ಸುಶಾಂತ್ ಸಿಂಗ್ ಸಾಧನೆ ಬಗ್ಗೆ ಕನ್ನಡಿಗನ ಹಾಡು
ನಟ ಸುಶಾಂತ್ ಸಿಂಗ್ ಸಾಧನೆ ಬಗ್ಗೆ ಕನ್ನಡಿಗರೊಬ್ಬರು ಹಾಡು ಮಾಡಿದ್ದಾರೆ. ಆಲ್ಬಂ ನ ಹಾಡು ಅಗಲಿದ ನಟ ಸುಶಾಂತ್ ಸಿಂಗ್ ಗಾಗಿ ಮೀಸಲು. ಆದರೆ ಹಾಡುಗಳಿರುವುದು ಕನ್ನಡದಲ್ಲ ಬದಲಿಗೆ ಹಿಂದಿಯಲ್ಲಿ.
ಕನ್ನಡಿಗರಾದ ವಿನಯ್ ಚಂದ್ರ ಎಂಬುವರು ಸುಶಾಂತ್ ಸಿಂಗ್ ಬಗ್ಗೆ ಹಾಡಿನ ಆಲ್ಬಂ ಹೊರತಂದಿದ್ದಾರೆ. ಈ ಆಲ್ಬಂ ಗೆ 'ಅಲ್ವಿದಾ' ಎಂದು ಹೆಸರಿಡಲಾಗಿದ್ದು, ಹಾಡಿನ ಆಲ್ಬಂ ಅನ್ನು ಪ್ಲೇ ಟು ಮೀ ಸಂಸ್ಥೆಯು ಅರ್ಪಿಸಿದೆ.
ಹಾಡಿನ ಟೀಸರ್ ಲಾಂಚ್ ಆಗಿದ್ದು, ಹಾಡಿನ ಬಿಡುಗಡೆ ಶೀಘ್ರದಲ್ಲಿಯೇ ಆಗಲಿದೆ. ಹಾಡಿಗೆ ಸಂಗೀತ, ವಿನಯ್ ಚಂದ್ರ ಅವರದ್ದೇ, ಅಷ್ಟೇ ಅಲ್ಲದೆ ಹಾಡು ಹಾಡಿ, ನಟಿಸಿರುವುದು ಸಹ ವಿನಯ್ ಚಂದ್ರ ಅವರೇ. ಸಾಹಿತ್ಯ ಅಭಿಲಾಷ್ ಗುಪ್ತ ಅವರದ್ದು.

ಅವರೇ ಹೇಳಿರುವಂತೆ ಬೆಂಗಳೂರಿನಲ್ಲಿಯೇ ಸೆಟ್ ಹಾಕಿ ಸುಮಾರು ಮೂರು ದಿನಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹಾಡಿನಲ್ಲಿ ಸುಶಾಂತ್ ಸಿಂಗ್ ರ ಸಂಘರ್ಷ, ಶ್ರಮ, ಯಶಸ್ಸು, ಅವರಿಗಾದ ವಂಚನೆ ಇನ್ನೂ ಹಲವು ವಿಷಯಗಳನ್ನು 'ಕವರ್' ಮಾಡಲಾಗಿದೆಯಂತೆ.
'ಅಲ್ವಿದಾ' ಆಲ್ಬಂ ನ ಟೀಸರ್ ಅನ್ನು ಸಂಗೀತ ನಿರ್ದೇಶಕ ವಿ.ಮನೋಹರ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ವಿನಯ್ ಚಂದ್ರ ತಂದೆ ಪತ್ರಕರ್ತ ಸುರೇಶ್ ಚಂದ್ರ, ನಟ ರವಿ ಚೇತನ್ ಬಿಡುಗಡೆ ಮಾಡಿದರು.
Recommended Video
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಜೂನ್ 14 ರಂದು ನಿಧನರಾದರು. ಮುಂಬೈನ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಯಿತು. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.


Click it and Unblock the Notifications











