For Quick Alerts
  ALLOW NOTIFICATIONS  
  For Daily Alerts

  ಕಾರಿನ ಮೇಲೆ ಸೋನು ಸೂದ್ ಸೇವೆಯ ಮಾಹಿತಿ; ಬಂಟ್ವಾಳ ಅಭಿಮಾನಿ ಪ್ರೀತಿಗೆ 'ರಿಯಲ್ ಹೀರೋ' ಮೆಚ್ಚುಗೆ

  By ಫಿಲ್ಮಿಬೀಟ್ ಡೆಸ್ಕ್
  |

  ರಿಯಲ್ ಹೀರೋ ಸೋನು ಸೂದ್ ಮಾನವೀಯ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ. ಕೊರೊನಾ ಭೀಕರತೆಯ ಸಮಯದಲ್ಲಿ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತು ಸಾಕಷ್ಟು ಜನರ ಪ್ರಾಣ ಉಳಿಸಿದ್ದಾರೆ. ಸೋನು ಸೂದ್ ಸಹಾಯ ಆಸ್ಪತ್ರೆ, ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಬದುಕು ಸಾಗಿಸಲು ಕಷ್ಟಪಡುತ್ತಿರುವ, ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ.

  ಸೋನು ಸೂದ್‌ಗೆ ಸಹಾಯ ಕೋರಿ ಸಾವಿರಾರು ಮೆಸೇಜ್‌ಗಳು ಬರುತ್ತವೆ. ಪ್ರತ್ಯೇಕ ಸಹಾಯವಾಣಿ ತೆರೆದರೂ, ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಾವಿರಾರು ಮಂದಿ ಸಹಾಯ ಕೋರಿ ಸಂದೇಶ ಕಳುಹಿಸುತ್ತಿರುತ್ತಾರೆ. ಇದಲ್ಲದೆ ಸೋನು ಸೂದ್ ಮನೆಯ ಮುಂದೆಯೂ ಸಾಕಷ್ಟು ಮಂದಿ ಕ್ಯೂ ನಿಂತಿರುತ್ತಾರೆ. ಸಾಧ್ಯವಾದಷ್ಟು ಮಂದಿಗೆ ಸೋನು ಸೂದ್ ತನ್ನ ಸಹಾಯ ಹಸ್ತ ಚಾಚುತ್ತಿದ್ದಾರೆ.

  ಸೋನು ಸೂದ್ ಸೂಪರ್ ಮಾರ್ಕೆಟ್: ಸೈಕಲ್ ಏರಿ ಬ್ರೆಡ್, ಮೊಟ್ಟೆ ಮಾರಾಟಕ್ಕೆ ಹೊರಟ ನಟ ಸೋನು ಸೂದ್ ಸೂಪರ್ ಮಾರ್ಕೆಟ್: ಸೈಕಲ್ ಏರಿ ಬ್ರೆಡ್, ಮೊಟ್ಟೆ ಮಾರಾಟಕ್ಕೆ ಹೊರಟ ನಟ

  ರಿಯಲ್ ಹೀರೋ ಮಾನವೀಯ ಕೆಲಸಕ್ಕೆ ಮನಸೋಲದವರಿಲ್ಲ. ಸೋನು ಸೂದ್ ಅವರನ್ನು ಅನೇಕರು ದೇವರಂತೆ ಪೂಜಿಸುತ್ತಾರೆ, ವಿಶೇಷ ರೀತಿಯಲ್ಲಿ ಅಭಿಮಾನ ತೋರಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಭಿಮಾನಿ ತೋರಿಸಿದ ವಿಶೇಷ ಪ್ರೀತಿಗೆ ಸ್ವತಃ ಸೋನು ಸೂದ್ ಸಂತಸಗೊಂಡಿದ್ದಾರೆ. ಮುಂದೆ ಓದಿ...

  ಬಂಡ್ವಾಳ ಅಭಿಮಾನಿಯ ವಿಶೇಷ ಅಭಿಮಾನ

  ಬಂಡ್ವಾಳ ಅಭಿಮಾನಿಯ ವಿಶೇಷ ಅಭಿಮಾನ

  ಬಂಟ್ವಾಳದ ಛಾಯಾಗ್ರಾಹಕ ಶ್ರೀಪ್ರಸಾದ್ ಆಚಾರ್ಯ ತನ್ನ ಕಾರಿನ ತುಂಬಾ ಫೋಟೋ, ಕೊರೊನಾ ಸಂದರ್ಭದ ನೆರವಿನ ಚಿತ್ರಗಳು, ಲೇಖನಗಳನ್ನು ಸ್ಟಿಕರಿಂಗ್ ಮಾಡುವ ಮೂಲಕ ಸೋನು ಸೋದ್ ಮೇಲಿನ ಅಭಿಮಾನವನ್ನು ತೋರಿಸಿದ್ದಾರೆ.

  ಕಾರಿನ ಮೇಲೆ ಸೋನು ಸೂದ್ ಸೇವೆಯ ವಿವರ

  ಕಾರಿನ ಮೇಲೆ ಸೋನು ಸೂದ್ ಸೇವೆಯ ವಿವರ

  ಶ್ರೀ ಪ್ರಸಾದ್ ಆಚಾರ್ಯ ಇಯಾನ್ ಕಾರಿನ ಮೇಲೆಲ್ಲಾ ಸೋನು ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಕಾರಿನ ಒಂದು ಭಾಗದಲ್ಲಿ ಸೂದ್ ಚಿತ್ರವನ್ನು ಹಾಕಿಸಿಕೊಂಡರೆ ಉಳಿದ ಭಾಗದಲ್ಲಿ ಸೋನು ಸೂದ್ ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯ ವಿವರವಿದೆ.

  ನನ್ನ ಗರ್ಲ್ ಫ್ರೆಂಡ್‌ಗೆ ಐ ಫೋನ್ ಕೊಡಿಸಿ; ನೆಟ್ಟಿಗನ ಮನವಿಗೆ ಸೋನು ಸೂದ್ ಪ್ರತಿಕ್ರಿಯೆ ಹೀಗಿದೆನನ್ನ ಗರ್ಲ್ ಫ್ರೆಂಡ್‌ಗೆ ಐ ಫೋನ್ ಕೊಡಿಸಿ; ನೆಟ್ಟಿಗನ ಮನವಿಗೆ ಸೋನು ಸೂದ್ ಪ್ರತಿಕ್ರಿಯೆ ಹೀಗಿದೆ

  ತಂಗಿ ನೀಡಿದ ಸಲಹೆ

  ತಂಗಿ ನೀಡಿದ ಸಲಹೆ

  ಶ್ರೀಪ್ರಸಾದ್ ಮತ್ತು ಅವರ ತಂಗಿ ಉಷಾ ಜಗದೀಶ್ ಆಚಾರ್ಯ ಸೋನು ಸೋದ್ ಅವರ ಅಪ್ಪಟ ಅಭಿಮಾನಿಗಳು. ಅಂದಹಾಗೆ ಕಾರ್‌ ಮರುವಿನ್ಯಾಸಗೊಳಿಸಲು ತಂಗಿ ಉಷಾ ಸಲಹೆ ನೀಡಿದ್ದರಂತೆ. ಅದರಂತೆ ಶ್ರೀಪಾದ್ ತನ್ನ ಕಾರಿನ ಮೇಲೆ ಸೋನು ಬಗ್ಗೆ ವಿವರದ ಸ್ಟಿಕರಿಂಗ್ ಮಾಡಿಸಿದ್ದಾರೆ.

  ಶಿವರಾಜ್ ಕುಮಾರ್ ಹುಟ್ಟಿದ ದಿನ ಅಣ್ಣಾವ್ರು ಏನ್ ಮಾಡಿದ್ರು ಗೊತ್ತಾ? | Filmibeat Kannada
  ಶ್ರೀಪಾದ್ ಪ್ರತಿಕ್ರಿಯೆ

  ಶ್ರೀಪಾದ್ ಪ್ರತಿಕ್ರಿಯೆ

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀ ಪ್ರಸಾದ್ ಆಚಾರ್ಯ, "ಕೋವಿಡ್ ಸಂದರ್ಭದಲ್ಲಿ ಸೋನು ಸೂದ್ ನೀಡಿದ ಸೇವೆ ಎಂದಿಗೂ ಅಮರವಾಗಿರುತ್ತದೆ. ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೆಂದು ತಿಳಿಯದೇ ಈ ಮೂಲಕ ಗೌರವ ತೋರಿಸಿದ್ದೇವೆ" ಎಂದಿದ್ದಾರೆ.

  English summary
  Bantwal fan Shripad Acharya designed his car with Sonu Sood photo and his helps.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X