»   » ಇಬ್ಬರು ಖಳನಾಯಕರನ್ನ ಪರಿಚಯಿಸಲು ಬಂದ್ರು ಹ್ಯಾಟ್ರಿಕ್ ಹೀರೋ

ಇಬ್ಬರು ಖಳನಾಯಕರನ್ನ ಪರಿಚಯಿಸಲು ಬಂದ್ರು ಹ್ಯಾಟ್ರಿಕ್ ಹೀರೋ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಬ್ಬರು ಖಳನಟರನ್ನು ಪ್ರೇಕ್ಷಕರಿಗೆ ಪರಿಚಯಿಸಲು ಮುಂದಾಗಿದ್ದಾರೆ. ಹಾಗಂತ ಆ ನಟರು ಚಿತ್ರರಂಗಕ್ಕೆ ಹೊಸಬರೇನಲ್ಲಾ. ಈಗಾಗಲೇ ನಿಮ್ಮೆಲ್ಲರಿಗೂ ಅವರ ಪರಿಚಯವಿದೆ.

ಹೌದು ಶಿವರಾಜ್ ಕುಮಾರ್ ಸಿನಿಪ್ರಿಯರಿಗೆ ಪರಿಚಯ ಮಾಡಿಸಿದ್ದು ನಟ ರವಿಚಂದ್ರನ್ ಮತ್ತು ಆರ್ ಜೆ ರೋಹಿತ್ ಅವರನ್ನ . ಇದೇ ತಿಂಗಳು ಬಿಡುಗಡೆ ಆಗುತ್ತಿರುವ ಬಕಾಸುರ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆ ಆಗಿದೆ. ಶಿವಣ್ಣ ಟ್ರೇಲರ್ ನಲ್ಲಿ ಚಿತ್ರದ ಮುಖ್ಯಪಾತ್ರಗಳನ್ನ ಪರಿಚಯಿಸಿದ್ದಾರೆ. ಈ ಮೂಲಕ ಬಕಾಸುರ ಸಿನಿಮಾ ಟ್ರೇಲರ್ ಸಖತ್ ಸುದ್ದಿ ಮಾಡುತ್ತಿದೆ.

Bakasura film second trailer was released.

ಅಪೂರ್ವ' ನಂತರ ಕಾಣೆಯಾಗಿದ್ದ ನಟಿಗೆ ಮತ್ತೊಂದು ದೊಡ್ಡ ಅವಕಾಶ.!

ಬಕಾಸುರ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಆರ್ ಜೆ ರೋಹಿತ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ. ಕಾವ್ಯ ಗೌಡ ಮತ್ತು ಸಿತಾರ ಚಿತ್ರದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ನವನೀತ್ ಚಿತ್ರವನ್ನ ನಿರ್ದೇಶನ ಮಾಡಿದ್ದು ನಟ ರೋಹಿತ್ ಅವರೇ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Bakasura film second trailer was released.

ಕರ್ವ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿರುವ ನವನೀತ್ ಮತ್ತು ಆರ್ ಜೆ ರೋಹಿತ್ 'ಬಕಾಸುರ' ಸಿನಿಮಾದಲ್ಲಿಯೂ ಪ್ರೇಕ್ಷಕರಿಗೆ ಒಂದೊಳ್ಳೆ ಮನೋರಂಜನೆ ನೀಡಲಿದ್ದಾರೆ ಎನ್ನುವ ಸೂಚನೆ ಈಗಾಗಲೇ ಸಿಕ್ಕಿದೆ.

ವಿಡಿಯೋ: 'ಕುರುಕ್ಷೇತ್ರ' ಚಿತ್ರದ ಎಕ್ಸ್ ಕ್ಲೂಸಿವ್ ಮೇಕಿಂಗ್

English summary
Kannada Bakasura film second trailer was released. Actor Shivaraj Kumar has made a background voice for the trailer. Ravichandran, RJ Rohit has acted in the film Navaneeth directed the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X