For Quick Alerts
  ALLOW NOTIFICATIONS  
  For Daily Alerts

  ರಿಷಬ್ ಶೆಟ್ಟಿ 'ಬೆಲ್ ಬಾಟಂ-2'ಗೆ ಎಂಟ್ರಿ ಕೊಟ್ಟ 'ಯಜಮಾನ'ನ ಬಸಣ್ಣಿ

  |

  ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಸದ್ಯ ಹೀರೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಹೀರೋ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟನೆಯ ಜೊತೆಗೆ ನಿರ್ದೇಶನದಲ್ಲೂ ಬ್ಯುಸಿಯಾಗಿರುವ ರಿಷಬ್ ಬೆಲ್ ಬಾಟಂ-2 ಮೂಲಕ ಮತ್ತೆ ಡಿಟೆಕ್ಟಿವ್ ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  ಜಯತೀರ್ಥ ನಿರ್ದೇಶನದ ಬೆಲ್ ಬಾಟಂ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಸೀಕ್ವೆಲ್ ಗೆ ತಯಾರಿ ನಡೆಯುತ್ತಿದೆ. ಜನವರಿ 29ರಂದು ಬೆಲ್ ಬಾಟಂ ಸಿನಿಮಾದ ಸೀಕ್ವೆಲ್ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ. ಈಗಾಗಲೆ ಭಾರಿ ಕುತೂಹಲ ಮೂಡಿಸಿರುವ ಬೆಲ್ ಬಾಟಂ-2ಗೆ ಸ್ಯಾಂಡಲ್ ವುಡ್ ಬಸಣ್ಣಿ ಎಂದೇ ಖ್ಯಾತಿಗಳಿಸಿರುವ ನಟಿ ತಾನ್ಯಾ ಹೋಪ್ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

  ಹಿಂದಿ ವೆಬ್ ಸರಣಿ ಲೋಕಕ್ಕೆ ಎಂಟ್ರಿ ಕೊಟ್ಟ 'ಯಜಮಾನ'ನ ಬಸಣ್ಣಿಹಿಂದಿ ವೆಬ್ ಸರಣಿ ಲೋಕಕ್ಕೆ ಎಂಟ್ರಿ ಕೊಟ್ಟ 'ಯಜಮಾನ'ನ ಬಸಣ್ಣಿ

  ಹೌದು, ಬೆಲ್ ಬಾಟಮ್-2ಗೆ ಹೊಸ ಎಂಟ್ರಿ ಅಂದರೆ ತಾನ್ಯ ಹೋಪ್. ಉಳಿದಂತೆ ನಟಿ ಹರಿಪ್ರಿಯಾ, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ ಇರಲಿದ್ದಾರೆ ಎನ್ನಲಾಗುತ್ತಿದೆ. ತಾನ್ಯಾ ಹೋಪ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ತಾನ್ಯಾ ತಮಿಳು ಮತ್ತು ತೆಲುಗು ಸಿನಿಮಾಗಲ್ಲೂ ನಟಿಸುತ್ತಿದ್ದಾರೆ. ಹಿಂದಿಯ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

  ಇದೀಗ ರಿಷಬ್ ಜೊತೆ ನಟಿಸಲು ಸಜ್ಜಾಗಿದ್ದಾರೆ. 2019ರಲ್ಲಿ ಬೆಲ್ ಬಾಟಂ ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತ್ತು. ರಿಷಬ್ ಶೆಟ್ಟಿ ಸಿನಿಮಾದಲ್ಲಿ ಡಿಟೆಕ್ಟಿವ್ ದಿವಾಕರ್ ಆಗಿ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ನಾಯಕನಾಗಿ ಮಿಂಚಿದ್ದ ರಿಷಬ್ ಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

  KGF ಮೀರಿಸಲಿದೆ ಸಲಾರ್ | Filmibeat Kannada

  ಇದೀಗ ಮತ್ತೆ ಬೆಲ್ ಬಾಟಂ-2 ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ತಾನ್ಯಾ ಹೋಪ್ ಎಂಟ್ರಿ ಇನ್ನು ಅಧಿಕೃತವಾಗಿಲ್ಲ. ಚಿತ್ರದ ಮುಹೂರ್ತ ದಿನ ಬಹಿರಂಗ ಪಡಿಸುವ ಸಾಧ್ಯತೆ ಇದೆ. ರೆಟ್ರೊ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ. ಪಾರ್ಟ್-2 ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

  English summary
  Basanni fame Actress Tanya hope to joins Rishab Shetty's Bell Bottom-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X