ಸ್ಪರ್ಧೆಗೆ ನಿಂತ ತಿಥಿ ಈರೇ ಗೌಡರ 'ಬಳೆಕೆಂಪ'
'ತಿಥಿ' ಸಿನಿಮಾ ಮಾಡಿ ಇಡೀ ಭಾರತೀಯ ಸಿನಿಮಾರಂಗದ ಗಮನ ಸೆಳೆದಿದ್ದ ಕಥೆಗಾರ ಈರೇ ಗೌಡ ಹೊಸ ಸಿನಿಮ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವುದು ಹಳೆಯ ವಿಚಾರ. ಬಳೆಕೆಂಪ ಸಿನಿಮಾವನ್ನ ನಿರ್ದೇಶನ ಮಾಡಿರುವ ಈರೇ ಗೌಡರು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಸಿನಿಮಾವನ್ನ ತೆರೆಗೆ ತರಲು ಸಿದ್ದವಾಗಿದ್ದಾರೆ.
ಈಗಾಗಲೇ ಸಾಕಷ್ಟು ಸಿನಿಮೋತ್ಸವದಲ್ಲಿ 'ಬಳೆಕೆಂಪ' ಚಿತ್ರ ಪ್ರದರ್ಶನಗೊಂಡು ಪ್ರಶಸ್ತಿಯನ್ನು ಪಡೆದುಕೊಂಡು ಬಂದಿದ್ದಾನೆ. ಏಪ್ರಿಲ್ 6 ರಿಂದ 16 ರವರೆಗೆ ಸ್ಪೇನ್ ನಲ್ಲಿ ನಡೆಯಲಿರುವ ಲಾಸ್ ಪಾಲ್ಮಾಸ್ ಡೆ ಗ್ರ್ಯಾನ್ ಕ್ಯಾನರಿಯ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2018 ರಲ್ಲಿ ಬಳಿಕೆಂಪ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ.

ಈರೇ ಗೌಡ ಬಳೆಕೆಂಪ ಸಿನಿಮಾಗೆ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ, ವಿವೇಕ್ ಗೊಂಬರ್ ಚಿತ್ರಕ್ಕೆ ಹಣ ಹಾಕಿದ್ದಾರೆ. ಸಮ್ಮಯಾನಂದ ಸಾಹಿ ಕ್ಯಾಮೆರಾ ವರ್ಕ್ ಮಾಡಿದ್ರೆ ಬೆನೆಡಿಕ್ ಟೇಲರ್ / ನರೆನ್ ಚಂದವಾಕರ್ ಚಿತ್ರಕ್ಕೆ ಸಂಗೀ ಸಂಯೋಜನೆ ಮಾಡಿದ್ದಾರೆ.

ಈಗಾಗಲೇ ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿರುವ ಈರೇಗೌಡ ಮತ್ತು ತಂಡ ಚೊಚ್ಚಲ ನಿರ್ದೇಶನದ ಮೂಲಕವೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಉತ್ತಮ ಸಿನಿಮಾ ನೀಡುವ ಭರವಸೆ ಕೊಟ್ಟಿದೆ.


Click it and Unblock the Notifications











