»   » ಅದೀಗ ಸಾರಾ ಗೋವಿಂದ ಸಂಘ !

ಅದೀಗ ಸಾರಾ ಗೋವಿಂದ ಸಂಘ !

Posted By: Staff
Subscribe to Filmibeat Kannada

ನಿರ್ಮಾಪಕರ ಸಂಘಕ್ಕೆ ಸಾರಾ ಗೋವಿಂದು ಅಧ್ಯಕ್ಷರಾಗಿ ಆಯ್ಕೆಯಾಗುವ ಎಲ್ಲ ಸೂಚನೆಗಳೂ ಕಂಡು ಬರುತ್ತಿವೆ. ಈ ಅನಿರೀಕ್ಷಿತ ಬೆಳವಣಿಗೆಯನ್ನು ಉದ್ಯಮ ನಿರೀಕ್ಷಿಸಿರಲಿಲ್ಲವಾದರೂ ಈಗಿನ ಅಧ್ಯಕ್ಷ ಬಸಂತ್‌ಕುಮಾರ್‌ ಪಾಟೀಲರ ಗೈರು ಹಾಜರಿಯಲ್ಲಿ ಇದು ನಡೆದುಹೋಗಿದೆ.


ಬಸಂತಕುಮಾರ್‌ ಪಾಟೀಲರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದೂ, ಅವರಿಂದ ಇಡೀ ನಿರ್ಮಾಪಕರ ಕುಲಕ್ಕೇ ಅವಮಾನವಾಗುತ್ತಿದೆಯೆಂದೂ, ಅವರು ತಾವು ಚೇಂಬರ್‌ಗಿಂತ ದೊಡ್ಡವರೆಂದೂ ಭಾವಿಸಿದ್ದಾರೆಂದೂ ದೂರಿರುವ ಏಳು ನಿರ್ಮಾಪಕರು ಸಂಘಕ್ಕೆ ರಾಜೀನಾಮೆ ನೀಡಿದ್ದಾರೆ.

ಹೊಸ ಅಧ್ಯಕ್ಷ ಸಾರಾ ಗೋವಿಂದು ಆಯ್ಕೆಯಾಗುತ್ತಾರೆ ನಿಜ. ಆದರೆ ಸಾರಾ ಅವರನ್ನು ಬೆಂಬಲಿಸಲು ಬಹಳಷ್ಟು ನಿರ್ಮಾಪಕರು ಒಪ್ಪುವುದಿಲ್ಲ ಹಾಗೂ ಬಸಂತ್‌ ಅಧ್ಯಕ್ಷರಾಗುತ್ತಿದ್ದಾಗ ಸಿಗುತ್ತಿದ್ದ ಬಿಟ್ಟಿ ಮೀಟಿಂಗ್‌ ಹಾಲ್‌ನ ಅನುಕೂಲ ತಪ್ಪಿಹೋಗುತ್ತದೆ ಎಂಬ ನೆಪಗಳು ಗಾಂಧಿನಗರದಲ್ಲಿ ಅಡ್ಡಾಡುತ್ತಿವೆ.

ಕೆಲವು ದಿನಗಳಲ್ಲಿ ಎಲ್ಲವೂ ಇತ್ಯರ್ಥವಾಗಲಿದೆ.

English summary
Sa.Ra Govindu as president of Producers association ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada