»   » ಶಿವಣ್ಣ ಭಕ್ತರಿಗೆ 'ಶಿವರಾತ್ರಿ ಹಬ್ಬ'ದಂದು ಭರ್ಜರಿ ಕೊಡುಗೆ

ಶಿವಣ್ಣ ಭಕ್ತರಿಗೆ 'ಶಿವರಾತ್ರಿ ಹಬ್ಬ'ದಂದು ಭರ್ಜರಿ ಕೊಡುಗೆ

Written By:
Subscribe to Filmibeat Kannada

ಈ ವರ್ಷದ ಮಹಾಶಿವರಾತ್ರಿ ಹಬ್ಬ ಶಿವನ ಭಕ್ತರಿಗೆ ಮಾತ್ರವಲ್ಲ, ಶಿವರಾಜ್ ಕುಮಾರ್ ಭಕ್ತರಿಗೂ ಅದ್ಧೂರಿಯಾಗಿರಲಿದೆ. ಯಾಕಂದ್ರೆ, ಸೆಂಚುರಿ ಸ್ಟಾರ್ ಕಡೆಯಿಂದ ಭರ್ಜರಿ ಉಡುಗೊರೆಯೊಂದು ಸಿದ್ದವಾಗುತ್ತಿದೆ.

ಹೌದು, ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಹಬ್ಬದ ಪ್ರಯುಕ್ತ ಫಸ್ಟ್ ಲುಕ್ ರಿಲೀಸ್ ಮಾಡಲು ನಿರ್ಧರಿಸಿದೆ.['ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ]

Bangaru Son of Bangarada Manushya Movie Teaser On Shivarathri Festival

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಯೋಗಿ ಆಕ್ಷನ್ ಕಟ್ ಹೇಳಿದ್ದು, ಹ್ಯಾಟ್ರಿಕ್ ಹೀರೋಗೆ ವಿದ್ಯಾ ಪ್ರದೀಪ್ ನಾಯಕಿಯಾಗಿದ್ದಾರೆ. ಉಳಿದಂತೆ ವಿಶಾಲ್ ಹೆಗಡೆ, ಸಾಧು ಕೋಕಿಲಾ, ಚಿಕ್ಕಣ್ಣ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜಯಣ್ಣ-ಭೊಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ವಿ.ಹರಿಕೃಷ್ಣ ಅವರ ಸಂಗೀತವಿದೆ.['ಬಂಗಾರದ ಮನುಷ್ಯ'ನ ಜೋಡಿಯಾಗೋ ಚೆಂದುಳ್ಳಿ ಚೆಲುವೆ ಈಕೆ]

Bangaru Son of Bangarada Manushya Movie Teaser On Shivarathri Festival

ಅಂದ್ಹಾಗೆ, ಡಾ.ರಾಜ್ ಕುಮಾರ್ ಅಭಿನಯಿಸಿದ್ದ 'ಬಂಗಾರದ ಮನುಷ್ಯ' ಚಿತ್ರಕ್ಕೂ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಆದ್ರೆ, ಇದೊಂದು ರೈತರ ಪರವಾದ ಚಿತ್ರ ಎಂಬುದು ಮಾತ್ರ ನಿಜ.[ಯುವ ನಿರ್ದೇಶಕರ ಮನಗೆದ್ದ ಹ್ಯಾಟ್ರಿಕ್ ಹೀರೋ ಶಿವಣ್ಣ]

English summary
Kannada Actor Shivraj Kumar Starrer 'Bangaru Son of Bangarada Manushya' Movie Teaser Releasing on Shivarathri Festival. The Movie Directed By Yogi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada