ಕನ್ನಡಕ್ಕೆ ಬಂದ ಬಾಲಾ 'ಹಿಟ್ ಲಿಸ್ಟ್'ನಲ್ಲಿ ಸುದೀಪ್

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಲಾ ಅವರು ಮಾತನಾಡುತ್ತಾ, "ಸೂಪರ್ ಸ್ಟಾರ್ ಗಿಂತಲೂ ಸುದೀಪ್ ಅವರನ್ನು ನಾನು ಹೆಚ್ಚು ಗೌರವಿಸುತ್ತೇನೆ" ಎಂದರು. ಅವರ ಪ್ರಕಾರ ಸೂಪರ್ ಸ್ಟಾರ್ ಎಂದರೆ ಯಾರೆಂಬುದು ಸ್ಪಷ್ಟವಾಗಲಿಲ್ಲ.
ಬಳಿಕ ಅವರ ಮಾತು ಧ್ರುವ ಅವರ ಕಡೆ ಹೊರಳಿತು. ಅವರ ಅಭಿನಯ ಸಾಮರ್ಥ್ಯವನ್ನು ಕೊಂಡಾಡಿದ ಅವರು, ಯಾರೂ ಅವರನ್ನು ಕಿವುಡು ಮತ್ತು ಮೂಕ ನಟ ಎಂದು ಹೇಳಲು ಸಾಧ್ಯವಿಲ್ಲ. ಸಂಭಾಷಣೆ ಎಷ್ಟೇ ಉದ್ದವಾಗಿರಲಿ ಅವರು ಅದನ್ನು ಅರ್ಥ ಮಾಡಿಕೊಂಡು ಒಂದೇ ಟೇಕ್ ನಲ್ಲಿ ಓಕೆ ಮಾಡುತ್ತಾರೆ. ಬೇರೆಯವರಾಗಿದ್ದರೆ 10 ಟೇಕ್ ಗಳಾದರೂ ಓಕೆ ಆಗಲ್ಲ" ಎಂದರು.
ಸುದೀಪ್ ಅವರ ವಾಯ್ಸ್ ಓವರ್ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಂದಹಾಗೆ 'ಹಿಟ್ ಲಿಸ್ಟ್' ಚಿತ್ರ ಮಲಯಾಳಂ ಹಾಗೂ ಕನ್ನಡದ ದ್ವಿಭಾಷಾ ಚಿತ್ರ. ಮಲಯಾಳಂನಲ್ಲಿ ಧ್ರುವ್ ಅವರಿಗೆ ಧ್ವನಿ ನೀಡುತ್ತಿರುವವರು ಮೋಹನ್ ಲಾಲ್.
ಧ್ರುವ ಶರ್ಮಾ ಅವರ ತಂದೆ ಡಾ.ಸುರೇಶ್ ಶರ್ಮಾ ಚಿತ್ರದ ನಿರ್ಮಾಪಕರು. ರೂಬಿ ಸಿನೆಕ್ರಾಫ್ಟ್ಸ್ ಎಂಬ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದ ಟ್ರೇಲರ್ ಗಳನ್ನು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ತಾರೆ ಪ್ರಿಯಾಮಣಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪ್ರಿಯಾಮಣಿ ಬಗ್ಗೆ ಪ್ರಸ್ತಾಪಿಸುತ್ತಾ ಆಕೆ ನನ್ನ 'ಬಾಯ್ ಫ್ರೆಂಡ್' ಎಂದದ್ದೇ ತಡ, ಮಗುಮ್ಮಾಗಿ ಕುಳಿತಿದ್ದ ಪ್ರಿಯಾಮಣಿಗೆ ನಗು ಅದೆಲ್ಲಿ ಅಡಗಿತ್ತೋ ಏನೋ ಉಕ್ಕಿ ಬಂದು ಕಿಲಕಿಲ ಎಂದರು. ಬಳಿಕ ಪ್ರಿಯಾಮಣಿ ಕೂಡ ಚಿತ್ರಕ್ಕೆ ಶುಭಕೋರಿ ರಿಲ್ಯಾಕ್ಸ್ ಆದರು.
ಈ ಚಿತ್ರದ ಪಾತ್ರವರ್ಗದಲ್ಲಿ ಬಾಲ, ಧ್ರುವ, ಐಶ್ವರ್ಯದೇವನ್, ಕಾದಲ್ ಸಂಧ್ಯಾ, ಸಮುದ್ರಖಿನಿ, ಉಣ್ಣಿಮುಕುಂದನ್, ರಿಯಾಜ್ ಖಾನ್, ಮಂಡ್ಯ ಚಂದ್ರು, ತಲೈವಾಸಲ್ ವಿಜಿ ಮುಂತಾದವರಿದ್ದಾರೆ. (ಏಜೆನ್ಸೀಸ್)


Click it and Unblock the Notifications











