ಅಪ್ಪು ಅಂದುಕೊಂಡಿದ್ದನ್ನು ನಡೆಸಲು ಮುಂದಾದ ಬನಾರಸ್ ಚಿತ್ರತಂಡ!

ಪುನೀತ್ ರಾಜ್‌ಕುಮಾರ್‌ ಇಲ್ಲವಾದ ಮೇಲೆ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಅನಿವಾರ್ಯ ಬದಲಾವಣೆಗಳು ಆಗುತ್ತಿದೆ. ಅಪ್ಪು ಅವರನ್ನು ನಂಬಿ ಕೊಂಡಿದ್ದ ಎಷ್ಟೋ ಚಿತ್ರಗಳು ಬದಲಾವಣೆಯ ಅನಿವಾರ್ಯತೆಯನ್ನು ಎದುರಿಸುತ್ತಿವೆ. ಅಪ್ಪು ಸದಾ ಹೊಸಬರಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಿದ್ದ ವ್ಯಕ್ತಿ. ಅಂತೆಯೇ ಕನ್ನಡದ ಬನಾರಸ್‌ ಚಿತ್ರಕ್ಕೂ ಅಪ್ಪು ಸಹಕಾರ ನೀಡಲು ಮುಂದಾಗಿದ್ದರು.

ಬನಾರಸ್ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಪುನೀತ್ ರಾಜಕುಮಾರ್ ಕೈಯಲ್ಲಿ ರಿಲೀಸ್‌ ಮಾಡಿಸಬೇಕು ಎನ್ನುವುದು ಚಿತ್ರ ತಂಡದ ಮಹತ್ತರ ಆಸೆಯಾಗಿತ್ತು. ಚಿತ್ರತಂಡದ ಈ ಆಸೆಯನ್ನು ಪೂರೈಸಲು ನಟ ಪುನೀತ್‌ ರಾಜ್‌ಕುಮಾರ್‌ ಮುಂದಾಗಿದ್ದರು. ಬನಾರಸ್‌ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಲು ಪುನೀತ್‌ ರಾಜ್‌ಕುಮಾರ್ ಓಕೆ ಅಂದಿದ್ದರು. ಅಪ್ಪು ಇದ್ದಿದ್ದರೆ ಇಂದು ನವೆಂಬರ್ 17ಕ್ಕೆ ಅವರೇ ಚಿತ್ರದ ಮೊದಲ ಪೋಸ್ಟರ್ ರಿಲೀಸ್‌ಮಾಡಬೇಕಿತ್ತು.

ಅದರೆ ಪುನೀತ್‌ ರಾಜ್‌ಕುಮಾರ್‌ ಹಠಾತ್‌ ನಿಧನದಿಂದಾಗಿ ಸಿನಿಮಾ ತಂಡ ಅಂದುಕೊಂಡಂತೆ ಪೋಸ್ಟರ್ ರಿಲೀಸ್‌ ಮಾಡಲು ಆಗಲಿಲ್ಲ. ಆದರೆ ಚಿತ್ರತಂಡಕ್ಕೆ ಅಪ್ಪು ಅವರನ್ನು ಬಿಟ್ಟು ಪೋಸ್ಟರ್‌ ರಿಲೀಸ್‌ ಮಾಡಲು ತಯಾರಿಲ್ಲ. ಹಾಗಾಗಿ ಪುನೀತ್‌ ರಾಜ್‌ಕುಮಾರ್‌ ಅವರ ಆಶೀರ್ವಾದೊಂದಿಗೆ ಪೋಸ್ಟರ್‌ ರಿಲೀಸ್ ಮಾಡಲು ಮುಂದಾಗಿದೆ.

ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ ಬನಾಸರ್ ಪೋಸ್ಟರ್‌ ಲಾಂಚ್!

ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ ಬನಾಸರ್ ಪೋಸ್ಟರ್‌ ಲಾಂಚ್!

ಬನಾಸರ್ ಚಿತ್ರ ತಂಡ ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ ಪೋಸ್ಟರ್‌ ಲಾಂಚ್ ಮಾಡಲು ನಿರ್ಧರಿಸಿದೆ. ನವೆಂಬರ್‌ 17ರಂದು ಕಂಠೀರವ ಸ್ಟೂಡಿಯೋದಲ್ಲಿ ಇರುವ ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸಮಾಧಿಯ ಮುಂದೆ ಪೋಸ್ಟರ್‌ ಲಾಂಚ್ ಮಾಡಲು ಚಿತ್ರ ತಂಡ ಮುಂದಾಗಿದೆ. ಈ ವಿಚಾರವನ್ನು ಚಿತ್ರ ತಂಡ ಅಧಿಕೃತ ಗೊಳಿಸಿದೆ. ಅಪ್ಪು ಇಲ್ಲದಿದ್ದರು ಅಪ್ಪು ಆಶೀರ್ವಾದೊಂದಿಗೆ ಚಿತ್ರದ ಪೋಸ್ಟರ್‌ ರಿಲೀಸ್ ಮಾಡುತ್ತಿದೆ ಚಿತ್ರತಂಡ.

ನಟ ಝೈದ್ ಖಾನ್‌ ಜೊತೆಗೆ ಮಾತನಾಡಿದ್ದ ಪುನೀತ್‌ ರಾಜ್‌ಕುಮಾರ್!

ನಟ ಝೈದ್ ಖಾನ್‌ ಜೊತೆಗೆ ಮಾತನಾಡಿದ್ದ ಪುನೀತ್‌ ರಾಜ್‌ಕುಮಾರ್!

ಈ ವಿಚಾರದ ಬಗ್ಗೆ ಚಿತ್ರದ ನಟ ಝೈದ್ ಖಾನ್‌, ಪುನೀತ್ ರಾಜಕುಮಾರ್ ಜೊತೆಗೆ ಮಾತನಾಡಿದ್ದರು. ಅವರು ಮಾತನಾಡಿದ್ದ ಆಡಿಯೋ ಕೂಡ ವೈರಲ್ ಆಗಿದೆ. ಸಿನಿಮಾದ ಪೋಸ್ಟರ್ ರಿಲೀಸ್‌ ಮಾಡುವ ಸಲುವಾಗಿ ಅಪ್ಪು ಜೊತೆಗೆ ಝೈದ್ ಖಾನ್‌ ಮಾತನಾಡಿ ಸಮಯವನ್ನು ತೆಗೆದು ಕೊಂಡಿದ್ದರು. ಅಪ್ಪು ಕೂಡ ಚಿತ್ರ ತಂಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೋಸ್ಟರ್ ರಿಲೀಸ್ ಮಾಡಿ ಕೊಡುವುದಾಗಿ ಒಪ್ಪಿಕೊಂಡಿದ್ದರು. ಈ ವಿಚಾರವಾಗಿ ಮನೆಗೆ ಬರಲು ಚಿತ್ರತಂಡಕ್ಕೆ ಅಪ್ಪು ಹೇಳಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರಿಂದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿ, ಅದನ್ನ ನವೆಂಬರ್ 1ರಂದು ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡ ಹಾಕಿಕೊಂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ನವೆಂಬರ್ 1ರಂದೇ ಬನಾಸರ್‌ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಬೇಕಿತ್ತು!

ನವೆಂಬರ್ 1ರಂದೇ ಬನಾಸರ್‌ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಬೇಕಿತ್ತು!

ನವೆಂಬರ್ 1ರಂದೇ ಬನಾರಸ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಬೇಕಿತ್ತು. ಅದನ್ನ ಸ್ವತಃ ಪುನೀತ್ ರಾಜಕುಮಾರ್ ಲಾಂಚ್‌ ಮಾಡಬೇಕಿತ್ತು. ಚಿತ್ರತಂಡ ಮತ್ತು ಪುನೀತ್‌ ಅವರ ಯೋಚನೆ ಇದಾದರೆ ವಿಧಿಯ ಆಟವೇ ಬೇರೆ ಇತ್ತು. ಅಪ್ಪು ಈಗ ಬಾರದೂರಿಗೆ ಹೋಗಿದ್ದಾರೆ. ಹಾಗಾಗಿ ಚಿತ್ರ ತಂಡ ಪೋಸ್ಟರ್‌ ರಿಲೀಸ್‌ ಮುಂದೂಡಿತ್ತು. ಬನಾರಸ್ ಚಿತ್ರದ ಈ ಪೋಸ್ಟರನ್ನು ನವೆಂಬರ್ 17ಕ್ಕೆ ಮುಂದೂಡಲಾಗಿದೆ.

ಬನಾರಸ್‌ ಚಿತ್ರವನ್ನು ನೋಡಲು ಬಯಸಿದ್ದ ಅಪ್ಪು!

ಬನಾರಸ್‌ ಚಿತ್ರವನ್ನು ನೋಡಲು ಬಯಸಿದ್ದ ಅಪ್ಪು!

ಕೇವಲ ಪೋಸ್ಟರ್ ರಿಲೀಸ್ ಮಾಡುವುದಷ್ಟೇ ಅಲ್ಲ. ಚಿತ್ರ ತಂಡಕ್ಕೆ ಅಪ್ಪು ಸಿನಿಮಾವನ್ನು ತೋರಿಸಿ, ನಿಮ್ಮ ಸಿನಿಮಾ ನಾನು ನೋಡಲೇಬೇಕು ಎಂದಿದ್ದರಂತೆ. ಅಪ್ಪು ಮಾತು ಕೇಳಿ ಚಿತ್ರ ತಂಡಕ್ಕೆ ಒಂದು ರೀತಿಯ ಧೈರ್ಯವೇ ಬಂದುಬಿಟ್ಟಿತ್ತು. ಅಪ್ಪು ಆಡಿದ ಮಾತುಗಳು ಚಿತ್ರ ತಂಡಕ್ಕೆ ಭರವಸೆ ನೀಡಿತ್ತು. ಈ ವಿಚಾರವನ್ನು ನೆನೆಯುತ್ತಾ ನಿರ್ದೇಶಕ ಜಯತೀರ್ಥ ಭಾವುಕರಾದರು. ಅಪ್ಪು ಎರಡು ಮಾತಿಲ್ಲದೆ ನಮ್ಮ ಚಿತ್ರಕ್ಕೆ ಸಪೋರ್ಟ್ ಮಾಡಲು ಮುಂದೆ ಬಂದಿದ್ದರು. ನಮ್ಮ ಚಿತ್ರದ ನಾಯಕನಟನೊಂದಿಗೆ ಮಾತನಾಡಿದ್ದರು. ನಿಮ್ಮ ಜೊತೆಗೆ ಇರುತ್ತೇನೆ ಎಂದಿದ್ದರು ಎನ್ನುತ್ತಾ ನಿರ್ದೇಶಕ ಜಯತೀರ್ಥ ಭಾವುಕರಾದರು.

ಅಪ್ಪು ಆಶೀರ್ವಾದದೊಂದಿಗೆ ಬನಾರಸ್‌ ಚಿತ್ರ ಪ್ರಚಾರದ ಮೊದಲ ಹೆಜ್ಜೆ!

ಅಪ್ಪು ಆಶೀರ್ವಾದದೊಂದಿಗೆ ಬನಾರಸ್‌ ಚಿತ್ರ ಪ್ರಚಾರದ ಮೊದಲ ಹೆಜ್ಜೆ!

ಬನಾರಸ್ ಕನ್ನಡದ ಹೊಸ ಲವ್ ಸ್ಟೋರಿ. ಈ ಚಿತ್ರದ ಮೂಲಕ ಶಾಸಕ ಜಮೀರ್ ಅಹಮದ್ ಪುತ್ರ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಸೋನಲ್‌ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಡಿಯೋ ಹಕ್ಕು ಮಾರಾಟದ ವಿಚಾರವಾಗಿ ಬನಾರಸ್‌ ಸುದ್ದಿಯಾಗಿತ್ತು. ಬನಾರಸ್ ಚಿತ್ರದ ಎಲ್ಲಾ ಭಾಷೆಗಳ ಆಡಿಯೋ ಹಕ್ಕನ ಲಹರಿ ಮತ್ತು ಟೀ-ಸೀರೀಸ್‌ ಸಂಸ್ಥೆ ಜೊತೆಯಾಗಿ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಗಳು ಡೆಬ್ಯೂ ನಾಯಕನೊಬ್ಬನ ಚಿತ್ರದ ಆಡಿಯೋ ಹಕ್ಕನ ದುಬಾರಿ ಮೊತ್ತಕ್ಕೆ ಖರೀದಿಸಿದೆ. ಬನಾರಸ್ ಚಿತ್ರವನ್ನು ನಿರ್ದೇಶಕ ಜಯತೀರ್ಥ ನಿರ್ದೇಶನ ಮಾಡಿದ್ದು, ಇದೊಂದು ಪರಿಶುದ್ಧ ಪ್ರೇಮಕಥೆ. ಸದ್ಯ ಚಿತ್ರದ ಕೆಲಸಗಳು ಬಹುತೇಕ ಸಂಪೂರ್ಣಗೊಂಡಿದೆ. ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಚಿತ್ರ ತಂಡ ಭಾಗಿಯಾಗಲು ಮುಂದಾಗಿದೆ. ಇನ್ನು ನಂಬರ್ 17ಕ್ಕೆ ಚಿತ್ರದ ಮೊದಲ ಪೋಸ್ಟರನ್ನು ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ ಲಾಂಚ್‌ ಮಾಡಲಾಗುತ್ತಿದೆ.

More from Filmibeat

English summary
Kannada Movie Banaras Film Poster Releas At Puneeth Rajkumar Grave,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X