twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಪ್ರೇಮಿಗಳ ಕಪಾಲಿಗೆ ಹೊಡೆದ ಸಿಂಡಿಕೇಟ್ ಬ್ಯಾಂಕ್

    By ಜೀವನರಸಿಕ
    |

    ಆ ರೀತಿ ಸುದ್ದಿ ಬಹಳ ಸಮಯದಿಂದ ಚಾಲ್ತಿಯಲ್ಲಿತ್ತು. ಕಪಾಲಿ ಚಿತ್ರಮಂದಿರ ಕ್ಲೋಸಾಗುತ್ತೆ ಅನ್ನೋದು. ಈಗ ಆ ಸುದ್ದಿ ನಿಜವಾಗ್ತಿದೆ. ಕನ್ನಡ ಚಿತ್ರ ಪ್ರೇಕ್ಷಕರ ಫೇವರೀಟ್ ಆಗಿದ್ದ ಕಪಾಲಿ ಚಿತ್ರಮಂದಿರ ಈಗ ಸಿಂಡಿಕೇಟ್ ಬ್ಯಾಂಕ್ ನ ಮೂಲಕ ಹರಾಜಾಗಲಿದೆ.

    ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ಸಿನಿಮಾಗಳಿಗೆ ವೇದಿಕೆಯಾಗಿದ್ದ ಕಪಾಲಿ ಚಿತ್ರಮಂದಿರವಿದ್ದ ಸ್ಥಳ ಈಗ ರು.150 ಕೋಟಿಗೆ ಹರಾಜಿಗಿದೆ.
    ಇನ್ನು ಮಾಲ್ ಸಂಸ್ಕೃತಿಯಿಂದಾಗಿ ಒಂದೊಂದೇ ಚಿತ್ರಮಂದಿರಗಳು ನೆಲಕಚ್ತಿವೆ.

    ಈ ವರ್ಷವೊಂದರಲ್ಲೇ ಹಲಸೂರಿನ ಆದರ್ಶ ಚಿತ್ರಮಂದಿರ, ಕಾರ್ಪೊರೇಷನ್ ಬಳಿ ಇದ್ದ ಪಲ್ಲವಿ ಚಿತ್ರಮಂದಿರ, ಇತ್ತೀಚೆಗೆ ಕನ್ನಡ ಚಿತ್ರರಂಗದ ಲಕ್ಕಿ ಥಿಯೇಟರ್ ಅಂತಾನೇ ಫೇಮಸ್ ಆಗಿದ್ದ ಸಾಗರ್ ಕೂಡ ಕ್ಲೋಸಾಯ್ತು.

    ಜನವರಿ 8ರಂದು ಆನ್ ಲೈನ್ ಹರಾಜು

    ಜನವರಿ 8ರಂದು ಆನ್ ಲೈನ್ ಹರಾಜು

    ಈಗ ಏಷ್ಯಾದ ಎರಡನೇ ಅತಿಹೆಚ್ಚು ಪ್ರೇಕ್ಷಕ ಸಾಮರ್ಥ್ಯವಿದ್ದ (1500 ಸೀಟಿಗಳು) ಕಪಾಲಿ ಚಿತ್ರಮಂದಿರದ ಆನ್ ಲೈನ್ ಹರಾಜು ಜನವರಿ 8ರಂದು ನಡೆಯಲಿದೆ. ಚಿತ್ರಮಂದಿರದ ಮಾಲಿಕರು ಸಿಂಡಿಕೇಟ್ ಬ್ಯಾಂಕ್ ಗೆ ಒಂದಷ್ಟು ಸಾಲ ಪಾವತಿ ಮಾಡೋಕೆ ಬಾಕಿ ಇದೆ.

    ಅಲ್ಲಿಗೆ ಚಿತ್ರಮಂದಿರದ ಕಥೆ ಮುಗಿದಂತೆಯೇ

    ಅಲ್ಲಿಗೆ ಚಿತ್ರಮಂದಿರದ ಕಥೆ ಮುಗಿದಂತೆಯೇ

    ಈ ಹಣ ವಾಪಸಾತಿಗೆ ಈ ಹರಾಜು ನಡೀತಿದೆ. ಅಲ್ಲಿಗೆ ಚಿತ್ರಮಂದಿರದ ಕಥೆ ಮುಗಿದಂತೆಯೇ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಚಿತ್ರಪ್ರೇಮಿಗಳ ನೋವು ಕೇಳುವವರಿಲ್ಲದಂತಾಗಿದೆ.

    ಸಿಂಡಿಕೇಟ್ ಬ್ಯಾಂಕ್ ಹರಾಜು ನಡೆಸುತ್ತಿದೆ

    ಸಿಂಡಿಕೇಟ್ ಬ್ಯಾಂಕ್ ಹರಾಜು ನಡೆಸುತ್ತಿದೆ

    ಗಾಂಧಿನಗರದ ಸುಭೇದಾರ್ ಛತ್ರ ರಸ್ತೆಯಲ್ಲಿರೋ ಕಪಾಲಿ ಚಿತ್ರಮಂದಿರ ಮಾಲೀಕರು ದಾಸಪ್ಪ ಅಂಡ್ ಸನ್ಸ್ ಮತ್ತು ಗೋಪಾಲ್ ಫಿಲಂಸ್. ಇವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಶೇ.16.5ರ ಬಡ್ಡಿಯಲ್ಲಿ 96.5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಲ ಭರಿಸಿಕೊಳ್ಳಲು ಜನವರಿ 8 ರಂದು ಸಿಂಡಿಕೇಟ್ ಬ್ಯಾಂಕ್ ಇ ಹರಾಜು ನಡೆಸುತ್ತಿದೆ. ಕಪಾಲಿ ಚಿತ್ರಮಂದಿರಕ್ಕೆ 120 ಕೋಟಿ ರೂಪಾಯಿ ಮತ್ತು ಕಪಾಲಿ ಕಮರ್ಷಿಯಲ್ ಕಾಂಪ್ಲೆಕ್ಸ್‌ಗೆ 30 ಕೋಟಿ ರೂಪಾಯಿ ದರವನ್ನು ಕಾಯ್ದಿರಿಸಿ ಸಿಂಡಿಕೇಟ್ ಬ್ಯಾಂಕ್ ಹರಾಜು ನಡೆಸುತ್ತಿದೆ.

    ಚಿತ್ರಮಂದಿರದ ಒಟ್ಟು ವಿಸ್ತೀರ್ಣ 44,184 ಚದುರ ಅಡಿ

    ಚಿತ್ರಮಂದಿರದ ಒಟ್ಟು ವಿಸ್ತೀರ್ಣ 44,184 ಚದುರ ಅಡಿ

    ಕಪಾಲಿ ಚಿತ್ರಮಂದಿರದ ಒಟ್ಟು ವಿಸ್ತೀರ್ಣ 44,184 ಚದುರ ಅಡಿ. ಅಂದರೆ ಒಂದು ಎಕರೆ. ಕಪಾಲಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ವಿಸ್ತೀರ್ಣ 13, 508 ಚದರ ಅಡಿ. 1465 ವೀಕ್ಷಕರು ಕುಳಿತು ಏಕಕಾಲಕ್ಕೆ ಸಿನಿಮಾ ನೋಡುವ ಅವಕಾಶ ಕಪಾಲಿ ಚಿತ್ರಮಂದಿರದಲ್ಲಿತ್ತು. ಹೌಸ್‌ಫುಲ್ ಆಗಲ್ಲ ಅಂತ ಹೆದರಿ ಇಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಕೆಲವರು ಹೆದರುತ್ತಿದ್ದರು. ಹೀಗಾಗಿ ಸೀಟುಗಳ ಸಾಮರ್ಥ್ಯವನ್ನು 1465 ಸೀಟುಗಳಿಂದ 1112 ಸೀಟುಗಳಿಗೆ ಇಳಿಸಲಾಗಿತ್ತು.

    ಇತಿಹಾಸದ ಪುಟಗಳಿಗೆ ಕಪಾಲಿ

    ಇತಿಹಾಸದ ಪುಟಗಳಿಗೆ ಕಪಾಲಿ

    ಈಗಾಗ್ಲೆ ಇ ಹರಾಜಿನಲ್ಲಿ ಭಾಗವಹಿಸಲು ಮುಂಬೈನ ಎರಡು ಚಿತ್ರಮಂದಿರಗಳ ಮಾಲೀಕರು ಮುಂದಾಗಿದ್ದಾರೆ. ಕೊಂಡುಕೊಳ್ಳೋ ಮಂದಿ ಇದನ್ನು ಕೇವಲ ಚಿತ್ರಮಂದಿರವಾಗಿ ಇಟ್ಟುಕೊಳ್ಳದೆ, ಮಾಲ್ - ಮಲ್ಟಿಪ್ಲೆಕ್ಸ್ ಮಾಡಿಬಿಡ್ತಾರೆ. ಇತಿಹಾಸದ ಪುಟಗಳಿಗೆ ಕಪಾಲಿ ಸೇರಿಬಿಡ್ತಾನೆ ಅಂತಿದೆ ಗಾಂಧಿನಗರ.

    ಏಷ್ಯಾದ ಅತಿದೊಡ್ಡ ಚಿತ್ರಮಂದಿರ ಅನ್ನಿಸಿಕೊಂಡಿತ್ತು

    ಏಷ್ಯಾದ ಅತಿದೊಡ್ಡ ಚಿತ್ರಮಂದಿರ ಅನ್ನಿಸಿಕೊಂಡಿತ್ತು

    ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಹೌಸ್‌ಫುಲ್ ಆಗಿ ಒಂದು ವಾರ ಪ್ರದರ್ಶನ ಕಂಡ್ರೆ ಆ ಸಿನಿಮಾ ಇಡೀ ರಾಜ್ಯದ ಗಲ್ಲಾಪೆಟ್ಟಿಗೆ ಬಾಚಿದಂತೆಯೇ ಅನ್ನೋ ನಂಬಿಕೆ ಗಾಂಧಿನಗರದಲ್ಲಿತ್ತು. ಏಷ್ಯಾದ ಅತಿ ದೊಡ್ಡ ಚಿತ್ರಮಂದಿರ ಅನ್ನೋ ಖ್ಯಾತಿಗೂ ಒಮ್ಮೆ ಪಾತ್ರವಾಗಿದ್ದ ಕಪಾಲಿ ಚಿತ್ರಮಂದಿರ ಈಗ ಹರಾಜಿಗಿದೆ.

    English summary
    Another Bangalore landmark is set to vanish. Bangalore biggest cinema hall (1500 seating capacity), located are situated on Subedar Chatram Road, Gandhinagar, Bangalore, will be brought down soon. Rs 150 crore each in the online public auction being conducted by Syndicate Bank and set to be finalized on January 8.
    Thursday, December 5, 2013, 18:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X