»   » ಬೆಂಗಳೂರಿನಲ್ಲೇ ಅತ್ಯಾಧುನಿಕ ಚಿತ್ರಮಂದಿರ ಮಾನಸ

ಬೆಂಗಳೂರಿನಲ್ಲೇ ಅತ್ಯಾಧುನಿಕ ಚಿತ್ರಮಂದಿರ ಮಾನಸ

Posted By:
Subscribe to Filmibeat Kannada

ಸುಮಾರು 50 ವರ್ಷಗಳ ಸುದೀರ್ಘ ಇತಿಹಾಸವನ್ನು ಕೋಣನಕುಂಟೆಯ ಮಾನಸ ಚಿತ್ರಮಂದಿರಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಠಿಸಿದ ನೂರಾರು ಚಿತ್ರಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ ಪಡೆದುಕೊಂಡಿದೆ.

ಡಿ.ಟಿ.ಎಸ್, ಯು.ಎಫ್.ಡಿ. ತಂತ್ರ ಜ್ಞಾನದೊಂದಿಗೆ 1997 ರಲ್ಲಿ ನವೀಕೃತಗೊಂಡು ಆ ಭಾಗದ ಚಿತ್ರ ಪ್ರೇಮಿಗಳಿಗೆ ಅತ್ಯುತ್ತಮ ಗುಣಮಟ್ಟದ ಧ್ವನಿ ವ್ಯವಸ್ಥೆ ಹಾಗೂ ನೈಜ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವಲ್ಲಿ ಸೈ ಎನಿಸಿಕೊಂಡಿತ್ತು.

ಈಗ 2013 ರಲ್ಲಿ "11.1 ಏರೋ" ಹೆಸರಿನ ವಿಶ್ವಮಟ್ಟದ ಸೌಂಡ್ ಟೆಕ್ನಾಲಜಿಯನ್ನು ಬಾಕೋ ಕಂಪನಿಯ ಸಹಯೋಗದೊಂದಿಗೆ ಅಳವಡಿಸಿಕೊಂಡು ಪ್ರೇಕ್ಷಕರಿಗೆ ಆಧುನಿಕ ತಂತ್ರಜ್ಞಾನದ ಸೌಂಡ್ ಎಫೆಕ್ಟ್ ನೀಡಲು ಸಜ್ಜಾಗಿದೆ.

ಸುಮಾರು ರು.20 ಲಕ್ಷ ವೆಚ್ಚದ ತಂತ್ರಜ್ಞಾನ

ಸುಮಾರು 20 ಲಕ್ಷ ರೂ.ಗಳ ವೆಚ್ಚದಲ್ಲಿ ಈ ತಂತ್ರಜ್ಞಾನವನ್ನು ಥಿಯೇಟರಿನಲ್ಲಿ ಅಳವಡಿಸಲಾಗಿದ್ದು 360 ಡಿಗ್ರಿ ಸುತ್ತಳತೆಯಲ್ಲಿ ಪ್ರೇಕ್ಷಕರು ಚಿತ್ರದಲ್ಲಿ ಬರುವ ಸಂಗೀತ, ವಿಶೇಷ ಶಬ್ದಗಳನ್ನು ಕೇಳುವ ಅವಕಾಶ ಇದರಲ್ಲಿದೆ.

ಬಾರ್ಕೋ ಕಂಪನಿಯ '11.1 ಏರೋ'

ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಬಾರ್ಕೋ ಕಂಪನಿ '11.1 ಏರೋ' ಎಂಬ ಈ ತಂತ್ರಜ್ಞಾನವನ್ನು ರೂಪುಗೊಳಿಸಿದ್ದು ಮೈಸೂರಿನ ಬಿ.ಆರ್.ಸಿ. ಮಲ್ಟಿಪ್ಲೆಕ್ಸ್ ನಲ್ಲಿ ಈಗಾಗಲೇ ಇದನ್ನು ಅಳವಡಿಸಲಾಗಿದೆ.

ಹಂತ ಹಂತವಾಗಿ ಆಧುನೀಕರಣಗೊಂಡ ಥಿಯೇಟರ್

ಚಿತ್ರಮಂದಿರಗಳಲ್ಲಿ ಮೊದಲು ಮೋನೋ ಸ್ಟೀರಿಯೋ ಸರೌಂಡ್ 3.1, 5.1, 7.1 ಹಾಗೂ ಈಗ ಬಂದಿರುವ 11.1 ಹೀಗೆ ಸೌಂಡ್ ಟೆಕ್ನಾಲಜಿಯನ್ನು ಹಂತ ಹಂತವಾಗಿ ಆಧುನೀಕರಣಗೊಳಿಸಲಾಗಿದೆ.

ಥಿಯೇಟರ್ ಗಳನ್ನೂ ನವೀಕರಿಸಿಕೊಳ್ಳಬೇಕು

'11.1 ಏರೋ'ಗೆ ಮೊದಲು ಚಿತ್ರದ ಪ್ರೋಸೆಸಿಂಗ್ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದ್ದು ಅದಕ್ಕೆ ತಕ್ಕಂತೆ ಥಿಯೇಟರ್ ಗಳನ್ನು ಕೂಡ ನವೀಕರಿಸಿಕೊಳ್ಳಬೇಕಾಗಿದೆ.

ತಂತ್ರಜ್ಞಾನದ ಬಗ್ಗೆ ವಿವರ ನೀಡಿದ ಬಾರ್ಕೋ ಕಂಪನಿ

ಇತ್ತೀಚೆಗೆ ಮಾನಸ ಚಿತ್ರಮಂದಿರದಲ್ಲಿ ಈ ತಂತ್ರಜ್ಞಾನದ ಬಗ್ಗೆ ನಡೆದ ಪತ್ರಕಾಗೋಷ್ಠಿಯಲ್ಲಿ ಬಾರ್ಕೋ ಕಂಪನಿಯು ಮಧುಸೂಧನ್, ಥಿಯೇಟರ್ ಮ್ಯಾನೇಜರ್ ಕಾವೇರಪ್ಪ ಹಾಗೂ ಥಿಯೇಟರಿನ ಸೌಂಡ್ ಎಂಜಿನೀಯರ್ ಫೆಲಿಸ್ ರಾಜ ಉಪಸ್ಥಿತರಿದ್ದರು.

ಸೌಂಡ್ ಎಫೆಕ್ಟನ್ನು ಅನುಭವಿಸಿಯೇ ತೀರಬೇಕು

ಇನ್ನು ಮುಂದೆ ಮಾನಸ ಚಿತ್ರಮಂದಿರದಲ್ಲಿ ಈ '11.1 ಏರೋ' ಸೌಂಡ್ ಎಫೆಕ್ಟನ್ನು ಪ್ರೇಕ್ಷಕರು ಅನುಭವಿಸಿಬಹುದಾಗಿದೆ. ಇದೇ ಸಂದರ್ಭದಲ್ಲಿ '11.1 ಏರೋ' ಬಗ್ಗೆ 12 ನಿಮಿಷಗಳ ವಿಡಿಯೋ ಪ್ರದರ್ಶನ ಕೂಡ ಈ ಸಂದರ್ಭದಲ್ಲಿ ಪತ್ರಕರ್ತರಿಗೆ ತೋರಿಸಲಾಯಿತು.

ಉಪೇಂದ್ರ, ರಾಕ್ ಲೈನ್ ಅವರಿಗೂ ವಿವರಣೆ

ಈಗಾಗಲೇ ಮಧುಸೂಧನ್ ಅವರು ಉಪೇಂದ್ರ, ರಾಕ್ ಲೈನ್ ವೆಂಕಟೇಶ್ ಅವರನ್ನು ಸಂಪರ್ಕಿಸಿ ಈ ತಂತ್ರಜ್ಞಾನದ ಬಗ್ಗೆ ವಿವರಿಸಿದ್ದಾರೆ.

English summary
For the first time in Bangalore, Manasa theater in Bangalore gets Auro 11.1 3D surround Sound system. Totally two theaters in Karnataka :
 1st - DRC Cinemaas Multiplex, Mysore 2nd - Manasa Theater, Konanakunte Cross, Bangalore have such sound technology.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada