Kabzaa Item Song : ಜಾಕ್ವೆಲಿನ್, ನೋರಾ ಅಲ್ಲ, 'ಕಬ್ಜ' ಐಟಂ ಸಾಂಗ್‌ನಲ್ಲಿ ಕುಣಿಯೋದು ಯಾರು ಗೊತ್ತಾ?

ಆರ್‌. ಚಂದ್ರು ನಿರ್ದೇಶನದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಬ್ಜ'. ಏಳು ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಡಿ ಬರ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಕಿಚ್ಚ ಸುದೀಪ್ ಕೂಡ ಕೈ ಜೋಡಿಸಿರುವುದು ಕುತೂಹಲ ಮೂಡಿಸಿದೆ. ಇದೀಗ ಚಿತ್ರದ ಸ್ಪೆಷಲ್ ಸಾಂಗ್ ಬಗ್ಗೆ ಮಾಹಿತಿ ಸಿಕ್ಕಿದೆ.

KGF ರೇಂಜ್‌ನಲ್ಲಿ ಮೂಡಿಬಂದಿರುವ ಮತ್ತೊಂದು ಕನ್ನಡ ಸಿನಿಮಾ ಇದು. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಚಿತ್ರವನ್ನು ಪ್ರೇಕ್ಷಕರು ಮುಂದೆ ತರಲಾಗ್ತಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಕಬ್ಜ' ಚಿತ್ರವನ್ನು ರಿಲೀಸ್ ಮಾಡುವುದಾಗಿ ಆರ್. ಚಂದ್ರು ಘೋಷಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಕೊನೆ ಕ್ಷಣದ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

'ಕಬ್ಜ' ಸಿನಿಮಾದಲ್ಲಿ ಒಂದು ಸ್ಪೆಷಲ್ ಸಾಂಗ್ ಇದೆ. ಆ ಸಾಂಗ್‌ನಲ್ಲಿ ಯಾರು ಕುಣಿತ್ತಾರೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿತ್ತು. ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆರ್‌. ಚಂದ್ರು ಈ ಬಗ್ಗೆ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

'ಐ ಲವ್‌ ಯು' ಸಕ್ಸಸ್ ಬೆನ್ನಲ್ಲೇ ಆರ್‌. ಚಂದ್ರು 'ಕಬ್ಜ' ಸಿನಿಮಾ ಘೋಷಿಸಿದ್ದರು. 7 ಭಾಷೆಗಳಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಇನ್ನು ಫೋಟೊಶೂಟ್ ಮೇಕಿಂಗ್ ವಿಡಿಯೋ ಬಂದಮೇಲೆ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಅಂದಿನಿಂದಲೂ ಸ್ಟಾರ್‌ಕಾಸ್ಟ್, ನಾಯಕಿ ಬಗ್ಗೆ ಸಾಕಷ್ಟು ಚರ್ಚೆ ನಡೀತು. ತೆಲುಗು, ತಮಿಳಿನ ಸ್ಟಾರ್ ನಟಿಯನ್ನು ನಾಯಕಿಯಾಗಿ ಕರೆತರುವುದಾಗಿ ಚಂದ್ರು ಹೇಳಿದ್ದರು. ಅದೇ ರೀತಿ ಶ್ರಿಯಾ ಶರಣ್ ನಾಯಕಿಯಾಗಿ ಆಗಮಿಸಿದ್ದರು.

'ಕಬ್ಜ' ಸ್ಪೆಷಲ್‌ ಸಾಂಗ್‌ನಲ್ಲಿ 'ಬಸಣ್ಣಿ'

'ಕಬ್ಜ' ಸ್ಪೆಷಲ್‌ ಸಾಂಗ್‌ನಲ್ಲಿ 'ಬಸಣ್ಣಿ'

ಮಾಸ್ ಕಮರ್ಷಿಯಲ್ ಸಿನಿಮಾ ಅಂದಮೇಲೆ ಐಟಂ ಸಾಂಗ್ ಇರಲೇಬೇಕು ಎನ್ನುವುದು ಕೆಲವರ ವಾದ. 'ಕಬ್ಜ' ಡ್ಯಾನ್ಸ್ ನಂಬರ್‌ನಲ್ಲಿ ಯಾರು ಕುಣಿತ್ತಾರೆ ಎನ್ನುವ ಬಗ್ಗೆ ಕೂಡ ಭಾರೀ ಕುತೂಹಲ ಇತ್ತು. ಬಾಲಿವುಡ್‌ ನಟಿಯರ ಹೆಸರು ಕೂಡ ಕೇಳಿಬಂದಿತ್ತು. ಜಾಕ್ವೆಲಿನ್ ಫರ್ನಾಂಡಿಸ್ ಅಥವಾ ನೋರಾ ಫತೇಹಿ ಸ್ಪೆಷಲ್‌ ಸಾಂಗ್‌ಗೆ ಬಂದು ಹೆಜ್ಜೆ ಹಾಕಿದರೂ ಅಚ್ಚರಿ ಪಡಬೇಕಿಲ್ಲ ಎನ್ನಲಾಗಿತ್ತು. ಸಿನಿಮಾ ಹಿಂದಿಗೂ ಡಬ್ ಆಗಿ ರಿಲೀಸ್ ಆಗುತ್ತಿರುವುದರಿಂದ ಈ ಮಾತು ನಿಜವಾಗಬಹುದು ಎಂದು ಕೆಲವರು ಅಂದುಕೊಂಡಿದ್ದರು. ಆದರೆ 'ಕಬ್ಜ' ಸ್ಪೆಷಲ್‌ ಸಾಂಗ್‌ನಲ್ಲಿ ತಾನ್ಯಾ ಹೋಪ್ ಕುಣಿಯುವದು ಪಕ್ಕಾ ಆಗಿದೆ.

'ಯಜಮಾನ' ಚಿತ್ರದಲ್ಲಿ ಬಸಣ್ಣಿ ಸ್ಟೆಪ್ಸ್

'ಯಜಮಾನ' ಚಿತ್ರದಲ್ಲಿ ಬಸಣ್ಣಿ ಸ್ಟೆಪ್ಸ್

ಸದ್ಯ ಸಿಗುತ್ತಿರುವ ಮಾಹಿತಿ ಪ್ರಕಾರ 'ಕಬ್ಜ' ಐಟಂ ಸಾಂಗ್ ಶೂಟಿಂಗ್‌ಗೆ ಸಕಲ ಸಿದ್ಧತೆ ನಡೆದಿದೆ. 'ಯಜಮಾನ' ಚಿತ್ರದಲ್ಲಿ ಬಸಣ್ಣಿ ಆಗಿ ದರ್ಶನ್ ಜೊತೆ ಹೆಜ್ಜೆ ಹಾಕಿದ್ದ ತಾನ್ಯಾ 'ಕಬ್ಜ' ಕೋಟೆಯಲ್ಲೂ ಬಿಂದಾಸ್ ಆಗಿ ಕುಣಿಯಲಿದ್ದಾರೆ. 'ರಾ ರಾ ರಕ್ಕಮ್ಮ' ಎಂದು ಸುದೀಪ್ ಹಾಗೂ ಜಾಕ್ವೆಲಿನ್‌ನ ಕುಣಿಸಿದ್ದ ತೆಲುಗಿನ ಜಾನಿ ಮಾಸ್ಟರ್ ಈ ಹಾಡಿಗೂ ಕೊರಿಯೋಗ್ರಫಿ ಮಾಡಲಿದ್ದಾರೆ. ಹಾಗಾಗಿ ಸಹಜವಾಗಿಯೇ 'ಕಬ್ಜ' ಸ್ಪೆಷಲ್ ಸಾಂಗ್ ಕುತೂಹಲ ಮೂಡಿಸಿದೆ. ರವಿ ಬಸ್ರೂರು ಹಾಡಿಗೆ ಟ್ಯೂನ್ ಕಂಪೋಸ್ ಮಾಡ್ತಿದ್ದಾರೆ.

2 ಭಾಗಗಳಾಗಿ 'ಕಬ್ಜ' ರಿಲೀಸ್

2 ಭಾಗಗಳಾಗಿ 'ಕಬ್ಜ' ರಿಲೀಸ್

'ಕಬ್ಜ' ಸ್ಪೆಷಲ್ ಸಾಂಗ್ ಶೂಟಿಂಗ್‌ಗಾಗಿ ನೈಸ್ ರೋಡ್ ಹೊರಭಾಗದಲ್ಲಿ 4 ಎಕರೆ ಜಾಗದಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗುತ್ತಿದೆ. ಫೆಬ್ರವರಿ 11ರಿಂದ 6 ದಿನಗಳ ಕಾಲ ಅಲ್ಲಿ ಸಾಂಗ್ ಚಿತ್ರೀಕರಣ ನಡೆಯಲಿದೆ. ಉಪೇಂದ್ರ, ತಾನ್ಯ ಹೋಪ್ ಜೊತೆ ಒಂದಷ್ಟು ಡ್ಯಾನ್ಸರ್ಸ್ ಸಾಂಗ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ. 1940ರಿಂದ 1980ರ ನಡುವಿನ ಕಾಲ್ಪನಿಕ ಕಥೆಯನ್ನು 'ಕಬ್ಜ' ಚಿತ್ರದಲ್ಲಿ ಹೇಳಲಾಗುತ್ತಿದೆ. ರೆಟ್ರೋ ಸ್ಟೈಲ್‌ನಲ್ಲಿ ಈ ಗ್ಯಾಂಗ್‌ಸ್ಟರ್ ಕಥೆಯನ್ನು ಆರ್. ಚಂದ್ರು ಕಟ್ಟಿಕೊಡುತ್ತಿದ್ದಾರೆ. 2 ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿ ಆಗಿ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ.

More from Filmibeat

English summary
Basanni tanya hope features in an item song in Upendra Starrer Kabza. A huge set has to be constructed to shoot a special song in the film. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X