ನಟಿ ಶ್ರುತಿ ಹಾಗು ಚಂದ್ರಚೂಡ್ ಮದುವೆ ರದ್ದು
ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಶ್ರುತಿ ಹಾಗೂ ಪತ್ರಕರ್ತ ಚಂದ್ರಚೂಡ್ ಅವರ ಮದುವೆಯನ್ನು ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಶುಕ್ರವಾರ (ಸೆ.20) ರದ್ದು ಮಾಡಿದೆ. ಈ ಮೂಲಕ ಶ್ರುತಿ ಎರಡನೇ ಮದುವೆಯೂ ಮುರಿದು ಬಿದ್ದಿದೆ.
ಚಂದ್ರಚೂಡ್ ಅವರು ತಮ್ಮ ಮೊದಲ ಪತ್ನಿ ಮಂಜುಳಾ ಅವರಿಗೆ ವಿಚ್ಛೇದನ ನೀಡಿಲ್ಲ. ಶ್ರುತಿ ಜೊತೆಗಿನ ಅವರ ಮದುವೆಯನ್ನು ಅಸಿಂಧು ಮಾಡಬೇಕು ಎಂದು ಕೋರಿ ಅವರ ಮೊದಲ ಪತ್ನಿ ಮಂಜುಳಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಶ್ರುತಿ ಹಾಗೂ ಚಂದ್ರಚೂಡ್ ಮದುವೆಯನ್ನು ರದ್ದುಪಡಿಸಿದೆ.

ಈ ಹಿಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದ ನಟಿ ಶ್ರುತಿ ಅವರು ನ್ಯಾಯಾಧೀಶರ ಮುಂದೆ ಹಾಜರಾಗಿ ಮಂಜುಳಾ ಸಲ್ಲಿಸಿರುವ ವಿವಾಹ ರದ್ದು ಅರ್ಜಿಗೆ ತಮ್ಮ ತಕರಾರಿಲ್ಲ ಎಂದು ಹೇಳಿದ್ದರು. ಮಂಜುಳಾ ಬಗ್ಗೆಯೂ ಅವರು ಅನುಕಂಪದ ಮಾತುಗಳನ್ನು ಆಡಿದ್ದರು.
ನಟಿ ಶ್ರುತಿ ಜೂ.5ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಪತ್ರಕರ್ತ ಹೊಳೆನರಸೀಪುರದ ಚಂದ್ರಶೇಖರ್ ಯಾನೆ ಚಂದ್ರಚೂಡ ಚಕ್ರವರ್ತಿ ಅವರನ್ನು ವಿವಾಹ ಮಾಡಿಕೊಂಡಿದ್ದರು. (ಏಜೆನ್ಸೀಸ್)


Click it and Unblock the Notifications











