'ಪೈಲ್ವಾನ್' ಚಿತ್ರ ಪೈರಸಿ : ಆರೋಪಿ ರಾಕೇಶ್ ಬಂಧನ
Recommended Video
ಪೈಲ್ವಾನ್ ಸಿನಿಮಾ ಪೈರಸಿ ಮಾಡಿದವನು ಕೊನೆಗೂ ತಗಲಾಕೊಂಡ. | Sudeep | FILMIBEAT KANNADA
'ಪೈಲ್ವಾನ್' ಸಿನಿಮಾ ಪೈರಸಿ ಆದ ಹಿನ್ನಲೆ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಈಗ ಆರೋಪಿ ರಾಕೇಶ್ ವಿರಾಟ್ ಎನ್ನುವವನನ್ನು ಬಂಧನ ಮಾಡಲಾಗದೆ.
ರಾಕೇಶ್ ವಿರಾಟ್ ನೆಲಮಂಗಲದ ನಿವಾಸಿ. ಇತ್ತೀಚಿಗಷ್ಟೆ ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾವನ್ನು ಫೇಸ್ ಬುಕ್ ಲೈವ್ ಮಾಡಿದ್ದ. ಜೊತೆಗೆ ಸಿನಿಮಾವನ್ನು ನೋಡಲು ನನಗೆ ಇನ್ ಬಾಕ್ಸ್ ಮೇಸೆಜ್ ಮಾಡಿ ಎಂದು ಬರೆದುಕೊಂಡಿದ್ದ.

ರಾಕೇಶ್ ಫೇಸ್ ಬುಕ್ ಖಾತೆಯಲ್ಲಿ ಅಪ್ ಲೋಡ್ ಆದ ಪೈರಸಿ ಸಿನಿಮಾವನ್ನು ಅನೇಕರು ವೀಕ್ಷಣೆ ಮಾಡಿದ್ದರು. ಈ ವಿಡಿಯೋ ಕೆಲವರು ಶೇರ್ ಮಾಡಿದ್ದರು. ಪೈರಸಿ ವಿರುದ್ಧ ದೂರು ನೀಡಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದರು. ಇಂದು (ಸಪ್ಟೆಂಬರ್ 20) DCP ರವಿಕುಮಾರ್ ನೇತೃತ್ವದಲ್ಲಿ ಆರೋಪಿ ರಾಕೇಶ್ ಅನ್ನು ಬಂಧನ ಮಾಡಲಾಗಿದೆ.
ಮತ್ತೊಂದು ಕಡೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇಂದು ಸುದೀಪ್ ರನ್ನು ಭೇಟಿ ಮಾಡಿದ್ದಾರೆ. ಜೆಪಿ ನಗರದ ಸುದೀಪ್ ಮನೆಗೆ ಭಾಸ್ಕರ್ ರಾವ್ ಆಗಮಿಸಿದ್ದರು.
More from Filmibeat
English summary
Bangalore cyber crime police arrested Rakesh who did Pailwaan movie facebook live


Click it and Unblock the Notifications











