For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್, ಸುಂದರ್ ಗೌಡಗಾಗಿ ತೀವ್ರ ಹುಡುಕಾಟ

  By Pavithra
  |
  ಮಾಡಿದ್ದುಣ್ಣೋ ಮಹರಾಯ ಅನ್ನೋಹಾಗಾಗಿದೆ ದುನಿಯಾ ವಿಜಯ್ ಸ್ಥಿತಿ | Filmibeat Kannada

  ಸುಂದರ್ ಪಿ ಗೌಡ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದಡಿಯಲ್ಲಿ ನಟ ದುನಿಯಾ ವಿಜಯ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ದುನಿಯಾ ವಿಜಯ್ ಮೊಬೈಲ್ ಸ್ವೀಚ್ ಆಫ್ ಆಗಿರುವ ಕಾರಣ ಅವರ ಮೊಬೈಲ್ ನೆಟ್ವರ್ಕ್ ಆಧರಿಸಿ ದುನಿಯಾ ವಿಜಯ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  'ಮಾಸ್ತಿಗುಡಿ' ಪ್ರಕರಣದಲ್ಲಿ ಆರೋಪಿ ಆಗಿರುವ ಸುಂದರ್ ಪಿ ಗೌಡ ಅವರೊಂದಿಗೆ ದುನಿಯಾ ವಿಜಿ ಕೂಡ ಇದ್ದಾರೆ ಎನ್ನುವ ಮಾಹಿತಿ ಪಡೆದುಕೊಂಡಿರುವ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಇಬ್ಬರ ಬಂಧನಕ್ಕಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.

  ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮೇಲೆ ಎಫ್.ಐ.ಆರ್ ದಾಖಲು.! ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮೇಲೆ ಎಫ್.ಐ.ಆರ್ ದಾಖಲು.!

  ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆ ದುನಿಯಾ ವಿಜಯ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದ್ದು ನೆನ್ನೆಯಿಂದ ನಟ ದುನಿಯಾ ವಿಜಿ ಹುಡುಕಾಟ ಆರಂಭಿಸಿದ್ದಾರೆ. ವಿಜಯ್ ಅವರ ಕುಟುಂಬಸ್ಥರನ್ನು ವಿಚಾರಿಸಿದ್ರೆ, ಮನೆಯಲ್ಲಿ ಇಲ್ಲ ಹೊರಗಡೆ ಹೋಗಿದ್ದಾರೆ ಎಂದು ಪೊಲೀಸರಿಗೆ ಉಡಾಫೆ ಉತ್ತರ ನೀಡುತ್ತಿದ್ದಾರಂತೆ.

  ಮಾಸ್ತಿಗುಡಿ ಸಿನಿಮಾ ಸಾಹಸ ದೃಶ್ಯ ಚಿತ್ರೀಕರಣ ವೇಳೆ ಸಾವನ್ನಪ್ಪಿದ ಖಳನಟರಾದ ಅನಿಲ್ ಮತ್ತು ಉದಯ್ ಪ್ರಕರಣದ ಆರೋಪಿ ಸುಂದರ್ ಪಿ ಗೌಡ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆ ಆರೋಪಿ ಬಂಧಿಸಲು ತಾವರೆಕೆರೆ ಪೊಲೀಸರು ಬಂದಿದ್ದರು .ಈ ವೇಳೆ ಆರೋಪಿ ಎಸ್ಕೇಪ್ ಆಗಲು ದುನಿಯಾ ವಿಜಯ್ ಸಹಾಯ ಮಾಡಿದ್ದ ಆರೋಪ ಹಾಗೂ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಮಾಡಿದ್ದ ಆರೋಪವನ್ನು ದುನಿಯಾ ವಿಜಿ ಎದುರಿಸುತ್ತಿದ್ದಾರೆ.

  English summary
  Banglore Chennammanakere Acchkattu police searching for Kannada actor Duniya Vijay. FIR filed against Kannada Actor Duniya Vijay as per the complaint lodged by Tavarekere Head Constable Govinda Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X