ಬರ್ಫಿ ಬಾಯ್ ದಿಗಂತ್ ಮದುವೆಗೆ ಮುಹೂರ್ತ ಫಿಕ್ಸ್

By ಉದಯರವಿ

ಇದೇನಪ್ಪಾ ಇದು ನಟ ದಿಗಂತ್ 'ಬರ್ಫಿ' ಜೊತೆ ಅಭಿಮಾನಿಗಳಿಗೆ ಮದುವೆ ತಾಂಬೂಲ ಕೊಡುತ್ತಿದ್ದಾರೆಯೇ? ಅವರಿಗೆ ಕಂಗಣಬಲ ಕೂಡಿಬಂತೇ? ದಿಗಂತ್ ಪ್ರಕಾರ ಹೌದು. ಆದರೆ ಅವರಿಗೆ ಲವ್ ಮ್ಯಾರೇಜ್ ಆಗೂವುದೋ ಅಥವಾ ಅರೇಂಜ್ ಮ್ಯಾರೇಜ್ ಆಗುವುದೋ ಎಂಬ ಅನುಮಾನ.

ಬಹಳ ದಿನಗಳಿಂದ ಅವರು ಹುಡುಗಿಯೊಬ್ಬಳನ್ನು ಮನಸಾರೆ ಪ್ರೀತಿಸುತ್ತಿದ್ದಾರೆ. ಕನ್ನಡದ ಹುಡುಗಿಯಾಗಿದ್ದರೆ ಇಷ್ಟೊತ್ತಿಗೆ ವಾಲಗ ಊದಿಸಿಬಿಡುತ್ತಿದ್ದರು. ಆದರೆ ದಿಗಂತ್ ಮದುವೆಯಾಗಲಿರುವ ಹುಡುಗಿ ಪಂಜಾಬ್ ನವರು. ಅಷ್ಟು ದೂರದ ಹುಡುಗಿಯನ್ನು ಕೈಹಿಡಿಯುವುದೆಂದರೆ ಸುಮ್ಮನೆ ಮಾತಾ? ಆಕ್ಷನ್, ಸಸ್ಪೆನ್ಸ್ ಇರಲೇಬೇಕಲ್ಲವೇ?

ಇಷ್ಟಕ್ಕೂ ಇವರದು ಲವ್ ಮ್ಯಾರೇಜಾ ಅಥವಾ ಅರೇಂಜ್ಡ್ ಮದುವೆನಾ? ಎಂಬುದು ಗೊತ್ತಾಗಬೇಕಾದರೆ ತೆರೆಯ ಮೇಲೆ ನೋಡಿ ಎನ್ನುತ್ತಿದ್ದಾರೆ. ಹೌದು ಇದು 'ಬರ್ಫಿ' ಚಿತ್ರದ ಕಥೆ. ಈ ಶುಕ್ರವಾರ (ಆ.30) ಬರ್ಫಿ ಚಿತ್ರ ಸುಮಾರು 100 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಪಂಜಾಬಿ ಹುಡುಗಿ ಕನ್ನಡದ ಹುಡುಗನ ಸುಂದರ ಪ್ರೇಮ ಕಥೆಯುಳ್ಳ ಚಿತ್ರವನ್ನು ಶೇಖರ್ ನಿರ್ದೇಶನ ಮಾಡಿದ್ದಾರೆ. ಮುಖ್ಯವಾಗಿ ಕಾಲೇಜ್ ಹುಡುಗರಿಗೆ ಇಷ್ಟವಾಗಬಹುದಾದ ಕಥೆ ಇದಾಗಿದ್ದರೂ ಎಲ್ಲಾ ವರ್ಗದವರೂ ನೋಡಿ ಖುಷಿಪಡಬಹುದಾದ ಚಿತ್ರವಾಗಿ ಎನ್ನುತ್ತಾರೆ ನಿರ್ದೇಶಕರು.

ಶೀರ್ಷಿಕೆಗೆ ತಕ್ಕಂತೆ ಚಿತ್ರವೂ ಸ್ವೀಟ್ ಆಗಿರುತ್ತದೆ. ಇದು ರೊಮ್ಯಾಂಟಿಕ್ ಚಿತ್ರವಾದರೂ ಎಲ್ಲ ವರ್ಗಕ್ಕೂ ಇಷ್ಟವಾಗುವ ಎಲಿಮೆಂಟ್ಸ್ ಚಿತ್ರದಲ್ಲಿವೆ. ಪ್ರೇಕ್ಷಕರಿಗೆ ಖಂಡಿತ ನಿರಾಸೆ ಮಾಡಲ್ಲ ಎನ್ನುತ್ತಾರೆ ನಟ ದಿಗಂತ್. ಈ ಬಾರಿ ದಿಗಂತ್ ಗೆ ಮಲ್ಲು ಬೆಡಗಿ ಭಾಮಾ ಜೋಡಿ.

ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಗ್ರಹಣ, ಅರ್ಜುನ್ ಜನ್ಯ ಸಂಗೀತ, ಬಿ.ಎ.ಮಧು ಸಂಭಾಷಣೆ, ಜಯಂತ್ ಕಾಯ್ಕಿಣಿ, ಕವಿರಾಜ್, ಬಾಹುಬಲಿ, ಹೃದಯಶಿವ ಸಾಹಿತ್ಯವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ಎಸ್. ಬಾಹುಬಲಿ ಸಹಕಾರ ನಿರ್ದೇಶನ, ಹರ್ಷ ಕಂಬಿರಾಜ್ ನೃತ್ಯ ನಿರ್ದೇಶನವಿದೆ.

ಪಾತ್ರವರ್ಗದಲ್ಲಿ ದಿಗಂತ್, ಭಾಮಾ, ಸುಧಾ ಬೆಳವಾಡಿ, ಜೈಜಗದೀಶ್, ಹರೀಶ್ ರಾಜ್, ದಿಲೀಪ್ ರಾಜ್, ಸುಚೇಂದ್ರಪ್ರಸಾದ್, ಪವಿತ್ರಾ ಲೋಕೇಶ್, ಸಂಯುಕ್ತ ಬೆಳವಾಡಿ, ಶಂಕರ್ ಭಟ್ಟ, ಇಂದ್ರಜಿತ್ ಲಂಕೇಶ್ ಅಭಿನಯಿಸಿದ್ದಾರೆ.

More from Filmibeat

English summary
Actor Diganth is seriously thinking about his marriage. But he is confused of which type of marriage is better, whether its love or arrange. The actor revealing his marriage secreat in his latest romantic comedy film 'Burfi' all set to release on 30th August.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X