For Quick Alerts
  ALLOW NOTIFICATIONS  
  For Daily Alerts

  ಪತ್ರಕರ್ತ ಗಣೇಶ್ ಕಾಸರಗೋಡು ಬದಲಿಗೆ ಬಂದ ಬೇರೊಬ್ಬ ನಟ

  |

  'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾದಲ್ಲಿ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಈ ಹಿಂದೆ ಇತ್ತು. ಆದರೆ, ಇದೀಗ ಅವರು ಈ ಚಿತ್ರದಲ್ಲಿ ನಟಿಸಲು ಸಾಧ್ಯ ಆಗುತ್ತಿಲ್ಲ.

  ಅನಾರೋಗ್ಯದ ಕಾರಣದಿಂದ ಅವರು ಸಿನಿಮಾದಲ್ಲಿ ನಟಿಸಲು ಆಗುತ್ತಿಲ್ಲ. ಈಗಾಗಲೇ ಸಿನಿಮಾದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದೆ. ಈ ಸಮಯದಲ್ಲಿಯೇ ಆರೋಗ್ಯ ಸರಿ ಇಲ್ಲದ ಕಾರಣ ಗಣೇಶ್ ಕಾಸರಗೋಡು ಚಿತ್ರೀಕರಣದಲ್ಲಿ ಭಾಗಿಯಾಗಲು ಆಗುತ್ತಿಲ್ಲ.

  ''ನೀನು ಏನೇ ಕೇಳಿದರೂ, 15 ನಿಮಿಷದಲ್ಲಿ ಮಾಡುತ್ತೇನೆ''- ಕಾಶೀ ಪುತ್ರನಿಗೆ 'ಗಜ'ಬಲ''ನೀನು ಏನೇ ಕೇಳಿದರೂ, 15 ನಿಮಿಷದಲ್ಲಿ ಮಾಡುತ್ತೇನೆ''- ಕಾಶೀ ಪುತ್ರನಿಗೆ 'ಗಜ'ಬಲ

  ಆ ಪಾತ್ರಕ್ಕೆ ಬೇರೆಬ್ಬ ಕಲಾವಿದ ಆಯ್ಕೆ ಆಗಿದ್ದು, ನಟ ಬಾಲ ರಾಜ್ವಾಡಿ ಸಿನಿಮಾ ತಂಡಕ್ಕೆ ಸೇರಿಕೊಂಡಿದ್ದಾರೆ. ಪಾತ್ರಕ್ಕೆ ತಕ್ಕ ಹಾಗೆ ಇರಬೇಕು ಎನ್ನುವ ಕಾರಣಕ್ಕೆ ಅವರನ್ನು ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಖಳನಾಯಕನ ಪಾತ್ರ ಇದಾಗಿದೆ.

  ಬಾಲ ರಾಜ್ವಾಡಿ ಈ ಹಿಂದೆ ಕನ್ನಡದಲ್ಲಿ 'ಪಂಚತಂತ್ರ' 'ಬಡ್ಡಿಮಂಗದ್ ಲೈಫ್', 'ಹಫ್ತಾ' ಸೇರಿದಂತೆ ಅನೇಕ ಸಿನಿಮಾ ಮಾಡಿದ್ದಾರೆ. ತಮ್ಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ.

  'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ

  'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾವನ್ನು ಕಿರಣ್ ಸೂರ್ಯ ನಿರ್ದೇಶನ ಮಾಡುತ್ತಿದ್ದಾರೆ. ನಂದೀಶ್ ಗೌಡ ಹಾಗೂ ಜಿತಿನ್ ಜಿ ಪಟೇಲ್ ನಿರ್ಮಾಣ ಮಾಡುತ್ತಿದ್ದಾರೆ.

  ಕಾಶೀನಾಥ್ ಪುತ್ರ ಅಭಿಮನ್ಯು ಈ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸ್ಪೂರ್ತಿ ಉಡಿಮನೆ ಹಾಗೂ ವಿಜಯಶ್ರೀ ಸಿನಿಮಾದ ನಾಯಕಿಯರಾಗಿದ್ದಾರೆ.

  English summary
  Bala Rajwadi playing negative role in Ellige Payana Yaavudo Daari kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X