ದಾವಣಗೆರೆ ಹೋಳಿ ಸಂಭ್ರಮದಲ್ಲಿ 'ಬಸಣ್ಣಿ ಬಾ....' ಹಾಡಿಗೆ ಭರ್ಜರಿ ಸ್ಟೆಪ್ಸ್
ಹೋಳಿ ಹಬ್ಬವನ್ನ ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗಿದೆ. ಅದರಲ್ಲೂ ಯುವಕ, ಯುವತಿಯರಂತೂ ಬಣ್ಣದ ಓಕುಳಿಯಲ್ಲಿ ಮಿಂದೆದ್ದಿದ್ದಾರೆ. ದಾವಣಗೆರೆ ಜನರಂತೂ ಹೋಳಿ ಹಬ್ಬವನ್ನ ವಿಶೇಷವಾಗಿ ಸೆಲೆಬ್ರೆಟ್ ಮಾಡಿದ್ದಾರೆ.
ಹೌದು, ದಾವಣಗೆರೆ ಕ್ರೀಡಾಂಗಣ ಒಂದರಲ್ಲಿ ಸಾವಿರಾರು ಜನರು ಸೇರಿ ಹೋಳಿ ಹಬ್ಬವನ್ನ ಆಚರಿಸಿದ್ದು, ಕನ್ನಡ ಚಿತ್ರಗೀತೆಗಳಿಗೆ ಭರ್ಜರಿ ಆಗಿ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ.

ಅದರಲ್ಲೂ ಯಜಮಾನ ಚಿತ್ರದ ಬಸಣ್ಣಿ ಬಾ....ಹಾಡಿಗೆ ದಾವಣಗೆರೆ ಜನರು ಹೆಜ್ಜೆ ಹಾಕಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ದರ್ಶನ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಕೇವಲ ದಾವಣೆಗೆರೆ ಮಾತ್ರವಲ್ಲ, ಬೆಂಗಳೂರು, ಹಾಸನ ಸೇರಿದಂತೆ ಅನೇಕ ಕಡೆ ಬಸಣ್ಣಿ ಹಾಡು ಸದ್ದು ಮಾಡಿದೆ.
ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಯೋಗರಾಜ್ ಭಟ್ ಅವರು ಸಾಹಿತ್ಯ ರಚಿಸಿದ್ದ ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಪಡ್ಡೆ ಹೈಕ್ಳಿಗೆ ನಿಂತಲ್ಲೇ ಕುಣಿಯುವಂತೆ ಮಾಡುವ ಈ ಹಾಡು ವರ್ಷದ ಹಿಟ್ ಸಾಂಗ್ ಆಗೋದ್ರಲ್ಲಿ ಅನುಮಾನವಿಲ್ಲ.
ಕಳೆದ ವರ್ಷ ಹೋಳಿ ಹಬ್ಬದಲ್ಲಿ ಶಿವರಾಜ್ ಕುಮಾರ್ ಟಗರು ಹಾಡು ಹೆಚ್ಚು ವೈರಲ್ ಆಗಿತ್ತು. ಇದೇ ದಾವಣಗೆರೆ ಜನರ ಸೇರಿದಂತೆ ಹಲವರು 'ಟಗರು ಬಂತು ಟಗರು' ಎಂದು ಕುಣಿದಾಡಿದ್ದರು.


Click it and Unblock the Notifications











