ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಭಜರಂಗಿ 2 ತಂಡದಿಂದ ಭರ್ಜರಿ ಉಡುಗೊರೆ

ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ ಕೆಲವೇ ದಿನಗಳಿವೆ. ಈಗಾಗಲೇ ಅಭಿಮಾನಿಗಳು ತಯಾರಿ ಆರಂಭಿಸಿಬಿಟ್ಟಿದ್ದಾರೆ.

Recommended Video

Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಬಳಸುವ ಕಾಮನ್ ಡಿಪಿ ಸಹ ಈಗಾಗಲೇ ಸಿದ್ಧವಾಗಿದೆ. ಕೆಲವು ಸಿನಿಮಾಗಳು ಅಂದೇ ಘೋಷಣೆ ಆಗಲಿವೆ. ಕೆಲವುಗಳು ಪೋಸ್ಟರ್ ಬಿಡುಗಡೆ ಸಹ ಇದ್ದಂತಿದೆ.

ಈ ನಡುವೆ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಭಜರಂಗಿ 2 ಸಿನಿಮಾದ ತಂಡ ಶಿವಣ್ಣ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ನೀಡಲು ಸಜ್ಜಾಗಿ ನಿಂತಿದೆ.

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ

ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಜುಲೈ 12 ರಂದು ಭಜರಂಗಿ 2 ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾದ ಟ್ರೇಲರ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

2013 ರಲ್ಲಿ ಬಿಡುಗಡೆ ಆಗಿದ್ದ ಭಜರಂಗಿ

2013 ರಲ್ಲಿ ಬಿಡುಗಡೆ ಆಗಿದ್ದ ಭಜರಂಗಿ

ಶಿವಣ್ಣ ಮತ್ತು ಹರ್ಷಾ ಕಾಂಬಿನೇಶನ್‌ನಲ್ಲಿ ಭಜರಂಗಿ ಸಿನಿಮಾ 2013 ರಲ್ಲಿ ಬಿಡುಗಡೆಯಾಗಿ ಹಿಟ್ ಎನಿಸಿಕೊಂಡಿತ್ತು. ಏಳು ವರ್ಷಗಳ ನಂತರ ಅದರ ಸೀಕ್ವೆಲ್ ಬರುತ್ತಿದ್ದು, ಸಹಜವಾಗಿಯೇ ಕುತೂಹಲ ಗರಿಗೆದರಿದೆ.

ಜುಲೈ 12 ರಂದು ಬೆಳಿಗ್ಗೆ ಟ್ರೇಲರ್ ಬಿಡುಗಡೆ

ಜುಲೈ 12 ರಂದು ಬೆಳಿಗ್ಗೆ ಟ್ರೇಲರ್ ಬಿಡುಗಡೆ

ಭಜರಂಗಿ 2 ಸಿನಿಮಾದ ಟ್ರೇಲರ್ ಜುಲೈ 12 ರಂದು 11:30 ರ ಸುಮಾರಿಗೆ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಲಿದೆ. ಶಿವಣ್ಣ ಹುಟ್ಟುಹಬ್ಬಕ್ಕೆ ಟ್ರೇಲರ್ ಬಿಡುಗಡೆ ಆಗುತ್ತಿರುವುದು ವಿಶೇಷ.

ಭಾವನಾ ನಾಯಕ ನಟಿ

ಭಾವನಾ ನಾಯಕ ನಟಿ

ಭಜರಂಗಿ 2 ಸಿನಿಮಾವನ್ನು ಹರ್ಷಾ ಅವರೇ ನಿರ್ದೇಶಿಸಿದ್ದು, ಜಯಣ್ಣ-ಬೋಗೇಂದ್ರ ನಿರ್ಮಿಸಿದ್ದಾರೆ. ಶಿವಣ್ಣ ಎದುರಾಗಿ ಭಾವನ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು ಆದರೆ ಲಾಕ್‌ಡೌನ್ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗಿದೆ.

More from Filmibeat

English summary
Bajarangi 2 movie trailer to release on July 12 on Shivraj Kumar's birthday. Movie directed by Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X