ಪಟಾಕಿ ಹಬ್ಬಕ್ಕೆ ಈ ವರ್ಷ ಚಿತ್ರಮಂದಿರಗಳಲ್ಲಿ ಸದ್ದು ಮಾಡಲಿರುವ 8 ಚಿತ್ರಗಳ ಪಟ್ಟಿ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಶುರುವಾಗುತ್ತದೆ. ಹಬ್ಬದ ಸಡಗರದಲ್ಲಿ ದೊಡ್ಡ ದೊಡ್ಡ ಚಿತ್ರಗಳನ್ನು ತೆರೆಗೆ ತರುವ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ದೀಪಾವಳಿಗೆ ಅತ್ತ ಬಾಲಿವುಡ್ ಇತ್ತ ಸೌತ್‌ ಸಿನಿದುನಿಯಾದಲ್ಲಿ ಸಿನಿಮೋತ್ಸವ ಕಳೆ ಕಟ್ಟುತ್ತದೆ. ಈ ಬಾರಿಯೂ ಅಂಥದ್ದೇ ಸಡಗರ ಕಂಡುಬರುತ್ತಿದೆ.

ಸಾಮಾನ್ಯವಾಗಿ ತಮಿಳು ಚಿತ್ರರಂಗದಲ್ಲಿ ದೀಪಾವಳಿಗೆ ದೊಡ್ಡ ಸಿನಿಮಾಗಳು ತೆರೆಗರ ಬರುತ್ತಿದ್ದವು. ಆದರೆ ಈ ಬಾರಿ ರಜನಿಕಾಂತ್ ಹಾಗೂ ದಳಪತಿ ವಿಜಯ್ ನಟಿಸಿದ ಚಿತ್ರಗಳು ತೆರೆಗೆ ಬಂದಿವೆ. ಸೂರ್ಯ ನಟನೆಯ 'ಕಂಗುವ' ನವೆಂಬರ್ 15ಕ್ಕೆ ಬರಲಿದೆ. ಇನ್ನುಳಿದಂತೆ ಎರಡು ಚಿತ್ರಗಳು ಈ ವಾರ ಪ್ರೇಕ್ಷಕರ ಮುಂದೆ ಬರ್ತಿದ್ದು 'ಜೀಬ್ರಾ' ರಿಲೀಸ್ ಮುಂದೂಡಲಾಗಿದೆ.

Bagheera to singham gain 8 Films Which ready to Release During diwali 2024

ಅತ್ತ ಬಾಲಿವುಡ್‌ನಲ್ಲಿ ಎರಡೂ ಸೀಕ್ವೆಲ್ ಚಿತ್ರಗಳ ನಡುವೆ ದೀಪಾವಳಿ ಬಾಕ್ಸಾಫೀಸ್ ಫೈಟ್ ನಡೆಯಲಿದೆ. ಎರಡೂ ಕೂಡ ಮಲ್ಟಿಸ್ಟಾರರ್ ಚಿತ್ರಗಳೇ ಎನ್ನುವುದು ವಿಶೇಷ. ಈ ಬಾರಿ ಬೆಳಕಿ ಹಬ್ಬಕ್ಕೆ ಬರ್ತಿರುವ ಚಿತ್ರಗಳ ಪಟ್ಟಿ ಮುಂದೆ ಇದೆ ಓದಿ.

1. ಬಘೀರ

ಕನ್ನಡದಲ್ಲಿ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಅಕ್ಟೋಬರ್ 31ಕ್ಕೆ ತೆರೆಗೆ ಬರ್ತಿದೆ. ಪ್ರಶಾಂತ್ ನೀಲ್ ಚಿತ್ರಕ್ಕೆ ಕಥೆ ಬರೆದಿದ್ದು ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ರುಕ್ಮಣಿ ವಸಂತ್ ನಾಯಕಿಯಾಗಿ ಮಿಂಚಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ.

2. ಸಿಂಗಂ ಅಗೇನ್

ರೋಹಿಟ್ ಶೆಟ್ಟಿ ನಿರ್ದೇಶನದ 'ಸಿಂಗಂ ಅಗೇನ್' ಸಿನಿಮಾ ನವೆಂಬರ್ 1ಕ್ಕೆ ಬಿಡುಗಡೆ ಆಗುತ್ತಿದೆ. ಅಜಯ್‌ ದೇವಗನ್, ಕರೀನಾ ಕಪೂರ್, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ ರೀತಿಯ ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೈವೋಲ್ಟೇಜ್ ಪೊಲೀಸ್ ಡ್ರಾಮಾ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

Bagheera to singham gain 8 Films Which ready to Release During diwali 2024

3. ಭೂಲ್ ಭುಲೈಯಾ-3

ಮಲಯಾಳಂನ 'ಮಣಿ ಚಿತ್ರತ್ತಾಳ್' ಚಿತ್ರದ ರೀಮೆಕ್ 'ಆಪ್ತಮಿತ್ರ' ಗೆದ್ದಿತ್ತು. ಬಳಿಕ ಈ ಚಿತ್ರ ಹಿಂದಿ, ತಮಿಳಿಗೂ ಹೋಗಿತ್ತು. ಆದರೆ ಅದೇ ಸರಣಿ ಮುಂದುವರೆಸಿ ಹಿಂದಿಯಲ್ಲಿ ಸೀಕ್ವೆಲ್ ಮಾಡಿದ್ದರು. ಇದೀಗ 3ನೇ ಭಾಗ ಸಿದ್ಧವಾಗಿದೆ. ಈ ಹಾರರ್ ಕಾಮಿಡಿ ಚಿತ್ರಕ್ಕೆ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದಾರೆ. ಕಾರ್ತಿಕ್ ಆರ್ಯನ್, ವಿದ್ಯಾಬಾಲನ್, ಮಾಧುರಿ ದೀಕ್ಷಿತ್ ಈ ಭಾಗದಲ್ಲಿದ್ದಾರೆ. ಚಿತ್ರ ನವೆಂಬರ್ 1ಕ್ಕೆ ತೆರೆಗೆ ಬರಲಿದೆ.

4. ಅಮರನ್

ತಮಿಳಿನಲ್ಲಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟನೆಯ 'ಅಮರನ್' ಸಿನಿಮಾ ಈ ವಾರ ಬಿಡುಗಡೆ ಆಗಲಿದೆ. ಮೇಜರ್ ಮುಕುಂದ್ ವರದರಾಜನ್ ಜೀವನಾಧರಿತ ಚಿತ್ರ ಇದಾಗಿದ್ದು ರಾಜ್‌ಕುಮಾರ್ ಪೆರಿಯಾಸಾಮಿ ನಿರ್ದೇಶನವಿದೆ. ಈ ಬಯೋಪಿಕ್ ಚಿತ್ರ ಅಕ್ಟೋಬರ್ 31ಕ್ಕೆ ದೀಪಾವಳಿ ಸಂಭ್ರಮದಲ್ಲಿ ರಿಲೀಸ್ ಆಗಲಿದೆ.

5. ಬ್ರದರ್

ಜಯಂ ರವಿ ಹಾಗೂ ಪ್ರಿಯಾಂಕ ಮೋಹನ್ ನಟನೆಯ 'ಬ್ರದರ್' ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಚಿತ್ರಕ್ಕೆ ರಾಜೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಸ್ಕ್ರೀನ್ ಸೀನ್ ಮೀಡಿಯಾ ಎಂಟರ್ಟೈನ್ಮೆಂಟ್ ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ.

6. ಲಕ್ಕಿ ಭಾಸ್ಕರ್

ದುಲ್ಕರ್ ಸಲ್ಮಾನ್ ನಟನೆಯ ತೆಲುಗಿನ 'ಲಕ್ಕಿ ಭಾಸ್ಕರ್' ಚಿತ್ರಕ್ಕೂ ಅಕ್ಟೋಬರ್ 31ರಂದು ಬಿಡುಗಡೆ ಭಾಗ್ಯ ಸಿಗಲಿದೆ. ವೆಂಕಿ ಅಟ್ಲೂರಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಲಯಾಳಂ ನಟ ದುಲ್ಕರ್ ಇತ್ತೀಚೆಗೆ ಸ್ಟ್ರೈಟ್ ತೆಲುಗು ಚಿತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಇನ್ನು ತೆಲುಗಿನ 'ಕ' ಎನ್ನುವ ಸಿನಿಮಾ ಕೂಡ ದೀಪಾವಳಿಗೆ ತೆರೆಗೆ ಬರಲಿದೆ.

More from Filmibeat

English summary
South and Bollywood Films releasing in Diwali 2024 season;
Read more about: diwali sandalwood bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X