ಇಷ್ಟ ಇಲ್ಲ ಅಂದರೆ ನೋಡಬೇಡಿ ; ಕಮಲ್ ಹಾಸನ್ ಥಗ್‌ಲೈಫ್‌ ಬಗ್ಗೆ ಹೇಳಿದ್ದೇನು ಸುಪ್ರೀಂ ಕೋರ್ಟ್‌..?

'ಥಗ್ ಲೈಫ್' ತೆಗ್ಗಿನಲ್ಲಿ ಬಿದ್ದಿದೆ. ಆದರೂ ಕೂಡ .. ಕಮಲ್ ಹಾಸನ್‌ ಗೆ ಕನ್ನಡಿಗರ ಮೇಲೆ ನಂಬಿಕೆ ಇದೆ. ಸೋತ ತಮ್ಮ ಚಿತ್ರವನ್ನು ಕನ್ನಡಿಗರು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ಕನ್ನಡದ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಾರೆ ಎನ್ನುವ ಭರವಸೆ ಇದೆ. ಹೀಗಾಗಿಯೇ ಕರುನಾಡಿನಲ್ಲಿ ಥಗ್ ಲೈಫ್ ಬಿಡುಗಡೆಗೆ ಸಂಬಂಧಿಸಿದಂತೆ ಕಸರತ್ತು ಮಾಡುತ್ತಾನೇ ಬಂದ..

ಕಮಲ್ ಹಾಸನ್‌ಗೆ ಕೊನೆಗೂ ಗೆಲುವು ಸಿಕ್ಕಿದೆ. ಸುಪ್ರೀಂ ಅಂಗಳದಲ್ಲಿ ಥಗ್ ಲೈಫ್ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೌದು, ಕನ್ನಡಿಗರನ್ನು ಕೆಣಕಿದ ಹಿನ್ನೆಲೆ ಥಗ್ ಲೈಫ್ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗಿತ್ತು. ಪ್ರದರ್ಶಕರು ಮತ್ತು ವಿತರಕರು ಕೂಡ ಚಿತ್ರವನ್ನು ಪ್ರದರ್ಶಿಸಲು ಹಿಂದೇಟು ಹಾಕಿದ್ದರು. ಈ ಹಿನ್ನೆಲೆ ಕಮಲ್ ಹಾಸನ್ ಹೈಕೋರ್ಟ್‌ನಲ್ಲಿ ಮನವಿಯನ್ನು ಸಲ್ಲಿಸಿದ್ದರು.

Ban Lifted Supreme Court Forces Thug-Life Release In Karnataka

ಆದರೆ, ಹೈಕೋರ್ಟ್‌ನಲ್ಲಿ ಕಮಲ್ ಹಾಸನ್‌ಗೆ ಮುಖಭಂಗವಾಗಿತ್ತು. ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕಮಲ್ ಹಾಸನ್‌ಗೆ ತಪರಾಕಿ ಹಾಕಿದ್ದರು.

ಜಲ, ನೆಲ, ಭಾಷೆ ಈ ಮೂರು ವಿಷಯಗಳು ಪ್ರತಿಯೊಬ್ಬ ನಾಗರೀಕನಿಗೂ ಮುಖ್ಯ. ಪಬ್ಲಿಕ್ ಫಿಗರ್ ಆಗಿದ್ದವರು ಇಂತಹ ಹೇಳಿಕೆ ಕೊಟ್ಟರೆ ಹೇಗೆ. ಯಾವುದೇ ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಿಲ್ಲ. ಅದಕ್ಕೆ ಸಾಕ್ಷಿ ಎಲ್ಲಿದೆ ? ಎಂದು ಪ್ರಶ್ನೆ ಕೇಳಿದ್ದರು. ಇದರಿಂದಲೇ ಸಾಮರಸ್ಯ ಹಾಳಾಗಿದೆ. ಕರ್ನಾಟಕದ ಜನತೆ ಏನು ಕೇಳಿದ್ದಾರೆ? ಕೇವಲ ಕ್ಷಮೆ ಅಲ್ಲವೇ? ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪ್ರಶ್ನೆ ಮಾಡಿದ್ದರು.

ಇದರಿಂದ ಹೈರಾಣಾದ ಕಮಲ್ ಹಾಸನ್ ಆ ನಂತರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಸದ್ಯ ಕಮಲ್ ಹಾಸನ್ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಥಗ್ ಲೈಫ್ ಚಿತ್ರದ ಬಿಡುಗಡೆಗೆ ಅವಕಾಶ ಮಾಡಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಯಾರಾದರೂ ಒಂದು ಹೇಳಿಕೆ ನೀಡಿದರೆ ನೀವು ಅದಕ್ಕೆ ವಿರುದ್ಧವಾದ ಹೇಳಿಕೆಯ ಮೂಲಕ ಎದುರಿಸಬೇಕು. ಆದರೆ ಅದರ ಬದಲಾಗಿ ಚಿತ್ರಮಂದಿರಗಳನ್ನು ಸುಟ್ಟುಹಾಕುವುದಾಗಿ ಬೆದರಿಕೆ ಹಾಕುವುದು, ಚಿತ್ರದ ಬಿಡುಗಡೆಯನ್ನು ತಡೆ ಹಿಡಿಯುವುದು ಸರಿ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಎತ್ತಿ ಹಿಡಯಬೇಕು, ಈ ನೆಲದ ಕಾನೂನು ಕಾಪಾಡುವುದು ಮುಖ್ಯ ಎಂದಿರುವ ಸುಪ್ರೀಂ ಕೋರ್ಟ್, ವ್ಯವಸ್ಥೆಯಲ್ಲೇ ತಪ್ಪಿದೆ ಎನ್ನುವ ಭಾವ ಮೂಡುತ್ತಿದೆ. ಒಬ್ಬ ವ್ಯಕ್ತಿ ತಪ್ಪು ಹೇಳಿಕೆ ನೀಡಿದ್ದಾರೆ, ಆದರೆ ಎಲ್ಲರೂ ಒಟ್ಟಾಗಿ ಅದರ ವಿರುದ್ಧ ನಿಂತಂತೆ ಕಾಣುತ್ತಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಕ್ಷಮೆ ಕೇಳು ಎಂದು ಹೈಕೋರ್ಟ್ ಹೇಳುತ್ತಿದೆ ಅದು ಹೈಕೋರ್ಟ್​ನ ಕೆಲಸ ಅಲ್ಲ ಎಂದು ಹೇಳಿದೆ.

ನಿಮಗೆ ಇಷ್ಟ ಇಲ್ಲದಿದ್ದರೆ ಚಿತ್ರವನ್ನು ನೋಡಬೇಡಿ, ಆದರೆ ಕ್ಷಮೆ ಕೇಳುವಂತೆ ಒತ್ತಾಯ ಮಾಡುವುದು ಸರಿಯಲ್ಲ ಎಂದಿರುವ ಸುಪ್ರೀಂ ಕೋರ್ಟ್, ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಪ್ರದರ್ಶನವಾಗಬೇಕು, ಯಾವುದು ಪ್ರದರ್ಶನವಾಗಬಾರದು ಎಂದು ಸಂಘಟನೆಗಳಿಗೆ ನಿರ್ಧಾರ ಮಾಡಲು ಅವಕಾಶ ನೀಡಬಾರದು ಎಂದು ಕೂಡ ಜಸ್ಟೀಸ್ ಮನಮೋಹನ್ ಮತ್ತು ಜಸ್ಟೀಸ್ ಜೆ.ಭುಝಾನ್ ಪೀಠ ಹೇಳಿದೆ.

ಯಾವುದೇ ಚಿತ್ರ ಸಿಬಿಎಫ್​ಸಿಯಿಂದ ಪ್ರಮಾಣ ಪತ್ರ ಪಡೆದಿದೆ ಎಂದರೆ ಅದು ಬಿಡುಗಡೆ ಆಗಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರವನ್ನು ಬಿಡುಗಡೆ ಮಾಡಲು ಆದೇಶವನ್ನು ನೀಡಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಥಗ್ ಲೈಫ್‌ ಬಿಡುಗಡೆಗೆ ವೇದಿಕೆ ಕಲ್ಪಿಸುವ ಚಿತ್ರಮಂದಿರಗಳಿಗೆ ರಾಜ್ಯ ಸರ್ಕಾರ ಪೊಲೀಸ್ ಭದ್ರತೆಯನ್ನು ಈಗ ನೀಡಬೇಕಿದೆ.

More from Filmibeat

English summary
Supreme Court slams Karnataka over 'Thug Life' ban, affirming film must release despite mob threats. Freedom of expression protected.
Read more about: kamal hasan ban filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X