For Quick Alerts
  ALLOW NOTIFICATIONS  
  For Daily Alerts

  'ಓಂ' ಚಿತ್ರಕ್ಕೂ 'ಬಂಗಾರ S/O ಬಂಗಾರದ ಮನುಷ್ಯ' ಚಿತ್ರಕ್ಕೂ ಲಿಂಕ್ ಇದೆ.! ಏನದು.?

  |

  'ಓಂ'... ಈ ಸಿನಿಮಾದ ಹೆಸರು ಕೇಳಿದ ತಕ್ಷಣ 'ಶಿವ'ಭಕ್ತರ ಕಿವಿ ನೆಟ್ಟಗಾಗುತ್ತೆ. ಬರೋಬ್ಬರಿ 552 ಬಾರಿ ರೀ-ರಿಲೀಸ್ ಆಗಿ ದಾಖಲೆ ಬರೆದಿರುವ 'ಓಂ' ಸಿನಿಮಾ ಇವತ್ತು ರಿಲೀಸ್ ಆದರೂ ಜನ ಚಿತ್ರಮಂದಿರಕ್ಕೆ ನುಗ್ಗುತ್ತಾರೆ. ಯಾಕಂದ್ರೆ, 'ಓಂ' ಚಿತ್ರಕ್ಕಿರುವ ಕ್ರೇಜ್ ಅಂಥದ್ದು.['ಬಂಗಾರ ಸನ್ ಆಫ್ ಬಂಗಾರದ ಮನುಷ್ಯ'ನ ರಿಲೀಸ್ ಡೇಟ್ ಪಕ್ಕಾ ಆಯ್ತು!]

  ಈಗ 'ಓಂ' ಚಿತ್ರದ ಬಗ್ಗೆ ನಾವು ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ಈಗ ಮತ್ತೆ ಅಭಿಮಾನಿಗಳಿಗೆ 22 ವರ್ಷಗಳ ಹಿಂದಿನ 'ಓಂ' ಸಿನಿಮಾವನ್ನ ನೆನಪಿಸುವ ಹಾಗೆ ಮಾಡಿದೆ.['AMR ರಮೇಶ್'ಗೆ ಜೀವ ಬೆದರಿಕೆ: ಶಿವಣ್ಣ ಅಭಿಮಾನಿಗಳು ಹೀಗೂ ಮಾಡ್ತಾರ?]

  'ಓಂ' ಸಿನಿಮಾಗೂ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಆದರೂ ಒಂದು ಕನೆಕ್ಷನ್ ಇದೆ. ಅದೇನು ಅಂತ ತಿಳಿಯಲು ಪೂರ್ತಿ ಸ್ಟೋರಿ ಓದಿರಿ..

  ಮೇ 19ಕ್ಕೆ ರಿಲೀಸ್

  ಮೇ 19ಕ್ಕೆ ರಿಲೀಸ್

  'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ಈ ಹಿಂದೆಯೇ ರಿಲೀಸ್ ಆಗಬೇಕಿತ್ತು. ಅದ್ರೀಗ, ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸಿನಿಮಾ ಇದೇ ತಿಂಗಳ 19ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ.[ನಾಯಕಿಯರಿಗಾಗಿ 'ಚೆನ್ನೈ ಟು ಬಾಂಬೆ' ಹುಡುಕುತ್ತಿರುವ 'ದಿ ವಿಲನ್'! ]

  ಅದೇ ದಿನ 'ಓಂ' ತೆರೆಗೆ ಬಂದಿತ್ತು.!

  ಅದೇ ದಿನ 'ಓಂ' ತೆರೆಗೆ ಬಂದಿತ್ತು.!

  1995ರ ಮೇ 19ಕ್ಕೆ 'ಓಂ' ಸಿನಿಮಾ ಬಿಡುಗಡೆಯಾಗಿತ್ತು. ಈಗ 22 ವರ್ಷಗಳ ನಂತರ ಅದೇ ದಿನ ಶಿವಣ್ಣ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ರಿಲೀಸ್ ಆಗುತ್ತಿದೆ.

  ದುಪ್ಪಟ್ಟಾದ ನಿರೀಕ್ಷೆ

  ದುಪ್ಪಟ್ಟಾದ ನಿರೀಕ್ಷೆ

  'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾದ ಮೇಲೆ ಈಗಾಗಲೇ ದೊಡ್ಡ ನಿರೀಕ್ಷೆ ಇತ್ತು. ಈಗ 'ಓಂ' ಸಿನಿಮಾದ ದಿನವೇ ಈ ಚಿತ್ರವೂ ತೆರೆಗೆ ಬರುತ್ತಿರುವುದು ಅಭಿಮಾನಿಗಳ ನಿರೀಕ್ಷೆಯನ್ನ ದುಪ್ಪಟ್ಟಾಗುವಂತೆ ಮಾಡಿದೆ.

  ಚಿತ್ರದ ಬಗ್ಗೆ

  ಚಿತ್ರದ ಬಗ್ಗೆ

  'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ಜಯಣ್ಣ ಕಂಬೈನ್ಸ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾವಾಗಿದ್ದು, ಯೋಗಿ ಜಿ.ರಾಜ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಿವಣ್ಣನಿಗೆ ಇಲ್ಲಿ ವಿದ್ಯಾ ಪ್ರದೀಪ್ ನಾಯಕಿಯಾಗಿದ್ದಾರೆ. ವಿ.ಹರಿಕೃಷ್ಣ ಸಂಗೀತ ನೀಡಿದ್ದು, ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದೆ.[ಡಾ.ರಾಜ್ ಹುಟ್ಟುಹಬ್ಬಕ್ಕೆ 'ಟಗರು' ಚಿತ್ರತಂಡ ಕೊಟ್ಟ ಗಿಫ್ಟ್ ನೋಡಿ!]

  English summary
  Kannada Actor Shiva Rajkumar starrer Kannada Movie 'Bangara S/O Bangarada Manushya' is all set to release on May 19th all over Karnataka. The movie is directed by Yogi, features Vidya Pradeep, Chikkanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X