twitter
    For Quick Alerts
    ALLOW NOTIFICATIONS  
    For Daily Alerts

    ಜನರಿಂದ ಮನ್ನಣೆ ಪಡೆದ ಡಾ.ರಾಜ್ ಜನರಿಗೆ ಕೊಟ್ಟಿದ್ದೇನು?

    |

    ವರನಟ ಡಾ. ರಾಜಕುಮಾರ್ ನಮ್ಮನ್ನು ಅಗಲಿ ಏಳು ವರ್ಷದ ಮೇಲಾಯಿತು. ಇಂದಿಗೂ ರಾಜಕುಮಾರ್ ವಿಚಾರ, ಅವರ ಚಿತ್ರಗಳು, ಅವರು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಸೋಮವಾರ (ಆ 5) ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿಗಳಾದ ರಾಮಮೋಹನ ರೆಡ್ಡಿಯವರು ರಾಜಕುಮಾರ್ ಅವರ ಲಗ್ನ ಪತ್ರಿಕೆ ಚಿತ್ರದ ಬಗ್ಗೆ ಕೂಡಾ ಉಲ್ಲೇಖಿಸಿದ್ದರು.

    ಇಂದು ಭೀಮನ ಅಮವಾಸ್ಯೆ (ಆ 6), ಈ ದಿನವನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ. ಹದಿಮೂರು ವರ್ಷಗಳ ಕೆಳಗೆ ಅಂದರೆ ಜುಲೈ 30, 2000ರಂದು ನರಹಂತಕ ವೀರಪ್ಪನ್ ಅಣ್ಣಾವ್ರನ್ನು ಅಪಹರಣ ಮಾಡಿದ್ದ.

    ಇನ್ನು, ವಿಷಯಕ್ಕೆ ಬರುವುದಾದರೆ, ಖ್ಯಾತ ವಿಚಾರವಾದಿ ಮತ್ತು ಲೇಖಕ ಬರಗೂರು ರಾಮಚಂದ್ರಪ್ಪ 'ಜನಪದ ನಾಯಕ ಡಾ.ರಾಜಕುಮಾರ್ ಜನರಿಗೆ ಕೊಟ್ಟಿದ್ದೇನು" ಎನ್ನುವ ಪುಸ್ತಕವನ್ನು ಬರೆದಿದ್ದಾರೆ.

    ಕನ್ನಡ ಜನಶಕ್ತಿ ಕೇಂದ್ರ ಪ್ರಕಾಶನದಿಂದ ಹೊರಬಂದ ಈ ಪುಸ್ತಕ 33 ಪುಟಗಳನ್ನು ಹೊಂದಿದ್ದು ಇದರ ಬೆಲೆ ಹದಿನೈದು ರೂಪಾಯಿ ಮಾತ್ರ. ಈ ಪುಸ್ತಕದ ಲೇಖಕರ ಮಾತು ಅಂಕಣದಲ್ಲಿ ಬರಗೂರು ಅವರು ರಾಜ್ ಬಗ್ಗೆ ಬರೆಯುವುದು, ಮಾತನಾಡುವುದು ನನ್ನ ಸಾಮಾಜಿಕ ಜವಾಬ್ದಾರಿ. ಸಿನಿಮಾದೊಳಗಿದ್ದು ಸಿನಿಮಾವನ್ನು ಮೀರಿದ ಸಾಂಸ್ಕೃತಿಕ ವ್ಯಕ್ತಿತ್ವ ರಾಜ್ ಅವರದ್ದು ಎಂದಿದ್ದಾರೆ.

    ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಮೇಗೌಡರು ಪ್ರಕಾಶಕರ ಮಾತು ಅಂಕಣದಲ್ಲಿ, ರಾಜಕುಮಾರ್ ಅವರ ವೈವಿಧ್ಯಮಯ ಪಾತ್ರಗಳು ನಮ್ಮೆಲ್ಲರ ಸ್ವಭಾವದ ಮೇಲೆ ಹೆಚ್ಚು ಪ್ರಭಾವ ಬೀರಿದವು. ರಾಜ್ ಅವರ ಚಿತ್ರ ನೋಡಿ ನಾನು ಅವರ ಕಟ್ಟಾ ಅಭಿಮಾನಿಯಾಗಿ ಬಿಟ್ಟೆ ಎಂದು ಬರೆದಿದ್ದಾರೆ.

    ರಾಜ್ ಅವರ ಕೊಡುಗೆಯ ಬಗ್ಗೆ ಅನಗತ್ಯ ಅನುಮಾನಗಳಿವೆ. ಸಮಾಜಕ್ಕೆ, ಜನರಿಗೆ ಅವರ ಕೊಡುಗೆ ಏನು? ಮುಂತಾದ ವಿಷಯಗಳ ಬಗ್ಗೆ ಬರಗೂರು ರಾಮಚಂದ್ರಪ್ಪ ಅವರು ಕೆಲವೊಂದು ಕುತೂಹಲಕಾರಿ ವಿಷಯಗಳನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಅವರು ಬರೆದ ಕೆಲವೊಂದು ಸ್ಯಾಂಪಲ್ ಗಳು ಸ್ಲೈಡಿನಲ್ಲಿ..

    ರಾಜ್ ಕೊಡುಗೆ ಬಗ್ಗೆ ಅನುಮಾನ ಅನಗತ್ಯ

    ರಾಜ್ ಕೊಡುಗೆ ಬಗ್ಗೆ ಅನುಮಾನ ಅನಗತ್ಯ

    ರಾಜಕುಮಾರ್ ಅವರು ಲೌಕಿಕ ಜಗತ್ತಿಗೆ ನೀಡಿದ ಕೊಡುಗೆ ಅಪಾರ. ಇದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೇ ಇರುವುದು ಕೆಲವು ತಪ್ಪು ತಿಳುವಳಿಕೆಗಳಿಗೆ ಕಾರಣವಾಗಿರ ಬಹುದು. ರಾಜ್ ಚಿತ್ರರಂಗದಲ್ಲಿ ಆಧಿಪತ್ಯ ಸ್ಥಾಪಿಸಿದ ನಂತರವೂ ಎಂದಿಗೂ ರಂಗಭೂಮಿಯನ್ನು ಮರೆಯಲಿಲ್ಲ. ರಂಗಭೂಮಿ ಕಲಾವಿದರ ಮಕ್ಕಳ ಮದುವೆಗಳಿಗೂ ಸಹಾಯಾರ್ಥ ಪ್ರದರ್ಶನ ಕೊಟ್ಟ ಉದಾಹರಣೆಗಳಿವೆ.

    ಸಂತ್ರಸ್ತರ ಜನರಿಗಾಗಿ ನಿಧಿ ಸಂಗ್ರಹ

    ಸಂತ್ರಸ್ತರ ಜನರಿಗಾಗಿ ನಿಧಿ ಸಂಗ್ರಹ

    ರಾಜಕುಮಾರ್ ಅವರು ಚಲನಚಿತ್ರ ಕಲಾವಿದರ ನೇತೃತ್ವ ವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹ ಮಾಡಿದ್ದರು. ಇದೊಂದು ಅಪರೂಪದ ಸಾಮಾಜಿಕ ಕಾರ್ಯ. ಚಿತ್ರರಂಗದ ಯಾವುದೇ ಕಲಾವಿದರು ಹಾಸಿಗೆ ಹಿಡಿದಾಗ ತಾವು ಇಲ್ಲವೇ ಪಾರ್ವತಮ್ಮನವರನ್ನು ಕಳುಹಿಸಿ ಧನ ಸಹಾಯ ಮಾಡುತ್ತಿದ್ದರು.

    ಡಬ್ಬಿಂಗ್ ವಿರೋಧಿ

    ಡಬ್ಬಿಂಗ್ ವಿರೋಧಿ

    ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನದ ಚಿತ್ರರಂಗಕ್ಕೆ ಧಕ್ಕೆಯಾದಾಗ ಡಬ್ಬಿಂಗ್ ವಿರೋಧಿ ಚಳುವಳಿಗೆ ಬೆಂಬಲವಾಗಿ ನಿಂತರು. ಕಡೇ ಉಸಿರು ಇರುವವರೆಗೆ ಕನ್ನಡ ಚಿತ್ರಗಳ ಉಳಿವಿಗಾಗಿ ಚಿತ್ರೋದ್ಯಮದ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

    ನಿರ್ಮಾಪಕರಿಗೆ ರಾಜ್ ನೆರವು

    ನಿರ್ಮಾಪಕರಿಗೆ ರಾಜ್ ನೆರವು

    ತಾನು ನಾಯಕನಾಗಿ ನಟಿಸಿದ ಕೆಲವೊಂದು ಚಿತ್ರಗಳು ಸೋತಾಗ ನಿರ್ಮಾಪಕರಿಗೆ ಯಾವುದೆ ಪೂರ್ವ ಷರತ್ತು ಇಲ್ಲದೇ ಡೇಟ್ಸ್ ನೀಡಿದರು. ನಿರ್ಮಾಪಕರನ್ನು ಅನ್ನದಾತರೆನ್ನುತ್ತಿದ್ದ ರಾಜಕುಮಾರ್ ತನ್ನ ಚಿತ್ರಗಳಿಂದ ಬೇರೆಯವರ ಚಿತ್ರಗಳಿಗೆ ನಷ್ಟವಾಗ ಬಾರದೆಂದು ವಜ್ರೇಶ್ವರಿ ಕಂಬೈನ್ಸ್ ಹುಟ್ಟು ಹಾಕಿದರು.

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮೊತ್ತದ ಹಣವನ್ನು ರಾಜಕುಮಾರ್ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದರು. ರಸಮಂಜರಿ ಕಾರ್ಯಕ್ರಮಗಳಿಂದ ಬಂದ ಸಹಾಯ ಧನವನ್ನು ಮೈಸೂರಿನ ಶಕ್ತಿಧಾಮ ಎನ್ನುವ ಹೆಣ್ಣು ಮಕ್ಕಳ ಪುನರ್ವಸತಿ ಕಲ್ಪಿಸುವ ಸಂಸ್ಥೆಗೆ ನೀಡುತ್ತಾ ಬಂದರು. ಪುಸ್ತಕದಲ್ಲಿ ಇನ್ನೂ ಕುತೂಹಲಕಾರಿ ವಿಷಯಗಳಿವೆ, ಅದನ್ನು ಖರೀದಿಸಿ ಓದಿದರೆನೇ ಚೆಂದ.

    English summary
    Baraguru Ramachandrappa's a new book on Kannada film icon Dr. Rajkumar. "Janapada Nayaka Dr. Rajukumar Janarige Kottiddenu" a new book written by Baraguru and Kannada Janashakti Kendra has released this book.
    Tuesday, August 6, 2013, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X