Yash19: ಗಣೇಶನ ಮೊರೆಹೋದ ಅಭಿಮಾನಿಗಳು: ಇನ್ಯಾವ್ ಕಾಲಕ್ಕೆ ಯಶ್‌19 ಅಪ್‌ಡೇಟ್?

ಗಣೇಶ ಹಬ್ಬಕ್ಕೂ ಯಶ್‌19 ಅಪ್‌ಡೇಟ್ ಮಾತ್ರ ಸಿಗಲೇಯಿಲ್ಲ. ಅಭಿಮಾನಿಗಳು ಪ್ರತಿ ಹಬ್ಬಕ್ಕೂ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಘೋಷಣೆ ಆಗುತ್ತೆ ಎಂದು ಕಾದಿದ್ದೇ ಬಂತು. ಯಾವುದೇ ಪ್ರಯೋಜನ ಆಗಲಿಲ್ಲ. ಪರಿಪರಿಯಾಗಿ ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದು ಕೇಳಿಸಲಿಲ್ಲ ಎನಿಸುತ್ತದೆ. ಅದಕ್ಕೆ ಅಭಿಮಾನಿಗಳು ಈಗ ಗಣೇಶನ ಮೊರೆ ಹೋಗಿದ್ದಾರೆ.

'KGF'-2 ಸಿನಿಮಾ ಬಂದೋಗಿ ಒಂದೂವರೆ ವರ್ಷ ಆದರೂ ಯಶ್ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು ಅನ್ನುವ ಸುಳಿವು ಸಿಕ್ಕಿಲ್ಲ. ಒಟ್ನಲ್ಲಿ ದೊಡ್ಡದಾಗಿ ಏನೋ ಪ್ಲ್ಯಾನ್ ಮಾಡ್ತಿದ್ದಾರೆ ಅನ್ನೋದು ಮಾತ್ರ ಗೊತ್ತಾಗ್ತಿದೆ. ಆದರೆ ಸಿನಿಮಾ ಅನೌನ್ಸ್ ಮಾಡೋದು ಯಾವಾಗ? ಶುರುವಾಗೋದು ಯಾವಾಗ? ಶೂಟಿಂಗ್ ಮುಗಿದು ರಿಲೀಸ್ ಆಗೋದ್ಯಾವಾ? ಅಂತೆಲ್ಲಾ ಅಭಿಮಾನಿಗಳಯ ತಲೆ ಕೆಡಿಸಿಕೊಂಡಿದ್ದಾರೆ. 'KGF' ಸರಣಿ ಬ್ಲಾಕ್ ಬಸ್ಟರ್ ಬಳಿಕ ಯಶ್ ಕತೆ ಆಯ್ಕೆಯಲ್ಲಿ ಒತ್ತಡಕ್ಕೆ ಸಿಲುಕಿದಂತೆ ಕಾಣುತ್ತಿದೆ.

Bagalkote-Yash-Fans-pooja-yash19

ಸ್ಟಾರ್ ನಟರು ಒಂದು ಸಿನಿಮಾ ಮುಗಿಯೋಕು ಮುನ್ನ ಮತ್ತೊಂದು ಸಿನಿಮಾ ಲೈನಪ್ ಮಾಡಿಕೊಳ್ಳುತ್ತಾರೆ. ಆದರೆ ಯಶ್ ಯಾಕೆ ಇಷ್ಟೊಂದು ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ಗಣೇಶ ಹಬ್ಬಕ್ಕೆ ಯಶ್ ಸಿಹಿಸುದ್ದಿ ಕೊಡ್ತಾರೆ ಅಂದುಕೊಂಡವರಿಗೆ ನಿರಾಸೆಯಾಗಿದೆ. ದಸರಾ, ದೀಪಾವಳಿ ಅಥವಾ ಮುಂದಿನ ವರ್ಷಕ್ಕೆ ತಮ್ಮ ಯಶ್‌19 ಕೊಡ್ತಾರಾ? ಎಂದು ಕಾಯುವಂತಾಗಿದೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಗುಸುಗುಸು ಬಹಳ ದಿನಗಳಿಂದ ಕೇಳಿಬರ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ನಾನು ಹೇಳುವವರೆಗೂ ಯಾವುದನ್ನು ನಂಬಬೇಡಿ ಎಂದು ರಾಕಿಂಗ್ ಸ್ಟಾರ್ ಈಗಾಗಲೇ ಹೇಳಿಬಿಟ್ಟಿದ್ದಾರೆ. ಹಾಗಾಗಿ ಅಧಿಕೃತ ಮಾಹಿತಿಗಾಗಿಯೇ ಎಲ್ಲರೂ ಕಾಯುವಂತಾಗಿದೆ.

60ರ ದಶಕದ ಗೋವಾ ಡ್ರಗ್ಸ್ ದಂಧೆ ಹಿನ್ನೆಲೆಯಲ್ಲಿ ಯಶ್‌19 ಸಿನಿಮಾ ಬರುತ್ತೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ. ಮಲಯಾಳಂ ನಿರ್ದೇಶಕಿ ಲತಾ ಮೆನನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನುವ ವದಂತಿ ಕೂಡ ಹರಡಿತ್ತು. ಯಶ್ ಫ್ಯಾಮಿಲಿ ಸಮೇತ ಇತ್ತೀಚೆಗೆ ಗೋವಾಗೆ ಹೋಗಿದ್ದು ಅವರ ಕೈಯಲ್ಲಿದ್ದ ಟ್ಯಾಟೂ ಸಾಕಷ್ಟು ಚರ್ಚೆಗೆ ಇಂಬು ನೀಡಿದೆ. ಇನ್ನು ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲೊ ಯಶ್‌19 ಸಿನಿಮಾ ನಿರ್ಮಾಣ ಆಗುತ್ತದೆ ಎನ್ನುವ ಗಾಳಿಸುದ್ದಿ ಕೂಡ ಬಹಳ ದಿನಗಳ ಕೇಳಿಬರ್ತಾನೇ ಇದೆ.

Bagalkote-Yash-Fans-pooja-yash19

ಅಭಿಮಾನಿಗಳು ಯಶ್‌19 ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. 'ಯಶ್‌ ಕಾಣೆಯಾಗಿದ್ದಾರೆ' ಎನ್ನುವ ಪೋಸ್ಟ್ ಕೂಡ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಗಣೇಶನಿಗೆ ಪೂಜೆ ಸಲ್ಲಿಸಿ ಯಶ್‌19 ಅಪ್‌ಡೇಟ್ ಕೊಡ್ಸಪ್ಪ ಎಂದು ಪ್ರಾರ್ಥಿಸಿದ್ದಾರೆ. ಬಾಗಲಕೋಟೆಯಲ್ಲಿನ ಅಭಿಮಾನಿಗಳ ಸಂಘವೊಂದು ಬೇಗ ಯಶ್‌19 ಅನೌನ್ಸ್‌ಮೆಂಟ್ ಆಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದೆ.

'ಪ್ಲೀಸ್ ಅನೌನ್ಸ್ ಯಶ್‌19' ಎನ್ನುವ ಬ್ಯಾನರ್‌ ಗಣೇಶನ ಮುಂದೆ ಹಿಡಿದು ಅಭಿಮಾನಿಗಳು ಪೋಸ್ ನೀಡಿದ್ದಾರೆ. ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಆ ಮೂಲಕ ತಮ್ಮ ಬೇಡಿಕೆ ಇಟ್ಟಿದ್ದಾರೆ. ಸದ್ಯ ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗವನ್ನು ಎಲ್ಲರೂ ತಿರುಗಿ ನೋಡುವಂತಹ ಸಿನಿಮಾ ಮಾಡಬೇಕು ಎನ್ನುವ ಕನಸು ಕಂಡಿದ್ದ ಯಶ್ ಅದನ್ನು ಮಾಡಿ ತೋರಿಸಿದ್ದಾರೆ. ಇದೀಗ ಅದನ್ನೂ ಮೀರಿ ಏನೋ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ತಡವಾಗುತ್ತಿದೆ ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ.

ಪ್ಯಾನ್ ಇಂಡಿಯಾ ಜಮಾನದಲ್ಲಿ ಒಂದು ಸಿನಿಮಾ ನಿರ್ಮಾಣವಾಗಿ ರಿಲೀಸ್ ಆಗೋಕೆ 2 ವರ್ಷ ಹಿಡಿಯುತ್ತಿದೆ. ಹಾಗಾದರೆ ಯಶ್19 ತೆರೆಗೆ ಬರೋದು ಯಾವಾಗ? ಎನ್ನುವ ಗೊಂದಲ ಮೂಡುವುದು ಸಹಜ. ಹಾಗಾಗಿಯೇ ಅಭಿಮಾನಿಗಳು ಈ ಪರಿಯಾಗಿ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಾವಾಗ ಸಿನಿಮಾ ಘೋಷಿಸುತ್ತಾರೋ ಕಾದು ನೋಡಬೇಕಿದೆ.

More from Filmibeat

English summary
Bagalkote Yash Fans special request to lord Ganesh For Yash19 Update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X