twitter
    For Quick Alerts
    ALLOW NOTIFICATIONS  
    For Daily Alerts

    'ಬಹುಪರಾಕ್' ನಿರ್ದೇಶಕ ಸುನಿ ಸಂದರ್ಶನ

    By Rajendra
    |

    ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಬಳಿಕ ಸುನಿ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರ ಬಹುಪರಾಕ್. ಸಿಂಪಲ್ ಚಿತ್ರ ಡೈಲಾಗ್ ಪ್ರಧಾನವಾಗಿತ್ತು. ಆದರೆ ಈ ಚಿತ್ರ ಕಂಪ್ಲೀಟ್ ಡಿಫರೆಂಟ್ ಅಂತಾರೆ ಸುನಿ.

    ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಸುರೇಶ್ ಭೈರಸಂದ್ರ ಹಾಗೂ ಅಭಿ ನಿರ್ಮಿಸಿರುವ, ಉಮೇಶ್ ಬಣಕಾರ್ ಅರ್ಪಿಸುವ 'ಬಹುಪರಾಕ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.

    ಸುನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದಾರೆ. ಮೇಘನಾರಾಜ್, ಭಾವನಾರಾವ್(ಗಾಳಿಪಟ), ಸುಂದರರಾಜ್, ಪ್ರಮಿಳಾಜೋಷಾಯಿ, ಮಾನಸ ಜೋಷಿ, ಸುಕೃತ ವಾಗ್ಲೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಬಿ.ಜೆ.ಭರತ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಮನೋಹರ್ ಜೋಷಿ ಅವರ ಛಾಯಾಗ್ರಹಣವಿದೆ. ಸಚಿನ್ ಸಂಕಲನ, ಮಾಸ್‍ಮಾದ ಸಾಹಸ ನಿರ್ದೇಶನ ಬಹುಪರಾಕ್' ಚಿತ್ರಕ್ಕಿದೆ. ಬನ್ನಿ ಈ ಚಿತ್ರದ ಕುರಿತು ಸುನಿ ಏನು ಹೇಳುತ್ತಾರೆ ನೋಡೋಣ.

    ಈ ರೀತಿಯ ಚಿತ್ರಕಥೆಗಳಿಗೆ ಡಿಮ್ಯಾಂಡ್ ಇದೆಯಾ?

    ಈ ರೀತಿಯ ಚಿತ್ರಕಥೆಗಳಿಗೆ ಡಿಮ್ಯಾಂಡ್ ಇದೆಯಾ?

    ಡಿಮ್ಯಾಂಡ್ ಅಂಡ್ ಸಪ್ಲೈ ಎಂಬ ಕಮರ್ಷಿಯಲ್ ವಿಚಾರಕ್ಕೆ ಬಂದಾಗ ಅದು ರೀಮೇಕ್ ಚಿತ್ರಗಳಿಗೆ ಅನ್ವಯಿಸುತ್ತದೆ. ನಾವು ಯಾವಾಗ ಸ್ವಮೇಕ್ ಮಾಡಬೇಕು ಎಂದು ಹೊರಡುತ್ತೇವೋ ಆಗ ಏನಾದರೂ ಹೊಸತನ್ನು ಕೊಡಲು ಬಯಸುತ್ತೇವೆ. ಅದು ನಮ್ಮ ಅಹಂಕಾರವೋ ಏನೋ ಏನಾದರು ಮಾಡಲೇಬೇಕು ಎಂಬ ಛಲ ಬಂದುಬಿಡುತ್ತದೆ.

    ಮಾಸ್, ಕ್ಲಾಸ್ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ

    ಮಾಸ್, ಕ್ಲಾಸ್ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ

    ಇಲ್ಲಿ ಏನೆಂದರೆ ಕಮರ್ಷಿಯಲ್ ಆಗಿ ಮಾಡಿದ್ದೇವೆ. ಮಾಸ್, ಕ್ಲಾಸ್, ಕಾಲೇಜಿ ವಿದ್ಯಾರ್ಥಿಗಳಿಗೆ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ. ಇಲ್ಲಿ ಮೂರು ಶೇಡ್ ಗಳುಳ್ಲ ಕಥೆಯಾದರೂ ಚಿತ್ರಮಂದಿರದಿಂದ ಹೊರಬಂದಾಗ ಒಂದೇ ಕಥೆಯಂತೆ ಭಾಸವಾಗುತ್ತದೆ.

    ಇನ್ನು ಮುಂದಿನ ನನ್ನ ಚಿತ್ರಗಳಲ್ಲಿ ಮೆಸೇಜ್ ಕೊಡುವ ಅವಶ್ಯಕತೆ ಇರುವುದಿಲ್ಲ

    ಇನ್ನು ಮುಂದಿನ ನನ್ನ ಚಿತ್ರಗಳಲ್ಲಿ ಮೆಸೇಜ್ ಕೊಡುವ ಅವಶ್ಯಕತೆ ಇರುವುದಿಲ್ಲ

    ಇನ್ನು ಮುಂದಿನ ನನ್ನ ಚಿತ್ರಗಳಲ್ಲಿ ಮೆಸೇಜ್ ಕೊಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಸಾಕಷ್ಟು ಮೆಸೇಜ್ ಗಳನ್ನು ಈ ಚಿತ್ರದಲ್ಲೇ ಕೊಟ್ಟು ಬಿಟ್ಟಿದ್ದೇನೆ. ಹೇಳಬೇಕು ಎಂಬುದನ್ನು ಗಾಡವಾಗಿ ಹೇಳಿದ್ದೇವೆ.

    ಕರ್ನಾಟಕ ಬಿಟ್ಟು ಬೇರೆಲ್ಲೂ ಚಿತ್ರೀಕರಿಸಿಲ್ಲ

    ಕರ್ನಾಟಕ ಬಿಟ್ಟು ಬೇರೆಲ್ಲೂ ಚಿತ್ರೀಕರಿಸಿಲ್ಲ

    ಗಜೇಂದ್ರಗಡ, ಬಾದಾಮಿ, ಬಾಗಲಕೋಟೆ, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಿಸಿದ್ದೇವೆ. ಕರ್ನಾಟಕ ಬಿಟ್ಟು ಬೇರೆಲ್ಲೂ ಚಿತ್ರೀಕರಿಸಿಲ್ಲ.

    ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿದ್ದೇವೆ

    ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿದ್ದೇವೆ

    ಚಿತ್ರಕ್ಕೆ ನಾನು ಮತ್ತು ಕನ್ನಡಪ್ರಭ ಹರಿ ಅವರು ಬರೆದಿದ್ದೇವೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಡೈಲಾಗ್ಸ್ ಬರುತ್ತವೆ. ನಾನು ಬರೆದಂತಹ ಡೈಲಾಗ್ಸನ್ನು ಅವರು ಉತ್ತರ ಕರ್ನಾಟಕ ಭಾಷೆಗೆ ಬದಲಾಯಿಸಿದ್ದಾರೆ. ಸಾಮಾನ್ಯವಾಗಿ ಬೇರೆ ಚಿತ್ರಗಳಲ್ಲಿ ಉತ್ತರ ಕರ್ನಾಟಕ ಭಾಷೆಯನ್ನು ಕಾಮಿಡಿ ಸನ್ನಿವೇಶಗಳಿಗೆ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಆದರೆ ನಾವು ಆ ರೀತಿ ಮಾಡಿಲ್ಲ. ಮೊದಲೇ ಗಂಡು ಭಾಷೆ. ಮಾತನಾಡಿದರೇನೇ ಮೈ ಝುಂ ಎನ್ನುತ್ತದೆ. ಆ ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿದ್ದೇವೆ.

    ಕಷ್ಟಪಟ್ಟು ಮಾಡಿಲ್ಲ ಇಷ್ಟಪಟ್ಟು ಮಾಡಿದ್ದೇನೆ

    ಕಷ್ಟಪಟ್ಟು ಮಾಡಿಲ್ಲ ಇಷ್ಟಪಟ್ಟು ಮಾಡಿದ್ದೇನೆ

    ಸಿಂಪಲ್ಲಾಗ್ ಒಂದು ಲವ್ ಸ್ಟೋರಿಯಲ್ಲಿ ಡೈಲಾಗ್ಸ್ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಇಲ್ಲಿ ಆ ರೀತಿಯ ವರಸೆ ಇಲ್ಲ. ಈ ಚಿತ್ರವನ್ನು ಕಷ್ಟಪಟ್ಟು ಮಾಡಿಲ್ಲ ಇಷ್ಟಪಟ್ಟು ಮಾಡಿದ್ದೇನೆ.

    ಮನಸ್, ಮಣಿ, ಮೌನಿ ಸುತ್ತ ಸುತ್ತುವ ಚಿತ್ರ

    ಮನಸ್, ಮಣಿ, ಮೌನಿ ಸುತ್ತ ಸುತ್ತುವ ಚಿತ್ರ

    ಮನಸ್, ಮಣಿ, ಮೌನಿ ಎಂಬ ಮೂರು ಪಾತ್ರಗಳು ಬರುತ್ತವೆ. ಮೂರು ಪಾತ್ರಗಳಲ್ಲಿ ಸಾಮಾನ್ಯವಾಗಿರು ಅಂಶಗಳು ಹೇಗೆ ಬದಲಾಗುತ್ತವೆ ಎಂಬುದೆ ಚಿತ್ರದ ಕಥೆ.

    English summary
    Bahuparak director Suni interview. I made the earlier movie in a very simple way just as the title suggests. With this movie I had to put more effort as I had to add commercial entity to the movie. This movie is not just a love story but includes other genres as well.
    Friday, July 25, 2014, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X