ಮಾಹಿತಿ ನೀಡಿದ್ದೆವು: ಫೆಲಿಸ್

    'ಹಾಡು ಬಿಡುಗಡೆ ಆಗುವ ಮೊದಲೇ ನಾವು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೆವು ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಹಾಡು ಬಿಡುಗಡೆ ಆದಾಗ ನಮ್ಮ ಹೆಸರನ್ನು (ಕ್ರೆಡಿಟ್ಸ್) ಸಹ ಕೊಟ್ಟಿರಲಿಲ್ಲ' ಎಂದು ಫೆಲಿಸ್ ಕ್ರಿಯೇಷನ್ಸ್‌ನ ಸಿಬ್ಬಂದಿಯೊಬ್ಬರು 'ಫಿಲ್ಮೀಬೀಟ್‌ ಕನ್ನಡ'ಕ್ಕೆ ತಿಳಿಸಿದರು.

    ಬದಲಾಗು, ಬದಲಾಯಿಸು: ನಿಜವಾದ ಹೀರೋಗಳಿಗೆ ಕೈ ಮುಗಿದ ಸಿನಿಮಾ ಹೀರೋಗಳುಬದಲಾಗು, ಬದಲಾಯಿಸು: ನಿಜವಾದ ಹೀರೋಗಳಿಗೆ ಕೈ ಮುಗಿದ ಸಿನಿಮಾ ಹೀರೋಗಳು

    ಹಾಡಿನಲ್ಲಿ ಸುದೀಪ್ ನಟಿಸಿರಲಿಲ್ಲ

    ಹಾಡಿನಲ್ಲಿ ಸುದೀಪ್ ನಟಿಸಿರಲಿಲ್ಲ

    ಬದಲಾಗು ನೀನು ಹಾಡಿನಲ್ಲಿ ಸುದೀಪ್ ಹೊರತುಪಡಿಸಿ ಬಹುತೇಕ ಸ್ಟಾರ್ ನಟರು ಹಾಡಿನಲ್ಲಿದ್ದರು. ಸುದೀಪ್ ಇಲ್ಲದೇ ಇರುವ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ವಿವಾದವನ್ನೂ ಹುಟ್ಟಿಸಿತ್ತು. ಸುದೀಪ್ ಏಕೆ ಹಾಡಿನಲ್ಲಿಲ್ಲ ಎಂಬುದನ್ನು ನಂತರ ವೈದ್ಯಕೀಯ ಸಚಿವರು ಸ್ಪಷ್ಟನೆ ನೀಡಿದರು.

    ಗೋಲ್ಡನ್ ಸ್ಟಾರ್‌ ಗೆ ಅಗೌರವ: ಗಣೇಶ್ ಅಭಿಮಾನಿಗಳ ತಗಾದೆಗೋಲ್ಡನ್ ಸ್ಟಾರ್‌ ಗೆ ಅಗೌರವ: ಗಣೇಶ್ ಅಭಿಮಾನಿಗಳ ತಗಾದೆ

    English summary
    Badalagu Neenu Badalayisu Neenu song deleted from youtube due to copyright issue.
    Wednesday, June 17, 2020, 16:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X