For Quick Alerts
  ALLOW NOTIFICATIONS  
  For Daily Alerts

  ಮನೆಯಲ್ಲೇ ಇರುತ್ತೇವೆ, ಹೆಂಗೆ ನಾವು?: ಕೊರೊನಾ ಜಾಗೃತಿಗೆ ಸಿನಿಮಾ ಮೊರೆ ಹೋದ ಪೊಲೀಸರು

  |

  ವಿಶ್ವದಾದ್ಯಂತ ಕಿಲ್ಲರ್ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾವನ್ನು ಮಟ್ಟಹಾಕಲೇ ಬೇಕೆಂದು ಪಣ ತೊಟ್ಟಿರುವ ಭಾರತ, ಸಂಪೂರ್ಣ ಲಾಕ್ ಡೌನ್ ಮಾಡಿದೆ. ಜನರು ಮನೆಯಿಂದ ಹೊರಬರದಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೂ ಜನ ಮನೆಬಿಟ್ಟು ಹೊರಗೆ ಸುತ್ತಾಡುತ್ತಿರುತ್ತಾರೆ.

  ಹಾಡುಗಳ ಮೂಲಕ, ಪೋಸ್ಟರ್ಸ್, ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಸಾಕಷ್ಟು ವಿದಾನಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಬೆಂಗಳೂರು ಪೊಲೀಸರು ಕೊರೊನಾ ಜಾಗೃತಿಗೆ ಹೊಸ ಪ್ಲಾನ್ ಮಾಡಿದ್ದಾರೆ. ಹೌದು, ಸಿನಿಮಾದ ಫೇಮಸ್ ಡೈಲಾಗ್ ಬಳಸಿ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಬೆಂಗಳೂರು ಪೊಲೀಸರು. ಮುಂದೆ ಓದಿ..

  ಪೊಲೀಸರ ಹೊಸ ಅಸ್ತ್ರ

  ಪೊಲೀಸರ ಹೊಸ ಅಸ್ತ್ರ

  ಸಿನಿಮಾ ಡೈಲಾಗ್, ಹಾಡುಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತೆ. ಜನರು ಸಿನಿಮಾದ ಉದ್ದುದ್ದ ಡೈಲಾಗ್, ಹಾಡುಗಳನ್ನು ಕೇಳಿ ಕಂಠಪಾಠ ಮಾಡಿ ಹೇಳುತ್ತಿರುತ್ತಾರೆ. ಹಾಗಾಗಿ ಅದನ್ನೆ ಅಸ್ತ್ರವಾಗಿ ಬಳಸಿಕೊಂಡು ಕೊರೊನಾ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಬೆಂಗಳೂರು ಪೊಲೀಸರು.

  ಲವ್ ಮಾಕ್ ಟೇಲ್ ಮೊರೆ ಹೋದ ಪೊಲೀಸರು

  ಲವ್ ಮಾಕ್ ಟೇಲ್ ಮೊರೆ ಹೋದ ಪೊಲೀಸರು

  ಇತ್ತೀಚಿಗೆ ರಿಲೀಸ್ ಆದ ಲವ್ ಮಾಕ್ಟೇಲ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಡೈಲಾಗ್ ಗಳು ಸಹ ಸಖತ್ ಟ್ರೆಂಡ್ ಆಗಿವೆ. ಅದರಲ್ಲೂ ಈ ಸಿನಿಮಾ ಅದಿತಿ ಪಾತ್ರ ಮಾಡಿದ ನಟಿ ರಚನಾ ಹೇಳುವ "ಹೆಂಗೆ ನಾವು?" ಡೈಲಾಗ್ ಸಖತ್ ಫೇಮಸ್. ಟ್ರೋಲ್ ಪೇಜ್ ಗಳಲ್ಲಿ ರಾರಾಜಿಸುತ್ತಿರುವ ಈ ಡೈಲಾಗ್ ಈಗ ಕೊರೊನಾ ಜಾಗೃತಿಗೂ ಬಳಕೆಯಾಗುತ್ತಿದೆ.

  ಕೊರೊನಾ ಜಾಗೃತಿಗೆ ಅದಿತಿ ಡೈಲಾಗ್

  ಕೊರೊನಾ ಜಾಗೃತಿಗೆ ಅದಿತಿ ಡೈಲಾಗ್

  'ಹೆಂಗೆ ನಾವು' ಡೈಲಾಗ್ ಬಳಸಿಕೊಂಡು ಬೆಂಗಳೂರು ಪೊಲೀಸರು ಟ್ವಿಟ್ಟರ್ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. "ಕೊರೋನಾವನ್ನು ಹೊಡೆದೋಡಿಸಲು ನಾವು ಮನೆಯಲ್ಲಿಯೇ ಇರುತ್ತೇವೆ. ಹೆಂಗೆ ನಾವು"? ಎಂದು ನಟಿ ರಚನಾ ಫೋಟೋ ಹಾಕಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

  ಸಖತ್ ನೀವು: ಪೊಲೀಸರ ಟ್ವೀಟ್

  ರಚನಾ ಫೋಟೋ ಜೊತೆಗೆ ಬೆಂಗಳೂರು ಪೊಲೀಸರು "ಲಾಕ್ ಡೌನ್ ಕ್ರಮಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಿರುವ ಎಲ್ಲಾ ಬೆಂಗಳೂರಿಗರಿಗೆ ಚಪ್ಪಾಳೆ, ಸಖತ್ ನೀವು" ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗುತ್ತಿದೆ.

  English summary
  Bangalore police use Love mocktail film dialogue for raise awareness for corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X