ಸಿಂಬುಗೆ ಉಡುಗೊರೆ ಕಳುಹಿಸಿದ 'ಕನ್ನಡಮ್ಮ': ಗಿಫ್ಟ್ ನೋಡಿ ಭಾವುಕರಾದ ನಟ

By Bharath Kumar

Recommended Video

ಸಿಂಬುಗೆ ಸಿಕ್ಕ ಉಡುಗೊರೆಯಲ್ಲಿ ಏನಿತ್ತು..? | Filmibeat Kannada

ತಮಿಳು ನಟ ಸಿಂಬು ಕಾವೇರಿ ನೀರು ವಿಚಾರದಲ್ಲಿ ಕನ್ನಡಿಗರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ನೀರಿನ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದ್ದ ತಮಿಳುಗರಿಗೆ ಕನ್ನಡ ಜನರ ಸ್ಥಿತಿ-ಗತಿಯನ್ನ ತಿಳಿಸುವ ಮೂಲಕ ಮಾನವೀಯತೆ ಮೆರೆದಿದ್ದರು.

ಇದು ಸಹಜವಾಗಿ ಕರ್ನಾಟಕ ಜನರ ಮನಸ್ಸು ಗೆದ್ದಿತ್ತು. ಇಂತಹ ನಟನಿಗೆ ಕರ್ನಾಟಕದ ತಾಯಿಯೊಬ್ಬರು ಒಂದು ವಿಶೇಷವಾದ ಉಡುಗೊರೆಯನ್ನ ಕಳುಹಿಸಿಕೊಟ್ಟಿದ್ದಾರೆ.

ಕನ್ನಡಮ್ಮ ಕಳುಹಿಸಿದ ಉಡುಗೊರೆಯನ್ನ ಸಾವಿರಾರು ತಮಿಳು ಜನರ ಮಧ್ಯೆ ಸ್ವೀಕರಿಸಿದ ತಮಿಳು ನಟ ಸಿಂಬು ಆ ತಾಯಿಗೆ ಹೃದಯಪೂರ್ವಕ ಧನ್ಯವಾದಗಳನ್ನ ಹೇಳಿ ಭಾವುರಾಗಿರುವ ಘಟನೆ ನಡೆದಿದೆ. ಅಷ್ಟಕ್ಕೂ, ಈ ಘಟನೆ ನಡೆದಿದ್ದು ಎಲ್ಲಿ, ಯಾವಾಗ.? ಆ ಉಡುಗೊರೆಯಲ್ಲಿ ಏನಿತ್ತು.? ಎಂದು ತಿಳಿಯಲು ಮುಂದೆ ಓದಿ....

ನೀರು ಕೇಳಿದ್ದ ನಟ ಸಿಂಬು

ನೀರು ಕೇಳಿದ್ದ ನಟ ಸಿಂಬು

ಏಪ್ರಿಲ್ 11 ರಂದು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯೊಳಗೆ ಕರ್ನಾಟಕ ಜನರು, 'ಒಂದು ಲೋಟದಲ್ಲಿ ತಮಿಳಿರಿಗೆ ನೀರು ಕೊಡಿ' ಎಂದು ನಟ ಸಿಂಬು ಕೇಳಿಕೊಂಡಿದ್ದ ಘಟನೆ ನೆನಪಿರಬಹುದು. ಸಿಂಬು ಅವರ ಈ ಮಾತಿಗೆ ಬೆಲೆ ಕೊಟ್ಟ ಕನ್ನಡಿಗರು ಬಾಟಲ್, ಲೋಟ, ಬಿಂದಿಗೆ ಹೀಗೆ ನೀರು ಕೊಟ್ಟು ಮಾನವೀಯತೆ ಮೆರೆದಿದ್ದರು. ಇದು ತಮಿಳುನಾಡಿನಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಿತ್ತು.

ನೀರಿನ ಜೊತೆ ಉಡುಗೊರೆ ಕೊಟ್ಟ

ನೀರಿನ ಜೊತೆ ಉಡುಗೊರೆ ಕೊಟ್ಟ

ಈ ಅಭಿಯಾನದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಜನರ ಹೃದಯ ಗೆದ್ದ ನಟ ಸಿಂಬುಗೆ ಕನ್ನಡ ತಾಯಿಯೊಬ್ಬರು ನೀರಿನ ಜೊತೆ ವಿಶೇಷವಾದ ಉಡುಗೊರೆಯನ್ನ ನೀಡಿದ್ದಾರೆ. ಒಂದು ಬಾಟಲ್ ನೀರು ಮತ್ತು ನೀರಿನ ಜೊತೆ ಒಂದು 'ಶ್ವೆಟ್ಟರ್'ನ್ನ ಕಳುಹಿಸಿದ್ದಾರೆ. ಬೆಂಗಳೂರು ಮೂಲದ ಆ ತಾಯಿ ಕಳುಹಿಸಿದ ನೀರನ್ನ ಸಿಂಬು ಕುಡಿದು ಖುಷಿ ಪಟ್ಟರು.

ಧನ್ಯವಾದ ತಿಳಿಸಿದ ಸಿಂಬು

ಧನ್ಯವಾದ ತಿಳಿಸಿದ ಸಿಂಬು

ಬೆಂಗಳೂರಿನಿಂದ ಉಡುಗೊರೆ ಕಳುಹಿಸಿದ್ದ ಆ ತಾಯಿ ''ನೀನು ತುಂಬಾ ಚೆನ್ನಾಗಿ ಮಾತನಾಡಿದ್ದೀಯಾ. ಸಿಂಬು ನೀನು ಒಳ್ಳೆಯ ಕೆಲಸ ಮಾಡಿದ್ದೀಯಾ. ನಿನ್ನ ಜೊತೆ ನಾನು ಇರುತ್ತೇನೆ' ಎಂದು ವಿಡಿಯೋ ಮೂಲಕ ತಿಳಿಸಿದರು. ನಂತರ ಮಾತನಾಡಿದ ಸಿಂಬು ''ಆ ತಾಯಿ ಏನೂ ಮಾತಾಡಿದ್ರು ಎನ್ನುವುದು ನನಗೆ ಗೊತ್ತಾಗಿಲ್ಲ. ಆದ್ರೆ, ಆ ಮನಸ್ಸಿನಲ್ಲಿರುವ ಸಂಗತಿಗಳು ನನಗೆ ಅರ್ಥವಾಯಿತು. ಅವರಿಗೆ ನಾನು ಚಿರಋಣಿ'' ಎಂದರು.

ಟವಿ ಶೋನಲ್ಲಿ ಪೂರ್ತಿ ಪ್ರಸಾರ

ಟವಿ ಶೋನಲ್ಲಿ ಪೂರ್ತಿ ಪ್ರಸಾರ

ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಜೋಡಿ ಡ್ಯಾನ್ಸ್ 2 ಗ್ರ್ಯಾಂಡ್ ಫಿನಾಲೆಯಲ್ಲಿ ಈ ವಿಶೇಷವಾದ ಸಂಚಿಕೆ ಮೂಡಿ ಬಂದಿತ್ತು. ಈ ಕಾರ್ಯಕ್ರಮದ ಅತಿಥಿಯಾಗಿದ್ದ ಸಿಂಬು ಅವರಿಗೆ ಈ ಬಾಟಲ್ ನೀರು ಮತ್ತು ಉಡುಗೊರೆಯನ್ನ ನೀಡಿದರು.

More from Filmibeat

English summary
Tamil Actor Simbu had recently given a speech requesting Kannadigas to give Water to Tamilians. so, Bangalore Women has Sent Water to Actor simbu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X