"ಹೇಯ್ ಪ್ರಕಾಶ್ ರಾಜ್ ಮಾತನ್ನು ಗಂಭೀರವಾಗಿ ತಗೋಬೇಡಿ"- ವಿ. ನಾಗೇಂದ್ರ ಪ್ರಸಾದ್ ತಿರುಗೇಟು

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಿದೆ. ಈ ಹಿಂದೆ ಕೂಡ ಚಿತ್ರೋತ್ಸವ ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿತ್ತು. ಈ ಬಾರಿ ನಟ, ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ನೀಡಿದ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ ಎಂದು ಪ್ರಕಾಶ್ ರಾಜ್ ಹೇಳಿದ್ದರು. ಇದಕ್ಕೆ ಗೀತಸಾಹಿತಿ ವಿ. ನಾಗೇಂದ್ರ ಪ್ರಸಾದ್ ತಿರುಗೇಟು ನೀಡಿದ್ದಾರೆ.

ಪ್ರಕಾಶ್ ರಾಜ್ ಅವರ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಡಿ ಎಂದು ವಿ. ನಾಗೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಜನವರಿ 29 ರಿಂದ ಫೆಬ್ರವರಿ 6ರ ವರೆಗೆ ಬೆಂಗಳೂರು ಚಿತ್ರೋತ್ಸವ ನಡೆಯಲಿದೆ. 70 ದೇಶಗಳ 240 ಸಿನಿಮಾಗಳು ಪ್ರದರ್ಶನವಾಗಲಿದೆ. ಜನವರಿ 29ರಂದು ಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮ ನಡೀತು. ಸಿಎಂ ಸಿದ್ಧರಾಮಯ್ಯ ಸೇರಿ ಹಲವು ಗಣ್ಯರು ಭಾಗಿ ಆಗಿದ್ದರು.

Bangalore Film Festival V Nagendra Prasad Counters Prakash Raj Over Palestinian Films Claim

ಪ್ರಕಾಶ್ ರಾಜ್ ಮಾತನಾಡಿ "ಇಂತಹ ವೇದಿಕೆಗಳಿಗೆ ರಾಜಕೀಯ ಪ್ರವೇಶವಾಗಿರುವುದು ದುರಂತ, ಕೆಲದೇಶದ ಸಿನಿಮಾಗಳ ಪ್ರದರ್ಶನವನ್ನು ಕೇಂದ್ರ ಸರ್ಕಾರ ಅನುವು ಮಾಡಿಕೊಡದಿರುವುದನ್ನು ರಾಜ್ಯ ಸರ್ಕಾರ ಖಂಡಿಸಬೇಕು" ಎಂದು ಮನವಿ ಮಾಡಿದ್ದರು. "ಪ್ಯಾಲೆಸ್ತೀನ್ ಸಿನಿಮಾಗಳನ್ನು ಬೆಂಬಲಿಸಿ ಕವನ ವಾಚನ ಮಾಡಿ ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿಧಾಮವನ್ನು ಹೋಲಿಸಿ ಮಾತನಾಡಿದ್ದರು. ಇಂತಹ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ರಾಜಕೀಯ ಮಾಡದಂತೆ ಪ್ರತಿರೋಧಿಸಲು ರಾಜ್ಯ ಸರ್ಕಾರವನ್ನು ಅವರಯ ಒತ್ತಾಯಿಸಿದ್ದರು.

ಪ್ರಕಾಶ್ ರಾಜ್ ಹೇಳಿಕೆ ಬಗ್ಗೆ ಆರ್‌ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿ. ನಾಗೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. "ಹೇಯ್ ಪ್ರಕಾಶ್ ರಾಜ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ಯಾಕಂದ್ರೆ ಪ್ಯಾಲೆಸ್ತೀನ್ ದೇಶಕ್ಕೆ ಔಷಧಿ ಕಳುಹಿಸಿದ್ದು ಮೋದಿ ಸರ್ಕಾರ. ಇಸ್ರೇಲ್, ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುವಾಗ ಭಾರತ ಸರ್ಕಾರ ಔಷಧಿ, ನೀರು ಕಳುಹಿಸಿತ್ತು. ಎರಡೂ ದೇಶಕ್ಕೆ ಬೆಂಬಲ ಸೂಚಿಸಿತ್ತು. ಸಿನಿಮಾ ವಿಚಾರದಲ್ಲಿ ರಾಜಕೀಯ ಬೇಡ. ಈಗ ಪ್ಯಾಲೆಸ್ತೀನ್ ಯಾವ ಸಿನಿಮಾ ಮಾಡ್ತಿದೆ. ಅವ್ರು ಹೇಳಿದ ಪದ್ಯ ಚೆನ್ನಾಗಿತ್ತು" ಎಂದಿದ್ದಾರೆ.

"ಪ್ರಕಾಶ್ ರಾಜ್ ಎಲ್ಲಾ ಕಡೆ ಮಾತನಾಡ್ತಾರೆ. ಏನೇ ಮಾತನಾಡಿದರೂ ಕೇಂದ್ರ ಸರ್ಕಾರವನ್ನು ದೂರುತ್ತಾರೆ. ನಮ್ಮ ಬೀದಿಗಳಲ್ಲಿ ನಾಯಿಗಳ ಸಂಖ್ಯೆ ಜಾಸ್ತಿ ಇದೆ. ಅದಕ್ಕೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವೇ? ಇದು ಸಿನಿಮಾ ಹಬ್ಬ. ಇಲ್ಲಿ ಸಿನಿಮಾಗಳ ಬಗ್ಗೆ ಚರ್ಚೆ ಆಗಬೇಕು. ಸಿನಿಮಾಗಳನ್ನು ನೋಡೋಣ" ಎಂದು ನಾಗೇಂದ್ರ ಪ್ರಸಾದ್ ಕೌಂಟರ್ ಕೊಟ್ಟಿದ್ದಾರೆ.

"ಸ್ತ್ರೀ ಎಂದರೇ ಅಷ್ಟೇ ಸಾಕೆ" ಎಂಬ ಥೀಮ್‌ನಲ್ಲಿ ಈ ಬಾರಿ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿದೆ. ವಾರ್ತಾ ಇಲಾಖೆ, ಚಲನ‌ಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಲನಚಿತ್ರ ಅಕಾಡೆಮಿ ಸಹಯೋಗದೊಂದಿಗೆ ಈ ಚಿತ್ರೋತ್ಸವ ನಡೆಯುತ್ತಿದೆ. ಪ್ರತಿಬಾರಿ ರಾರಾಜಿನಗರದ ಒರಾಯನ್ ಮಾಲ್‌ನಲ್ಲಿ ಸಿನಿಮಾ ಪ್ರದರ್ಶನ ಹೆಚ್ಚಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಲುಲು ಮಾಲ್‌ನ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್, ಬನಶಂಕರಿ ಸುಚಿತ್ರಾ ಫಿಲ್ಮ್ ಸೊಸೈಟಿ ಹಾಗೂ ಚಾಮರಾಜಪೇಟೆಯ ಕಲಾವಿದರ ಸಂಘದ ಸ್ಕ್ರೀನ್‌ಗಳಲ್ಲಿ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.

ಈ ಬಾರಿ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ಅತ್ಯುತ್ತಮ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬರ್ಲಿನ್ (ಜರ್ಮನಿ, ವೆನಿಸ್ (ಇಟಲಿ), ಕಾರ್ಲೋವಿ ವೇರಿ (ಜೆಕ್‌ ರಿಪಬ್ಲಿಕ್, ಲೊಕಾರ್ನೂ (ಸಿಟ್ಟರ್ಲೆಂಡ್), ರಾಟರ್‌ಡ್ಯಾಮ್ (ನೆದರ್ ಲ್ಯಾಂಡ್), ಬೂಸಾನ್ (ದಕ್ಷಿಣ ಕೂರಿಯಾ), ಟೊರಂಟೋ (ಕೆನಡಾ) ಹಾಗೂ ಕಾನ್ಸ್ (ಫ್ರಾನ್ಸ್) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X