ಯುವ ದಸರಾದಲ್ಲಿ ಕನ್ನಡಿಗರ ಹೃದಯ ಗೆದ್ದ ಬಾದ್‌ಶಾ, ಅಪ್ಪು ನೆನೆದು ಕಣ್ಣೀರಾದ ಬಾಲಿವುಡ್ ಗಾಯಕ...!
ಒಂದು ಕಡೆ ಕನ್ನಡದವರಾಗಿ, ಕನ್ನಡದ ಅನ್ನವನ್ನು ತಿನ್ನುತ್ತಾ, ಕನ್ನಡದ ವಾತಾವರಣದಲ್ಲಿ ಬೆಳೆಯುವ ಅನೇಕರು ಕನ್ನಡ ಕಲಿಯಲು ಹಿಂದೇಟು ಹಾಕುತ್ತಾರೆ. ಕನ್ನಡ ಚಿತ್ರರಂಗದಿಂದನೇ ವೃತ್ತಿಯನ್ನು ಶುರು ಮಾಡಿ ಖ್ಯಾತಿಯ ಉತ್ತುಂಗಕ್ಕೇರಿದ ರಶ್ಮಿಕಾ ಮಂದಣ್ಣ ಸೇರಿ ಅನೇಕರು ಕನ್ನಡತಿಯರು ಕನ್ನಡ ಗೊತ್ತಿಲ್ಲ ಎನ್ನುತ್ತಾರೆ. ಇವರೆಲ್ಲರ ನಡುವೆ ಬಾಲಿವುಡ್‌ನ ಸಿಂಗರ್ ಬಾದ್‌ಶಾ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ಕನ್ನಡದ ಮಣ್ಣಿನಲ್ಲಿ ಕಣ್ಣೀರನ್ನು ಹಾಕಿದ್ದಾರೆ. ಕನ್ನಡಿಗರನ್ನು ಭಾವುಕರಗಾಸಿ ಕನ್ನಡಿಗರ ಹೃದಯವನ್ನೂ ಗೆದ್ದಿದ್ದಾರೆ.
ಹೌದು, ಮೈಸೂರಿನ ಯುವ ದಸರಾದಲ್ಲಿ ತಮ್ಮ ಚಿನ್ನದ ಕಂಠವನ್ನು ಕುಣಿಸಲು ಬಂದಿದ್ದ ಬಾದ್‌ಶಾ, ನಾನು ಯಾವ ಸ್ಟಾರ್ ಅಲ್ಲ, ಸೂಪರ್ ಸ್ಟಾರ್ ಅಲ್ಲ ಎಂದಿದ್ದಾರೆ. ನಾನು ನನ್ನಲ್ಲಿನ ಭಾವನೆಗಳಿಗೆ ಅಕ್ಷರದ ರೂಪ ಕೊಡುತ್ತೇನೆ ಅಷ್ಟೇ ನನಗೆ ಹೇಗೆ ಬರೆಯಬೇಕು ಅನ್ನುವುದು ಮಾತ್ರ ಗೊತ್ತು ಎಂದು ಹೇಳಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಇವತ್ತು ನಾನು ಇಲ್ಲಿದ್ದೇನೆ ನಿಮ್ಮೆಲ್ಲರಿಗೆ ನಾನು ಸದಾ ಋಣಿ ಎಂದು ಹೇಳಿದ್ದಾರೆ. ನಾನು ನಿಮ್ಮಲ್ಲಿ ಒಬ್ಬ ಎಂದು ಹೇಳಿದ್ದಾರೆ. ಈ ಎಲ್ಲ ಮಾತುಗಳನ್ನು ಬಾದ್ ಶಾ ಮಾತನಾಡಿದ್ದು ಹಿಂದಿಯಲ್ಲಿ, ಇಂಗ್ಲೀಷ್‌ನಲ್ಲಿ ಅಲ್ಲ ಬದಲಿಗೆ ಕನ್ನಡದಲ್ಲಿ ಅನ್ನುವುದು ವಿಶೇಷ.

ಇನ್ನೂ ಇದೇ ಸಮಯದಲ್ಲಿ ಯುವ ದಸರಾ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಕೂಡ ನೆನಯಲಾಯಿತು. ಯಾರು ಯಾವತ್ತು ಮರೆಯಲಾಗದ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಹಾಡನ್ನು ಹಾಕಲಾಯಿತು. ಈ ಸಮಯದಲ್ಲಿ ಹಾಡನ್ನು ಕೇಳುತ್ತಾ ಭಾವುಕರಾದ ಬಾದ್‌ಶಾ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಕೈ ಮುಗಿದು ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ಈ ಮೂಲಕ ನಮನವನ್ನು ಕೂಡ ಬಾದ್ ಶಾ ಸಲ್ಲಿಸಿದ್ದಾರೆ.
ಸದ್ಯಕ್ಕೆ ಬಾದ್‌ಶಾ ಅವರ ಈ ನಡೆ ಮತ್ತು ನುಡಿ ಕನ್ನಡಿಗರ ಹೃದಯ ಗೆದ್ದಿದೆ. ಬಾದ್‌ಶಾ ಅವರ ಯುವ ದಸರಾ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬಾದ್ ಶಾ ಅವರ ಕನ್ನಡಾಭಿಮಾನವನ್ನು ಮೆಚ್ಚಿಕೊಂಡಿರುವ ಅನೇಕರು, ಬಾಲಿವುಡ್‌ನ ಗಾಯಕನಿಗೆ ಉಘೇ ಉಘೇ ಎನ್ನುತ್ತಿದ್ದಾರೆ. ಕರ್ನಾಟಕಕ್ಕೆ ವಲಸೆ ಬಂದು ಪುಂಡಾಟದ ಪ್ರದರ್ಶನ ಮಾಡುವ ಪರಭಾಷಿಕರು ಬಾದ್‌ಶಾ ಅವರ ಈ ಮಾತುಗಳನ್ನು ಕೇಳಬೇಕು, ಯುವ ದಸರಾ ಕಾರ್ಯಕ್ರಮದ ವಿಡಿಯೋಗಳನ್ನು ನೋಡಬೇಕೆಂದು ಆಗ್ರಹಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಬಾದ್‌ಶಾ ಸಲ್ಲಿಸಿರುವ ಭಾವುಕ ನಮನವನ್ನು ಕಂಡು ಅನೇಕರು ಭಾವುಕರಾಗುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
Baadshah gets emotional during Yuva Dasara live concert 💔#YuvaDasara #MysuruDasara #AppulivesOn pic.twitter.com/BjlNLPi8vl
— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) October 8, 2024
ಅಂದ್ಹಾಗೇ ಉತ್ತನಹಳ್ಳಿಯ ಹೊರವಲಯದಲ್ಲಿ ಆಯೋಜಿಸಿದ್ದ ಯುವ ದಸರಾದ ಮೂರನೇ ದಿನದ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಜನಸಾಗರವೇ ಹರಿದು ಬಂದಿತ್ತು. ಇನ್ನೂ ಡಿಜೆ ಬೀಟ್ಸ್‌ನೊಂದಿಗೆ ರ್ಯಾಪ್ ಮಾಡುವ ಮೂಲಕ ಬಾದ್‌ಶಾ ಎಲ್ಲರನ್ನು ಆರಂಭದಲ್ಲಿ ಹುಚ್ಚೆಬ್ಬಿಸಿದರು. ಕುಂತಲ್ಲೇ ಕುಣಿಯುವಂತೆ ಮಾಡಿದರು. ಹೇ ಲಡ್ಕಿ ಬ್ಯೂಟಿಫುಲ್ ಹಾಡನ್ನು ಸೇರಿ ಅನೇಕ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಇನ್ನು ಇಂದು ಎ.ಆರ್. ರಹಮಾನ್ ಹಾಗೂ ತಂಡದಿಂದ ಸಂಗೀತ ರಸ ಸಂಜೆ ನಡೆಯುತ್ತಿದ್ದು ಅಕ್ಟೋಬರ್ 10ರಂದು ಹಿರಿಯ ಸಂಗೀತ ನಿರ್ದೇಶಕ ಇಳಯ ರಾಜ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಉಳಿದಂತೆ ಬಾದ್ ಶಾ ಅವರ ಮೂಲ ಹೆಸರು ಆದಿತ್ಯ ಪ್ರತೀಕ್ ಸಿಂಗ್, ದೆಹಲಿಯಲ್ಲಿ ಜನಿಸಿದ ಇವರು ಸದ್ಯಕ್ಕೆ ಬಾಲಿವುಡ್‌ನಲ್ಲಿ ಬಾದ್‌ಶಾ ಎಂದೇ ಖ್ಯಾತಿಯನ್ನು ಗಳಿಸಿದ್ದಾರೆ. ಹಾಡು ಹಾಡುವುದರ ಜೊತೆಯಲ್ಲಿ ಕೆಲ ಚಿತ್ರಗಳಲ್ಲಿ ಬಾದ್ ಶಾ ಅತಿಥಿ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ.
Baadshah gave slippershot to all northies who were shown attitude to speak in kannada
— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) October 8, 2024
ನಾನು ನಿಮ್ಮಲ್ಲಿ ಒಬ್ಬ
ನಿಮ್ಮ ಪ್ರೀತಿಗೆ ಚಿರಋಣಿ ♥️ - Baadshah in Today's Yuva Dasara #Mysuru pic.twitter.com/ToO6GBHdZp


Click it and Unblock the Notifications











