ಬಾಹುಬಲಿ ನಟ ರಾಣಾಗೆ ಕಿಡ್ನಿ ವೈಫಲ್ಯ : ಮಗನಿಗಾಗಿ ಕಿಡ್ನಿ ದಾನ ಮಾಡಿದ ತಾಯಿ
ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಇಡೀ ವಿಶ್ವವೆ ಬೆರಗಾಗುವಂತೆ ಮಾಡಿದ್ದ ಸೂಪರ್ ಹಿಟ್ ಬಾಹುಬಲಿ ಚಿತ್ರದ ಬಲ್ಲಾಳ ದೇವನ ಬಗ್ಗೆ ದೊಡ್ಡ ಬ್ರೇಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಬಾಹುಬಲಿಯಲ್ಲಿ ಬಲ್ಲಾಳದೇವನಾಗಿ ಅಬ್ಬರಿಸಿ ಅಭಿಮಾನಿಗಳ ಹೃದಯಗೆದ್ದಿದ್ದ ರಾಣದಗ್ಗುಬಾಟಿ ಆನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ವೈರಲ್ ಆಗಿದೆ.
ಹೌದು, ರಾಣಾ ದಗ್ಗುಬಾಟಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರಂತೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ರಾಣಾ ಕುಟುಂಬ ಸಮೇತರಾಗಿ ಯು ಎಸ್ ಎಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅನೇಕ ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಣಾ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಆದ್ರೆ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರಾಣಾಗೆ ಅವರ ತಾಯಿಯೆ ಕಿಡ್ನಿಯನ್ನು ದಾನಾ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರ ಕೇಳಿ ರಾಣಾ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಬಗ್ಗೆ ರಾಣಾ ಕಡೆಯಿಂದ ಆಗಲಿ ಅಥವಾ ಅವರ ಆಪ್ತರ ಕಡೆಯಿಂದ ಯಾವುದೆ ಸ್ಪಷ್ಟೀಕರಣ ಬಂದಿಲ್ಲ. ರಾಣಾ ದಿಢೀರನೆ ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳೀಗ ಆತಂಕದಲ್ಲಿದ್ದಾರೆ.

ಇತ್ತೀಚಿಗೆ ರಾಣಾ ವಿರಾಟ ಪರ್ವಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಆದ್ರೆ ಅನೇಕ ದಿನಗಳಿಂದ ರಾಣಾ ಚಿತ್ರೀಕರಣಕ್ಕೆ ಹೋಗಿಲ್ಲವಂತೆ. ಹಾಗಾಗಿ ರಾಣಾ ಬಗ್ಗೆ ಎದ್ದಿರುವ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತೆ ಆಗಿದೆ. ಆದ್ರೆ ಈ ಸುದ್ದಿ ನಿಜಾನಾ ಅಥವಾ ರೂಮರ್ ಎನ್ನುವ ಬಗ್ಗೆ ರಾಣಾನೆ ಬಹಿರಂಗ ಪಡಿಸಬೇಕಾಗಿದೆ.


Click it and Unblock the Notifications











