For Quick Alerts
  ALLOW NOTIFICATIONS  
  For Daily Alerts

  ಲೆಜೆಂಡ್ ಬಾಲಯ್ಯ ಅಭಿಮಾನಿಗಳಿಂದ ಡಿ ಬಾಸ್ ಬರ್ತಡೇ ಆಚರಣೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರೇಜ್ ಕರ್ನಾಟಕದಿಂದ ಆಚೆಯೂ ಜೋರಾಗಿದೆ. ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನನ ಚಿತ್ರಗಳು ಆಂಧ್ರ ಮತ್ತು ತಮಿಳುನಾಡಿನಲ್ಲಿ ತೆರೆಕಂಡು ಅದ್ಭುತ ಪ್ರದರ್ಶನ ಕಂಡಿರುವ ಉದಾಹರಣೆ ಇದೆ.

  ಡಿ ಬಾಸ್ ನಟನೆಯ ಕನ್ನಡ ಚಿತ್ರಗಳು ಹಿಂದಿಗೆ ಡಬ್ ಆಗಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ದಾಖಲೆಗಳಿವೆ. ಈಗ ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

  ರಾಬರ್ಟ್ ಅಬ್ಬರ: ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ನಂ 1, ಎಷ್ಟಾಗಿದೆ ವೀಕ್ಷಣೆ?

  ಈ ಮಧ್ಯೆ ದಾಸನ ಬರ್ತಡೇಯನ್ನು ತೆಲುಗು ಲೆಜೆಂಡ್ ಬಾಲಕೃಷ್ಣ ಅವರ ಅಭಿಮಾನಿಗಳು ಅದ್ಧುರಿಯಾಗಿ ಆಚರಿಸಿದ್ದಾರೆ. ರಾಬರ್ಟ್ ಟ್ರೈಲರ್ ಯಶಸ್ಸು ಹಾಗೂ ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

  ಬಾಲಕೃಷ್ಣ ಅವರ ಅಪ್ಪಟ ಅಭಿಮಾನಿಗಳು ಡಿ ಬಾಸ್‌ಗೆ ರೆಡ್‌ ಕಾರ್ಪೆಟ್ ಹಾಕಿ ತೆಲುಗು ಇಂಡಸ್ಟ್ರಿಗೆ ಸ್ವಾಗತ ಮಾಡುತ್ತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಯಾಂಡಲ್‌ವುಡ್ ದರ್ಶನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

  ಮತ್ತೊಂದೆಡೆ ತಮಿಳುನಾಡಿನ ಹೊಸೂರಿನಲ್ಲಿ ದರ್ಶನ್ ಅಭಿಮಾನಿಗಳು ಕೇಕ್ ಕತ್ತರಿಸಿ ನೆಚ್ಚಿನ ಹುಟ್ಟುಹಬ್ಬ ಆಚರಿಸಿದ್ದಾರೆ. ಡಿ ಬಾಸ್ ಹೆಸರಿನಲ್ಲಿ ಕೇಕ್ ಸಿದ್ದ ಮಾಡಿ ತಮಿಳು ಅಭಿಮಾನಿಗಳು ಬರ್ತಡೇ ಸೆಲೆಬ್ರೆಟ್ ಮಾಡಿದ್ದಾರೆ.

  ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಎರಡು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಸುಮಾರು 400 ಚಿತ್ರಗಳಲ್ಲಿ ರಾಬರ್ಟ್ ತೆಲುಗು ವರ್ಷನ್ ಪ್ರದರ್ಶನವಾಗಲಿದೆ. ಕರ್ನಾಟಕದಲ್ಲಿಯೂ ಬಹುದೊಡ್ಡ ಓಪನಿಂಗ್ ಮಾಡುವ ಲೆಕ್ಕಾಚಾರದಲ್ಲಿದೆ.

  ವೈರಲ್ ಆಗೋಯ್ತು ರಾಬರ್ಟ್ ಚಿತ್ರದ ಡಿ ಬಾಸ್ ಡೈಲಾಗ್ | Filmibeat Kannada
  English summary
  Nandamuri Balakrishna Fans celebrated Challenging star Darshan Birthday in Andhra Pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X