Don't Miss!
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಾವಣಗೆರೆ ಹೋಳಿ ಸಂಭ್ರಮದಲ್ಲಿ 'ಬಸಣ್ಣಿ ಬಾ....' ಹಾಡಿಗೆ ಭರ್ಜರಿ ಸ್ಟೆಪ್ಸ್
ಹೋಳಿ ಹಬ್ಬವನ್ನ ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗಿದೆ. ಅದರಲ್ಲೂ ಯುವಕ, ಯುವತಿಯರಂತೂ ಬಣ್ಣದ ಓಕುಳಿಯಲ್ಲಿ ಮಿಂದೆದ್ದಿದ್ದಾರೆ. ದಾವಣಗೆರೆ ಜನರಂತೂ ಹೋಳಿ ಹಬ್ಬವನ್ನ ವಿಶೇಷವಾಗಿ ಸೆಲೆಬ್ರೆಟ್ ಮಾಡಿದ್ದಾರೆ.
ಹೌದು, ದಾವಣಗೆರೆ ಕ್ರೀಡಾಂಗಣ ಒಂದರಲ್ಲಿ ಸಾವಿರಾರು ಜನರು ಸೇರಿ ಹೋಳಿ ಹಬ್ಬವನ್ನ ಆಚರಿಸಿದ್ದು, ಕನ್ನಡ ಚಿತ್ರಗೀತೆಗಳಿಗೆ ಭರ್ಜರಿ ಆಗಿ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ.
ವೈರಲ್ ವಿಡಿಯೋ: ಮಗನ ಅಭಿನಯ ಕಂಡು ದರ್ಶನ್ ದಂಪತಿ ಸಂತಸ
ಅದರಲ್ಲೂ ಯಜಮಾನ ಚಿತ್ರದ ಬಸಣ್ಣಿ ಬಾ....ಹಾಡಿಗೆ ದಾವಣಗೆರೆ ಜನರು ಹೆಜ್ಜೆ ಹಾಕಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ದರ್ಶನ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಕೇವಲ ದಾವಣೆಗೆರೆ ಮಾತ್ರವಲ್ಲ, ಬೆಂಗಳೂರು, ಹಾಸನ ಸೇರಿದಂತೆ ಅನೇಕ ಕಡೆ ಬಸಣ್ಣಿ ಹಾಡು ಸದ್ದು ಮಾಡಿದೆ.
ದಾವಣಗೆರೆಯಲ್ಲಿ ಇಂದು ನಡೆದ ಹೋಳಿ ಆಚರಣೆಯ ಸಂಭ್ರಮದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬ್ಲಾಕ್ಬಸ್ಟರ್ ಯಜಮಾನ ಚಿತ್ರದ ಬಸಣ್ಣಿ ಹಾಡಿಗೆ ಕುಣಿದು ಕುಪ್ಪಳಿಸಿದ ದಾವಣಗೆರೆ ಜನತೆ 😍@dasadarshan @harimonium @Dbeatsmusik @shylajanag @dinakar219 pic.twitter.com/6a3IxF12jJ
— D Company(R)Official (@Dcompany171) March 21, 2019
ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಯೋಗರಾಜ್ ಭಟ್ ಅವರು ಸಾಹಿತ್ಯ ರಚಿಸಿದ್ದ ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಪಡ್ಡೆ ಹೈಕ್ಳಿಗೆ ನಿಂತಲ್ಲೇ ಕುಣಿಯುವಂತೆ ಮಾಡುವ ಈ ಹಾಡು ವರ್ಷದ ಹಿಟ್ ಸಾಂಗ್ ಆಗೋದ್ರಲ್ಲಿ ಅನುಮಾನವಿಲ್ಲ.
ಕೆಜಿಎಫ್ ಕೋಟೆ ಅಲುಗಾಡಿಸಿ 'ಬಾಸ್' ಆದ ಯಜಮಾನ
ಕಳೆದ ವರ್ಷ ಹೋಳಿ ಹಬ್ಬದಲ್ಲಿ ಶಿವರಾಜ್ ಕುಮಾರ್ ಟಗರು ಹಾಡು ಹೆಚ್ಚು ವೈರಲ್ ಆಗಿತ್ತು. ಇದೇ ದಾವಣಗೆರೆ ಜನರ ಸೇರಿದಂತೆ ಹಲವರು 'ಟಗರು ಬಂತು ಟಗರು' ಎಂದು ಕುಣಿದಾಡಿದ್ದರು.