'ಕೆಜಿಎಫ್' ಟ್ರೈಲರ್ ನೋಡಿ ಲೆಜೆಂಡ್ ಬಾಲಯ್ಯ ಏನಂದ್ರು.?

Recommended Video

KGF Kannada Movie : ಕೆಜಿಎಫ್ ಟ್ರೈಲರ್ ನೋಡಿ ಇಷ್ಟ ಪಟ್ಟ ನಂದಮೂರಿ ಬಾಲಕೃಷ್ಣ | FILMIBEAT KANNADA

ಕನ್ನಡ ನಟ ಯಶ್ ಅಭಿನಯದ ಕೆಜಿಎಫ್ ಟ್ರೈಲರ್ ಗೆ ಭಾರತದಾದ್ಯಂತ ಭಾರಿ ಮೆಚ್ಚುಗೆ ಸಿಕ್ಕಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಯ ಸ್ಟಾರ್ ಕಲಾವಿದರು ಕೆಜಿಎಫ್ ಗೆ ಬೋಲ್ಡ್ ಆಗಿದ್ದಾರೆ.

ಇದೀಗ, ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಅವರು ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ತೆಲುಗು ವರ್ಷನ್ ಕೆಜಿಎಫ್ ಸಿನಿಮಾದ ಟ್ರೈಲರ್ ನೋಡಿದ ಬಾಲಯ್ಯ ಚಿತ್ರತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

''ಕೆಜಿಎಫ್ ಟ್ರೈಲರ್ ಇಷ್ಟವಾಯ್ತು. ಹೊಂಬಾಳೆ ಫಿಲ್ಮ್ಸ್ ಮತ್ತು ತೆಲುಗು ವಿತರಕ ವಾರಾಹಿ ಚಲನಚಿತ್ರ ಸಂಸ್ಥೆಗೆ ಆಲ್ ದಿ ಬೆಸ್ಟ್'' ಎಂದು ಶುಭಕೋರಿದ್ದಾರೆ.

Balakrishna appreciate yash kgf

ಕೆಜಿಎಫ್ ಚಿತ್ರಕ್ಕೆ ಟಾಲಿವುಡ್ ನಲ್ಲಿ ಭಾರಿ ಯಶಸ್ಸು ಸಿಕ್ಕಿದ್ದು, ತೆಲುಗು ವರ್ಷನ್ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು.

ಇನ್ನುಳಿದಂತೆ ಡಿಸೆಂಬರ್ 21 ರಂದು 'ಕೆಜಿಎಫ್' ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

More from Filmibeat

English summary
Telugu actor balakrishna has appreciate to kannada actor yash starrer kgf movie trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X