For Quick Alerts
  ALLOW NOTIFICATIONS  
  For Daily Alerts

  ಒಂದೇ ದಿನ ತಾನ್ಯ 2 ಸಿನಿಮಾ : 'ಯಜಮಾನ'ನಿಗೆ ಬಸಣ್ಣಿಯೇ ಕಾಂಪಿಟೇಶನ್

  |

  ಬಸಣ್ಣಿ ಬೆಡಗಿ ಈಗ ಕರ್ನಾಟಕದ ತುಂಬ ಫೇಮಸ್ ಆಗಿದ್ದಾರೆ. 'ಯಜಮಾನ'ನ ಜೊತೆಗೆ ಕುಣಿದ ಬಸಣ್ಣಿಯನ್ನು ನೋಡಿದ ಹುಡುಗರು ಅದೇ ಗುಂಗಿನಲ್ಲಿ ಇದ್ದಾರೆ. ಅಂದಹಾಗೆ, ಚಿತ್ರದಲ್ಲಿ ಬಸಣ್ಣಿಯಾಗಿ ಕಾಣಿಸಿಕೊಂಡಿರುವುದು ನಟಿ ತಾನ್ಯ ಹೋಪ್.

  ತಾನ್ಯ ಹೋಪ್ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಾಂಚ್ ಆಗುತ್ತಿದ್ದಾರೆ. ತಮ್ಮ ಮೊದಲ ಕನ್ನಡ ಸಿನಿಮಾ ಬಿಡುಗಡೆಯಾಗುವುದಕ್ಕೆ ಮೊದಲೇ ಇನ್ನೆರಡು ದೊಡ್ಡ ಅವಕಾಶ ಅವರ ಪಾಲಾಗಿವೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ತಾನ್ಯ ನಟಿಸುತ್ತಿದ್ದಾರೆ.

  'ಯಜಮಾನ' ಚಿತ್ರದಲ್ಲಿ ಇದನ್ನು ಮಾತ್ರ ಮಿಸ್ ಮಾಡ್ಕೋಬೇಡಿ 'ಯಜಮಾನ' ಚಿತ್ರದಲ್ಲಿ ಇದನ್ನು ಮಾತ್ರ ಮಿಸ್ ಮಾಡ್ಕೋಬೇಡಿ

  'ಯಜಮಾನ'ನ ಬಿಡುಗಡೆಗೆ ಎಲ್ಲ ಸಿದ್ಧತೆ ನಡೆದಿದೆ. ತಾನ್ಯ ಕೂಡ ಸಿನಿಮಾದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ. ಆದರೆ, ಮತ್ತೊಂದು ಕಡೆ ಅವರ ಮತ್ತೊಂದು ಚಿತ್ರ ಅದೇ ದಿನ ಬಿಡುಗಡೆಯಾಗುತ್ತಿದೆ. ಮುಂದೆ ಓದಿ...

  ತಾನ್ಯ ತಮಿಳು ಚಿತ್ರ ರಿಲೀಸ್

  ತಾನ್ಯ ತಮಿಳು ಚಿತ್ರ ರಿಲೀಸ್

  ತಾನ್ಯ ಹೋಪ್ ಅಭಿನಯದ ತಮಿಳು ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ವಿಶೇಷ ಅಂದರೆ, ಆ ಸಿನಿಮಾ ಸಹ ಮಾರ್ಚ್ 1 ರಂದು ಅಂದರೆ, 'ಯಜಮಾನ' ಚಿತ್ರದ ರಿಲೀಸ್ ಆಗುವ ದಿನವೇ ಥಿಯೇಟರ್ ಗೆ ಬರುತ್ತಿದೆ. ಒಂದೇ ದಿನ ತಮ್ಮ ಎರಡೂ ಚಿತ್ರಗಳ ಬಿಡುಗಡೆಗೆ ಕಾಣುತ್ತಿದ್ದಾರೆ ತಾನ್ಯ.

  'ತಡಂ' ಚಿತ್ರದಲ್ಲಿ ನಟನೆ

  'ತಡಂ' ಚಿತ್ರದಲ್ಲಿ ನಟನೆ

  'ತಡಂ' ಎಂಬ ತಮಿಳು ಸಿನಿಮಾದಲ್ಲಿ ತಾನ್ಯ ನಟಿಸಿದ್ದರು. ಈ ಸಿನಿಮಾ ಮಾರ್ಚ್ 1 ರಂದು ತೆರೆಗೆ ಬರುತ್ತಿದೆ. ಅರುಣ್ ವಿಜಯ್ ಚಿತ್ರದ ನಾಯಕನಾಗಿದ್ದಾರೆ. ವಿದ್ಯಾ ಪ್ರದೀಪ್ ಚಿತ್ರದ ಮತ್ತೊಬ್ಬ ನಾಯಕಿ. 'ತಡಂ' ಒಂದು ಥಿಲ್ಲರ್ ಸಿನಿಮಾವಾಗಿದ್ದು, ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

  'ಯಜಮಾನ' ಪ್ರೆಸ್ ಮೀಟ್ ನಲ್ಲಿ ನಡೆದ 6 ವಿಶೇಷ ಕ್ಷಣಗಳು 'ಯಜಮಾನ' ಪ್ರೆಸ್ ಮೀಟ್ ನಲ್ಲಿ ನಡೆದ 6 ವಿಶೇಷ ಕ್ಷಣಗಳು

  ಇದು ಐದನೇ ಸಿನಿಮಾ

  ಇದು ಐದನೇ ಸಿನಿಮಾ

  'ತಡಂ' ತಾನ್ಯ ಹೋಪ್ ನಟನೆಯ ಐದನೇ ಸಿನಿಮಾವಾಗಿದೆ. 2016ರಲ್ಲಿ ತೆಲುಗಿನ 'ನೇನು ಶೈಲಜಾ' ಚಿತ್ರದಲ್ಲಿ ಒಂದು ವಿಶೇಷ ಪಾತ್ರ ಮಾಡುವ ಮೂಲಕ ಆಕೆ ಚಿತ್ರರಂಗಕ್ಕೆ ಕಾಲಿಟ್ಟರು. ಅದರ ಬಳಿಕ ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಯಜಮಾನ' ಅವರ ಮೊದಲ ಕನ್ನಡ ಚಿತ್ರವಾಗಿದೆ.

  ಮುಂದಿನ ಸಿನಿಮಾಗಳು

  ಮುಂದಿನ ಸಿನಿಮಾಗಳು

  'ಯಜಮಾನ' ಬಳಿಕ ತಾನ್ಯಗೆ ಆಫರ್ ಮೇಲೆ ಆಫರ್ ಬರುತ್ತಿದೆ. ಅಭಿಷೇಕ್ ಅಂಬರೀಶ್ ನಟನೆಯ 'ಅಮರ್' ಸಿನಿಮಾದಲ್ಲಿ ತಾನ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್' ಹಾಗೂ 'ಉದ್ಘರ್ಷ' ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. 'ಯಜಮಾನ' ಚಿತ್ರದ ಬಿಡುಗಡೆಯ ಬಳಿಕ ಇನ್ನಷ್ಟು ಆಫರ್ ಗಳು ಅವರ ಪಾಲಾಗಬಹುದು.

  English summary
  Basanni girl Tanya Hope 'Tadam' also releasing with 'Yajamana' movie on the same day (March 1st).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X