»   » 'ಬಾಹುಬಲಿ-2' ಚಿತ್ರದ ವಿಡಿಯೋ ಲೀಕ್: ಓರ್ವ ವ್ಯಕ್ತಿ ಅರೆಸ್ಟ್

'ಬಾಹುಬಲಿ-2' ಚಿತ್ರದ ವಿಡಿಯೋ ಲೀಕ್: ಓರ್ವ ವ್ಯಕ್ತಿ ಅರೆಸ್ಟ್

Written By:
Subscribe to Filmibeat Kannada

ಚಿತ್ರಜಗತ್ತಿನ ಬಹುನಿರೀಕ್ಷಿತ 'ಬಾಹುಬಲಿ-2' ಚಿತ್ರದ ಮೇಕಿಂಗ್ ವಿಡಿಯೋ ಲೀಕ್ ಆಗಿದೆ. 9 ನಿಮಿಷದ ಯುದ್ದದ ದೃಶ್ಯಗಳು ಲೀಕ್ ಆಗಿದ್ದು, ಚಿತ್ರಕ್ಕೆ ಸಂಬಂಧಿಸಿದ ಗ್ರಾಫಿಕ್ಸ್ ಡಿಸೈನರ್ ಕೃಷ್ಣ ಎಂಬುವವರನ್ನ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

ಮೇಕಿಂಗ್ ವಿಡಿಯೋ ಲೀಕ್ ಆಗಿರುವ ಸಂಗತಿ ಗೊತ್ತಾದ ನಂತರ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಹಾಗೂ ನಿರ್ಮಾಪಕರು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದ ಸೈಬರ್ ಕ್ರೈಂ ಪೊಲೀಸರು ನವೆಂಬರ್ 16 ರಂದು ಮೇಕಿಂಗ್ ವಿಡಿಯೋ ಲೀಕ್ ಆಗಿದೆ ಎಂಬುದನ್ನ ತಿಳಿಸಿದ್ದಾರೆ. ಬಳಿಕ ಹೈದಾರಬಾದಿನ ಜ್ಯೂಬ್ಲಿ ಹೀಲ್ಸ್ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕರು ಮತ್ತೊಂದು ದೂರು ನೀಡಿದ್ದಾರೆ.

Bahubali 2 Making Scenes Leaked

ಮೂಲಗಳ ಪ್ರಕಾರ, ಲೀಕ್ ಆಗಿರುವ ದೃಶ್ಯಗಳು ಚಿತ್ರದಲ್ಲಿ ಅತಿ ಮುಖ್ಯವಾಗಿದ್ದು, ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಿಸಿದ್ದರು ಎನ್ನಲಾಗಿದೆ. ಖ್ಯಾತ ಸ್ಟುಡಿಯೋಂದರಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದ ವೇಳೆ ಲೀಕ್ ಆಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Bahubali 2 Making Scenes Leaked

ಈ ಹಿಂದೆ 'ಬಾಹುಬಲಿ ದಿ ಬಿಗಿನಿಂಗ್' ಚಿತ್ರದ ಚಿತ್ರೀಕರಣದ ವೇಳೆ ಕೂಡ ಮೇಕಿಂಗ್ ವಿಡಿಯೋ ಲೀಕ್ ಆಗಿತ್ತು. ಆಗಲೂ ಚಿತ್ರಕ್ಕೆ ಸಂಬಂಧಿಸಿದಂತೆ ತಂತ್ರಜ್ಞರನ್ನ ಬಂಧಿಸಲಾಗಿತ್ತು.

English summary
A nine-minute video of the most-awaited Baahubali 2 - The Conclusion' was leaked by a technician of a film studio in the Hyderabad. Bahubali-2 is a much-anticipated venture of director S S Rajamouli and starring Prabhas, rana daggubati, anushka, tamannaah.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada