twitter
    For Quick Alerts
    ALLOW NOTIFICATIONS  
    For Daily Alerts

    ಟಿಕ್‌ಟಾಕ್ ಬ್ಯಾನ್ ಮಾಡುವುದು ಬೇಡ ಎಂದ 'ಕಿರಿಕ್ ಹುಡುಗಿ'

    |

    ಮೊದಲಿನಿಂದಲೂ ಟಿಕ್‌ಟಾಕ್ ಬ್ಯಾನ್ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಸ್ವದೇಶಿ ಉತ್ಪನ್ನ ಬಳಸುವಂತೆ ಕರೆ ಕೊಟ್ಟ ಬಳಿಕ ಟಿಕ್‌ಟಾಕ್ ಬ್ಯಾನ್‌ ಬಗ್ಗೆ ಹೆಚ್ಚಿನ ಬೇಡಿಕೆ ಎದ್ದಿದೆ.

    Recommended Video

    ಮತ್ತೆ ಒಂದಾದ ಜೊತೆ ಜೊತೆಯಲಿ ತಂಡ ಶೂಟಿಂಗ್ ನಲ್ಲಿ ಭಾಗಿ | Anirudh | JotheJotheyali | Serial Shooting Resumed

    ಕನ್ನಡ ಚಿತ್ರರಂಗದ ಕೆಲವರು ಸಹ ಟಿಕ್‌ ಟಾಕ್ ಅನ್ನು ಬ್ಯಾನ್ ಮಾಡಬೇಕೆಂಬ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ನಿರ್ದೇಶಕ ಸುನಿ, ಪವನ್ ಒಡೆಯರ್, ಸಂತೋಶ್ ಆನಂದರಾಮ್ ಇನ್ನೂ ಕೆಲವರು ಟಿಕ್ ಟಾಪ್ ಆಪ್ ಅನ್ನು ಬ್ಯಾನ್ ಮಾಡಲು ಒತ್ತಾಯಿಸಿದ್ದಾರೆ.

    ಆದರೆ ಕನ್ನಡದ ನಟಿ ಒಬ್ಬರು ಮಾತ್ರ, ಟಿಕ್ ಟಾಕ್ ಅನ್ನು ಬ್ಯಾನ್ ಮಾಡುವುದು ಬೇಡ ಎಂದಿದ್ದಾರೆ. ಹಾಗೆಂದು ಟಿಕ್‌ ಟಾಕ್ ಪರವಾಗಿ ಅವರು ನಿಲವಿಲ್ಲ. ಆದರೆ ಬ್ಯಾನ್ ಮಾಡುವುದರಿಂದ ಹೆಚ್ಚೇನು ಬದಲಾವಣೆ ಆಗದು ಎಂದು ಅವರು ಹೇಳಿದ್ದಾರೆ.

    ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗಡೆ

    ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗಡೆ

    ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗಡೆ ಟ್ವೀಟ್ ಮಾಡಿ, ಟಿಕ್‌ ಟಾಕ್ ಬ್ಯಾನ್‌ ಮಾಡುವುದರಿಂದ ಪ್ರಯೋಜನವೇನೂ ಇಲ್ಲ. ಬ್ಯಾನ್ ಮಾಡಿದರೆ ಜನ ಅದರ ಬದಲು ಮತ್ತೊಂದು ಆಪ್ ಹುಡುಕಿಕೊಳ್ಳುತ್ತಾರೆ ಎಂದಿದ್ದಾರೆ.

    'ತಿಕ್ಕಲು ವಿಡಿಯೋಗಳನ್ನು ಇನ್ನೊಂದು ಕಡೆ ಹಾಕುತ್ತಾರೆ'

    'ತಿಕ್ಕಲು ವಿಡಿಯೋಗಳನ್ನು ಇನ್ನೊಂದು ಕಡೆ ಹಾಕುತ್ತಾರೆ'

    ಒಂದು ಆಪ್ ಅನ್ನು ಬ್ಯಾನ್ ಮಾಡಿದರೆ, ಜನ ತಮ್ಮ ತಿಕ್ಕಲು ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಮತ್ತೊಂದು ಆಪ್ ಅನ್ನು ಹುಡುಕಿಕೊಳ್ಳುತ್ತಾರೆ ಎಂದಿರುವ ಸಂಯುಕ್ತಾ, ಜನರ ಮನಸ್ಥಿತಿ ಬದಲಾಗಬೇಕು ಎಂದು ಹೇಳಿದ್ದಾರೆ.

    ಟಿಕ್‌ಟಾಕ್ ಪರ ಪೋಸ್ಟ್ ಇದಲ್ಲ

    ಟಿಕ್‌ಟಾಕ್ ಪರ ಪೋಸ್ಟ್ ಇದಲ್ಲ

    ಟಿಕ್‌ಟಾಕ್ ಪರವಾಗಿ ಪೋಸ್ಟ್ ಅನ್ನು ಹಾಕಿಲ್ಲವೆಂದು ಹೇಳಲು, 'ಟಿಕ್‌ ಟಾಕ್‌ ಗೆ ಏನಾಗುತ್ತೋ ಅದಕ್ಕೂ ನನಗೂ ಸಂಬಂಧವಿಲ್ಲ' ಎಂದು ಸಹ ಹೇಳಿದ್ದಾರೆ. 'ನಾವೇ ಬದಲಾಗಬೇಕು', ನಮ್ಮೊಳಗೆ ಬದಲಾವಣೆ ಆಗಬೇಕು ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಸಹ ಸಂಯುಕ್ತ ಹೆಗಡೆ ಹಾಕಿದ್ದಾರೆ.

    ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಪ್ರವೇಶ

    ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಪ್ರವೇಶ

    ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾರಂಗ ಪ್ರವೇಶಿಸಿದ ಸಂಯುಕ್ತಾ ಹೆಗಡೆ ನಂತರ ಕೆಲವು ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದರು. ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಚಿತ್ರಗಳಿಂದಲೂ ಅವರು ಖ್ಯಾತಿ ಗಳಿಸಿದ್ದಾರೆ. ಅವರ ಅಭಿನಯದ ಕನ್ನಡದ ತುರ್ತು ನಿರ್ಗಮನ, ತಮಿಳಿನ ತೀಲ್ ಸಿನಿಮಾ ಬಿಡುಗಡೆ ಆಗಬೇಕಿದೆ.

    English summary
    Actress Samyuktha Hegde said banning tik tok would not help. She said people need to change.
    Sunday, May 24, 2020, 20:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X