ಕಿಡ್ನಿ ವೈಫಲ್ಯ ರೂಮರ್ಸ್ ಬಗ್ಗೆ ಮೌನ ಮುರಿದ 'ಬಾಹುಬಲಿ' ನಟ ರಾಣಾ ದಗ್ಗುಬಾಟಿ

ಬಾಹುಬಲಿ ನಟ ರಾಣಾ ದಗ್ಗುಬಾಟಿ ಬಗ್ಗೆ ಇತ್ತೀಚಿಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ. ರಾಣಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರ ತಾಯಿಯೆ ಕಿಡ್ನಿ ದಾನಮಾಡಿದ್ದಾರೆ ಎನ್ನುವ ಮಾತುಗಳು ಭಾರಿ ಚರ್ಚೆಯಾಗುತ್ತಿದೆ. ಕಿಡ್ನಿ ಬದಲಾವಣೆಗಾಗಿ ರಾಣಾ ಯು ಎಸ್ ಎಗೆ ತೆರಳಿದ್ದಾರೆ. ಅವರ ಕುಟುಂಬ ಕೂಡ ಅವರ ಜೊತೆಯೆ ಯು ಎಸ್ ಎ ಗೆ ಹೋಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದ್ದರು ರಾಣಾ ಆಗಲಿ ಅತವಾ ಕುಟುಂಬ ಆಗಲಿ ಯಾವುದೆ ಪ್ರತಿಕ್ರಿಯೆ ನೀಡರಲಿಲ್ಲ. ರಾಣಾ ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ನೋಡಿ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ರು. ಆದ್ರೀಗ ಈ ಬಗ್ಗೆ ರಾಣಾ ಮೌನ ಮುರಿದಿದ್ದಾರೆ.

ಇತ್ತೀಚಿಗೆ ರಾಣಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟ ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಚಿತ್ರಕ್ಕೆ ವಿಶ್ ಮಾಡಿದ್ದಾರೆ ಜೊತೆಗೆ ಯು ಎಸ್ ಎಯಲ್ಲಿ ಇರುವ ಬಗ್ಗೆ ರಿವೀಲ್ ಮಾಡಿದ್ದಾರೆ ರಾಣಾ. ಸಾಮಾಜಿಕ ಜಾಲತಾಣದಲ್ಲಿ ರಾಣಾ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಆರೋಗ್ಯದ ಬಗ್ಗೆ ಪ್ರಶ್ನೆಗಳ ಸುರಿಮಳೆಯೆ ಹರಿಸಿದ್ದಾರೆ.

Bahubali actor Rana Daggubati reacts to kidney transplant rumaours

"ರಾಣಾ ನಿಮ್ಮ ಆರೋಗ್ಯದ ಬಗ್ಗೆ ಸುದ್ದಿ ಓದಿ ತುಂಬ ಚಿಂತಿತನಾಗಿದ್ದೀನಿ" ಎಂದು ಅಭಿಮಾನಿಯೊಬ್ಬ ಕಮೆಂಟ್ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಣಾ "ಅಂತಹ ವಿಷಯಗಳನ್ನು ಓದುವುದನ್ನು ಮೊದಲು ನಿಲ್ಲಿಸಿ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಮತ್ತೊಬ್ಬ ಅಭಿಮಾನಿ "ಯಾಕೆ ನೀವು ಇಷ್ಟು ಸಣ್ಣಗೆ ಆಗಿದ್ದೀರಿ" ಎಂದು ಕೇಳಿದ ಪ್ರಶ್ನೆಗೆ ರಾಣಾ "ಯಾವಾಗಲು ದೈತ್ಯಾಕಾರವಾಗಿ ಕಾಣಲು ಸಾಧ್ಯವಿಲ್ಲ" ಎಂದು ಸ್ವಲ್ಪ ಕಾರವಾಗಿಯೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಾತುಗಳನ್ನು ಕೇಳುತ್ತಿದ್ರೆ ರಾಣಾ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ತಾಯಿಯಿಂದ ಕಿಡ್ನಿ ದಾನ ಪಡೆದಿರುವುದು ಸುಳ್ಳು ಎನ್ನುವ ಅನುಮಾನ ಮೂಡುತ್ತಿದೆ. ಆದ್ರೆ ವಿಡಿಯೋ ಮೂಲಕ ರಾಣಾನೇ ಮಾತನಾಡಿರುವುದರಿಂದ ರಾಣಾ ನೋಡಿ ಅಭಿಮಾನಿಗಳಿಗೆ ಕೊಂಚ ಸಮಾಧಾನವಾಗಿದೆ.

More from Filmibeat

English summary
Bahubali actor Rana Daggubati reacts to kidney transplant rumaours. Rana said to his fan question 'stop reading that stuff'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X