ಬಡವ-ರಾಸ್ಕಲ್ ಪಾತ್ರ ಪರಿಚಯದ ಟೀಸರ್ ರಿಲೀಸ್!
ಬಡವ ರಾಸ್ಕಲ್ ಚಿತ್ರತಂಡ ಸದ್ಯ ವಿಶೇಷ ಟೀಸರ್ ಒಂದನ್ನು ರಿಲೀಸ್ ಮಾಡಿದೆ. ಚಿತ್ರದಲ್ಲಿ ಬರುವಂತಹ ಪ್ರಮುಖ ಪಾತ್ರಗಳನ್ನ ಈ ಟೀಸರ್ ಪರಿಚಯಿಸುತ್ತದೆ.
ಟೀಸರ್‌ನ ಆರಂಭದಲ್ಲಿ ಜಗ್ಗಿ ಅಲಿಯಾಸ್ ಪಿಟ್ಟ ಬರ್ತಾನೆ. ನಂತರ ಸಂತು ಅಲಿಯಾಸ್ ಪ್ಯಾಕೆಟ್, ಅನ್ವರ್ ಅಲಿಯಾಸ್ ಕನ್ನಡ ಅನ್ವರ್, ಕೃಷ್ಣ ಅಲಿಯಾಸ್ ಕಬಾಬ್, ಚಂದ್ರ ಅಲಿಯಾಸ್ ಬೆಂಕಿ, ದೀಪು ಅಲಿಯಾಸ್ ಸಣ್ಣಪ್ಪ, ಗಣಪ ಅಲಿಯಾಸ್ ಗಣಪ, ನವೀನ ಅಲಿಯಾಸ್ ಡೌನ್ ಟು ಅರ್ಥ್, ನಾಗಲಿಂಗ ಅಲಿಯಾಸ್ ನಾಗ ಪಾತ್ರಗಳನ್ನ ಕ್ರಮವಾಗಿ ಪರಿಚಯಿಸಲಾಗಿದೆ. ಇನ್ನು ಕೊನೆಯದಾಗಿ ಶಂಕ್ ಅಲಿಯಾಸ್ ಬಡವ ರಾಸ್ಕಲ್ ಅನ್ನೋ ಬೋರ್ಡ್ ಹಿಡಿದು ನಟ ಧನಂಜಯ್ ಎಂಟ್ರಿ ಕೊಡ್ತಾರೆ. ಈ ಎಲ್ಲಾ ಪಾತ್ರಗಳು ಬಡವ ರಾಸ್ಕಲ್ ಚಿತ್ರದ ಪ್ರಮುಖ ಪಾತ್ರಗಳು. ಸದ್ಯಕ್ಕೆ ಸ್ಲೇಟ್‌ನಲ್ಲಿ ಹೆಸ್ರು ಬರೆದು ಪಾತ್ರ ಪರಿಚಯಿಸಿ ಕೊಂಡಿರೋ ಈ ಪಾತ್ರಗಳು, ಚಿತ್ರದಲ್ಲಿ ಹೇಗಿರಲಿವೆ ಅನ್ನೋ ಕುತೂಹಲ ಸೃಷ್ಟಿ ಮಾಡಿವೆ.
ಧನಂಜಯ್ ಜೊತೆಗೆ ನಟಿ ಅಮೃತ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಂದ ಬಡವ ರಾಸ್ಕಲ್ ಚಿತ್ರದ ಉಡುಪಿ ಹೋಟೆಲ್ ಹಾಡು ಈಗಾಗಲೇ ಸಿನಿ ಪ್ರೇಕ್ಷಕರ ಮನಗೆದ್ದಿದೆ. ಈ ಚಿತ್ರವನ್ನ ಶಂಕರ್ ಗುರು ನಿರ್ದೇಶನ ಮಾಡಿದ್ದು , ಡಾಲಿ ಪಿಚ್ಚರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಚಿತ್ರಕ್ಕೆ ಪ್ರೀತ ಜಯರಾಮ್ ಛಾಯಗ್ರಹಣವಿದೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಧನಂಜಯ್ ಅಮೃತ ಅಯ್ಯಂಗಾರ್ ಅವರೊಂದಿಗೆ ನಾಗಭೂಷಣ್, ರಂಗಾಯಣರಘು, ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿದ್ದಾರೆ.

ಬಡವ ರಾಸ್ಕಲ್ ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಡಿಸೆಂಬರ್ 24ಕ್ಕೆ ಕ್ರಿಸ್ಮಸ್ ಪ್ರಯುಕ್ತ ಚಿತ್ರ ತೆರೆ ಕಾಣಲಿದೆ. ಡಿಸೆಂಬರ್‌ನಲ್ಲಿ ಬಡವ ರಾಸ್ಕಲ್ ಮಾತ್ರವಲ್ಲ ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪ ಕೂಡ ರಿಲೀಸ್ ಆಗುತ್ತಿದೆ. ಪುಷ್ಪ ಚಿತ್ರದಲ್ಲಿ ಧನಂಜಯ್ ಅವರದ್ದು ಪ್ರಮುಖ ಪಾತ್ರ. ಈಗಾಗಲೇ ಧನಂಜಯ್ ಲುಕ್ ಕೂಡ ರಿಲೀಸ್ ಆಗಿದೆ. ಹಲವು ಬಾರಿ ಪುಷ್ಪ ಬಗ್ಗೆ ಮಾತನಾಡುತ್ತಾ ಧನಜಂಯ್ ಸಿನಿಮಾದಲ್ಲಿ ತಮ್ಮ ಪಾತ್ರ ಚೆನ್ನಾಗಿದೆ ಅನ್ನುವುದನ್ನು ಹೇಳಿಕೊಂಡಿದ್ದಾರೆ. ಧನಂಜಯ್ ಸದ್ಯ ಯಾವುದೋ ಒಂದು ರೀತಿಯ ಕಥೆ ಅಥವಾ ಸಿನಿಮಾಗಳಿಗೆ ಜೋತು ಬೀಳುತ್ತಿಲ್ಲ. ಬದಲಿಗೆ ತಮಗೆ ಇಷ್ಟ ಆಗುವ ಎಲ್ಲಾ ಪಾತ್ರಗಳನ್ನೂ ಮಾಡುತ್ತಿದ್ದಾರೆ. ಹಾಗಾಗಿಯೇ ಧನಂಜಯ್ ಕನ್ನಡ ಸೇರಿದಂತೆ ಪರಭಾಷೆಯಲ್ಲೂ ಸಾಲು ಸಾಲು ಭಿನ್ನ ಚಿತ್ರಗಳಲ್ಲಿ ಭೀನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವರ್ಷ ಅಂತೂ ಧನಂಜಯ್‌ಗೆ ಭರ್ಜರಿ ಹಬ್ಬವೆಂದೇ ಹೇಳ ಬಹುದು. ರತ್ನನ್ ಪ್ರಪಂಚ, ಸಲಗ ಆಯ್ತು ಈಗ ಡಿಸೆಂಬರ್‌ನಲ್ಲಿ ಒಂದು ಕಡೆ ಪುಷ್ಪ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರೆ, ಮತ್ತೊಂದು ಕಡೆ ಬಡವ ರಾಸ್ಕಲ್‌ನಲ್ಲಿ ನಾಯಕನಾಗಿ ಡಾಲಿ ಅಭಿನಯಿಸಿದ್ದಾರೆ. ಬಡವ ರಾಸ್ಕಲ್ ಚಿತ್ರದಲ್ಲಿ ಧನಂಜಯ್ ಒಬ್ಬ ಸಾಮಾನ್ಯ ಹುಡುಗನಾಗಿ ಕಾಣಿಸಿಕೊಳ್ಳುವ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಇದರಲ್ಲಿ ಸ್ನೇಹ ಮತ್ತು ಪ್ರೀತಿಯ ನವಿರಾದ ಕಥೆಯನ್ನು ಬಿಚ್ಚಿಡಲಾಗಿದೆ. ಇದೇನೆ ಇದ್ದರು ಸಿನಿಮಾ ರಿಲೀಸ್ ಆದ ಬಳಿಕಾ ಅಷ್ಟೇ ಚಿತ್ರದ ಅಸಲಿಯತ್ತು ತಿಳಿಯುತ್ತೆ.


Click it and Unblock the Notifications











