For Quick Alerts
  ALLOW NOTIFICATIONS  
  For Daily Alerts

  ಪರ್ಸೋನಾ Mrs ಇಂಡಿಯಾ 2022 ರ ಗೆದ್ದ ಕಿಚ್ಚನ ಅಭಿಮಾನಿ

  By ಫಿಲ್ಮಿಬೀಟ್ ಡೆಸ್ಕ್
  |

  ಹೆಣ್ಣು ಮಕ್ಕಳಿಗೆ ಮಾಡಲಿಂಗ್ ಮೇಲೆ ಆಸಕ್ತಿ ಜಾಸ್ತಿ. ಹೀಗಾಗಿ ಮಾಡಲ್ ಆಗಬೇಕು ಅಂತ ಕನಸು ಕಾಣುವವರು ಅದೆಷ್ಟು ಮಂದಿನೋ. ಆದರೆ, ಮಾಡಲಿಂಗ್ ಮಾಡಬೇಕು. ಮಿಸ್ ಇಂಡಿಯಾದಂತಹ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ಆಸೆಗಳು ಈಡೇರುತ್ತೆ ಎಂದಲ್ಲ. ಅದಕ್ಕೆಂದೇ ವಿವಾಹಿತ ಮಹಿಳೆಯರಿಗಾ ಪರ್ಸೋನಾ ಮಿಸೆಸ್ ಇಂಡಿಯಾ ಸ್ಪರ್ಧೆ ನಡೆಯುತ್ತೆ.

  ಈ ಬಾರಿ ಪರ್ಸೋನಾ ಮಿಸೆಸ್ ಇಂಡಿಯಾ ಸೀಸನ್‌ 5 ಅದ್ಧೂರಿಯಾಗಿ ನಡೆದಿದೆ. ಇದರಲ್ಲಿ ಬೆಂಗಳೂರು ಮೂಲದ ಹೇಮಾ ನಿರಂಜನ್ ವಿಜೇತಾಗಿ ಹೊರಹೊಮ್ಮಿದ್ದಾರೆ. ಉದ್ಯಮಿ ಹಾಗೂ ಇಂಟೀರಿಯರ್ ಡಿಸೈನರ್ ಕೂಡ ಆಗಿರುವ ಹೇಮಾ ನಿರಂಜನ್ ಪರ್ಸೋನಾ ಮಿಸೆಸ್ ಇಂಡಿಯಾ 2022 ಕಿರೀಟ ಮುಡಿಗೇರಿಸಿಕೊಂಡಿದ್ದು ಬೆಂಗಳೂರಿಗರಿಗೆ ಹೆಮ್ಮೆ ತಂದಿದೆ.

  ಮಿಸಸ್ ಇಂಡಿಯಾ ಕಿಚ್ಚನ ಅಭಿಮಾನಿ

  ಪರ್ಸೋನಾ ಮಿಸೆಸ್ ಇಂಡಿಯಾ ಗೆದ್ದ ಹೇಮಾ ನಿರಂಜನ್ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿ ಕೂಡ. ಹೇಮಾ ನಿರಂಜನ್ ಅವರ ಅಚ್ಚು ಮೆಚ್ಚಿನ ನಟ ಕಿಚ್ಚ. ಹೀಗಾಗಿ ಮುಂದಿನ ದಿನಗಳಲ್ಲಿ ಕಿಚ್ಚನೊಂದಿಗೆ ನಟಿಸುವ ಆಸೆ ಇವರದ್ದು.

  ಅಸಲಿಗೆ ಇವರ ಮೂಲ ಹೊಳೆನರಸೀಪುರ. ಸಂಪ್ರದಾಯಸ್ಥ ಕುಟುಂಬ ಆಗಿದ್ದರಿಂದ ಇವರಿಗೆ ಮಾಡಲಿಂಗ್ ಹಾಗೂ ಮಿಸ್‌ ಇಂಡಿಯಾದಂತಹ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ತಂದೆ ಶಿಕ್ಷಕರಾಗಿದ್ದರಿಂದ ಅವರಿಗೆ ಈ ವೃತ್ತಿ ಇಷ್ಟವಿರಲಿಲ್ಲ. 21ನೇ ವರ್ಷಕ್ಕೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಹೇಮಾ, ನಿರಂಜನ್ ಎಂಬುವವರನ್ನು ವಿವಾಹವಾಗಿದ್ದಾರೆ. ಪತಿ ಇವರ ಕನಸುಗಳಿಗೆ ಬೆಂಬಲವಾಗಿ ನಿಂತಿದ್ದಾರೆ.

  ಒಳ್ಳೆ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತೇನೆ

  ಪರ್ಸೋನಾ ಮಿಸೆಸ್ ಇಂಡಿಯಾ ಅಂದರೆ, ಈ ಸ್ಪರ್ಧೆ ಗೆಲ್ಲಲು ಕೇವಲ ಸೌಂದರ್ಯ ಇದ್ದರೆ ಸಾಲದು. ತುಂಡು ಉಡುಗೆ ಧರಿಸಿದರಷ್ಟೇ ಆಗದು. ಹಲವು ಸುತ್ತುಗಳ ಪರೀಕ್ಷೆ ಇದ್ದು, ಅವುಗಳನ್ನು ಹೇಮಾ ನಿರಂಜನ್ ಪಾಸು ಮಾಡಿದ್ದಾರೆ. ಆ ಬಳಿಕವೇ ಇವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

  Bangalore Based Hema Niranjan Wins Persona Mrs India 2022

  ಹೇಮಾ ನಿರಂಜನ್ ಅವರಿಗೆ ತುಂಡು ಉಡುಗೆ ಧರಿಸುವುದು ಇಷ್ಟವಿರಲಿಲ್ಲ. ಹಾಗಾಗಿ ಪರ್ಸೋನಾ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಆಲೋಚನೆ ಕೂಡ ಇದೆ. ಅಂದ್ಹಾಗೆ ಒಳ್ಳೆ ಅವಕಾಶ ಸಿಕ್ಕರೆ ಸಿನಿಮಾ ಮಾಡುವ ಆಸೆ ಇವರದ್ದು, ಅಲ್ಲದೆ ಕಿಚ್ಚನ ಅಭಿಮಾನಿಯಾಗಿದ್ದರಿಂದ ಅವರೊಂದಿಗೆ ನಟಿಸುವ ಆಸೆ ಕೂಡ ವ್ಯಕ್ತಪಡಿಸಿದ್ದಾರೆ.

  English summary
  Bangalore Based Hema Niranjan Wins Persona Mrs India 2022, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X