ಅಲ್ಲಿ ನೋಡು ಬಡವ ರಾಸ್ಕಲ್, ಇಲ್ಲಿ ನೋಡು ಬಡವ ರಾಸ್ಕಲ್: ಎಲ್ಲಿ ನೋಡಿದ್ರೂ 'ಬಡವ ರಾಸ್ಕಲ್'!
ಅಲ್ಲಿ ನೋಡು ಗಣೇಶ... ಇಲ್ಲಿ ನೋಡು ಗಣೇಶ... ಆಕಾಶ ನೋಡು ಗಣೇಶ.. ಭೂಮಿ ನೋಡು ಗಣೇಶ.. ಎನ್ನುವ ಘೋಷಣೆಗಳು ಗಣೇಶ ಹಬ್ಬಕ್ಕೆ ಕೇಳಿ ಬರುವುದು ಸರ್ವೇ ಸಾಮಾನ್ಯ. ಆದರೀಗ ಇದು ಕನ್ನಡದ 'ಬಡವ ರಾಸ್ಕಲ್' ಚಿತ್ರಕ್ಕೆ ಅನ್ವಯಿಸುತ್ತಿದೆ. ಎಲ್ಲಿ ನೋಡಿದರು 'ಬಡವ ರಾಸ್ಕಲ್' ಚಿತ್ರದ ಬೋರ್ಡ್ ಕಾಣಿಸುತ್ತಿದೆ.
'ಬಡವ ರಾಸ್ಕಲ್' ಚಿತ್ರದ ರಿಲೀಸ್ ದಿನಾಂಕ ಹತ್ತಿರ ಬರುತ್ತಿದೆ. ಚಿತ್ರದ ರಿಲೀಸ್‌ಗೆ ಇನ್ನು ಒಂದು ತಿಂಗಳು ಬಾಕಿ ಇದೆ. ಆದರೆ ಅದಾಗಲೇ ಈ ಚಿತ್ರ ವಿಭಿನ್ನವಾಗಿ ಪ್ರಚಾರಗೊಳ್ಳುತ್ತಿದೆ.
ಹಾಗಂತ ಪ್ರಚಾರಕ್ಕಾಗಿ ಯಾವುದೋ ಸ್ಟಾರ್ ನಟ, ನಟಿ ಅಥವಾ ಪರಭಾಷೆಯ ಸ್ಟಾರ್‌ಗಳು ಬಂದಿಲ್ಲ. ಬದಲಿಗೆ ಸಾಮಾನ್ಯ ವ್ಯಕ್ತಿ ಈ ಚಿತ್ರದ ಪ್ರಚಾರದ ಭಾಗವಾಗಿದ್ದಾನೆ. ಸಿನಿ ಪ್ರೇಮಿಗಳೇ ಈ 'ಬಡವ ರಾಸ್ಕಲ್'ಗೆ ಸಾಥ್ ನೀಡುತ್ತಲಿದ್ದಾರೆ.

'ಬಡವ ರಾಸ್ಕಲ್' ವಿಭಿನ್ನ ಪ್ರಚಾರ!
ಕನ್ನಡದ ಬಹು ಬೇಡಿಕೆಯ ನಟ ಡಾಲಿ ಧನಂಜಯ ಅವರ ಚೊಚ್ಚಲ ನಿರ್ಮಾಣದ ಚಿತ್ರ ಬಡವ ರಾಸ್ಕಲ್ ಡಿಸೆಂಬರ್ 24 ರಂದು ತೆರೆಯ ಮೇಲೆ ಬರಲಿದೆ. ಬಹಳ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರ ಮನಸೂರೆಗೊಳಿಸುತ್ತಿರುವ ಧನಂಜಯ ಅವರು ಈ ಚಿತ್ರದಲ್ಲಿಯೂ ವಿಷೇಶ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದಿನಸಿ ಅಂಗಡಿ, ತರಕಾರಿ ಅಂಗಡಿಯಲ್ಲೂ 'ಬಡವ ರಾಸ್ಕಲ್'!
ಇತ್ತೀಚಿಗೆ ಬಡವ ರಾಸ್ಕಲ್ ಚಿತ್ರಕ್ಕೆ ಹೊಸ ರೀತಿಯಲ್ಲಿ ಅಭಿಮಾನಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ಸ್ವಯಂಪ್ರೇರಿತರಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಶಾಲಾ ಮಕ್ಕಳಿಂದ ಹಿಡಿದು ದಿನಸಿ ಅಂಗಡಿ, ತರಕಾರಿ ಅಂಗಡಿ, ಮಾಂಸದ ಅಂಗಡಿ, ಕಾರು ಗ್ಯಾರೇಜ್, ಆಟೋ ಚಾಲಕರವರೆಗೂ ಬಹಳ ವರ್ಗಗಳಲ್ಲಿ ದುಡಿಯುವ ಕನ್ನಡಾಭಿಮಾನಿಗಳು ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ.

ಅದ್ಧೂರಿ ಪಾತ್ರವರ್ಗದ ಚಿತ್ರ 'ಬಡವ ರಾಸ್ಕಲ್'!
'ಡಾಲಿ ಪಿಕ್ಚರ್' ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಧನಂಜಯ್ ಮುಂದಿನ ಚಿತ್ರಕ್ಕೆ ಕೌನ್‌ಡೌನ್!
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ. ಈ ಚಿತ್ರವನ್ನು ಕರ್ನಾಟಕದಾದ್ಯಂತ ಕೆಆರ್‌ಜಿ ಸ್ಟೂಡಿಯೋಸ್ ಬಿಡುಗಡೆ ಮಾಡಲಿದೆ.


Click it and Unblock the Notifications











